ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಧಾರಾವಾಹಿಯಲ್ಲಿ ವಿಕ್ರಾಂತ್ ವಸಿಷ್ಠ ಆಗಿ ಅಭಿನಯಿಸುತ್ತಿರುವ ನಟ ಅಭಿಷೇಕ್ ದಾಸ್, ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ಹಾಗಂತ ಸ್ವತ: ಅವರೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ರೆಬಲ್ ಸ್ಟಾರ್ ಜೊತೆ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದಲ್ಲಿ ನಟಿಸಿದ್ದ ಅಭಿಷೇಕ್, ಆ ಚಿತ್ರದಲ್ಲಿ ಅಂಬಿ ಜೊತೆ ಇರುವ ಫೋಟೋವೊಂದರನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. "ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ರಿಲೀಸ್ ಆಗಿ 2 ವರ್ಷಗಳಾಯ್ತು. ಸಿನಿಮಾ ಬಿಡುಗಡೆಯಾಗಿ 2 ವರ್ಷಗಳಾಯ್ತು ಎನ್ನುವುದು ಇಲ್ಲಿ ವಿಷಯವಲ್ಲ. ನಾನು ಇಂತಹ ಲೆಜೆಂಡ್ ಜೊತೆಗೆ ನಟಿಸಿದ್ದೇನೆ ಎಂಬುದೇ ಸಂತಸದ ಹಾಗೂ ಮುಖ್ಯವಾದ ವಿಚಾರ. ಅಷ್ಟೇ ಅಲ್ಲ, ಈ ಫೋಟೋದಲ್ಲಿ ಹಲವು ನೆನಪುಗಳಿವೆ. ಅಂಬಿ ಅಂಕಲ್ ನನಗೆ ಆಶೀರ್ವದಿಸಿ " ಎಂದು ಅಭಿಷೇಕ್ ದಾಸ್ ಬರೆದುಕೊಂಡಿದ್ದಾರೆ.