'ಡಿ ಕೆ ಬೋಸ್' ಎಂಬುದು ಬಹಳ ಜನ ಬಳಸುವ ಬೈಗುಳ. ಈಗ ಇದೇ ಹೆಸರಿನ ಕನ್ನಡ ಚಿತ್ರವೊಂದು ಇಂದು ತೆರೆ ಕಂಡಿದೆ. ಈ ಸಿನಿಮಾ ವಿಮರ್ಶೆ ಇಲ್ಲಿದೆ ನೋಡಿ...
ಭರತ್ ಮತ್ತು ಅಮರ್ (ನಾಯಕರು) ಅನಾಥರು. ಒಟ್ಟಿಗೆ ಬೆಳೆಯುತ್ತಾರೆ. ಸಣ್ಣಪುಟ್ಟ ಕೆಲಸ ಬಿಟ್ಟು ಒಂದು ದೊಡ್ಡ ಡೀಲ್ಗೆ ಕೈ ಹಾಕುತ್ತಾರೆ. ಅವರ ಬಳಿ ಮೋಸ ಮಾಡಿ ಪಡೆದ ಒಂದು ವಜ್ರದ ಉಂಗುರ ಇರುತ್ತೆ. ಅದು ಐದು ಲಕ್ಷ ಬೆಲೆ. ಅದರ ಜೊತೆಗೆ 19 ನಕಲಿ ವಜ್ರದ ತುಂಡುಗಳನ್ನು ಸೇರಿಸಿ ಮಂಗಳೂರಿನಲ್ಲಿ ಕಾಡು ಹುಲಿ ಎಂಬ ಡಾನ್ ಜೊತೆ ವ್ಯವಹಾರ ಕುದುರಿಸುತ್ತಾರೆ. 20 ವಜ್ರದ ಬೆಲೆ 40 ಲಕ್ಷ ಎಂದು ಕಟ್ಟಲಾಗುತ್ತದೆ. ಆದರೆ, ಅದರಲ್ಲಿ ನಕಲಿ ವಜ್ರಗಳು ಬೆಳಕಿಗೆ ಬಂದಾಗ ಭರತ್ ಹಾಗೂ ರಾಮ್ ಪರಿಸ್ಥಿತಿಯು ಬದಲಾಗಿರುತ್ತದೆ. ತಮ್ಮ ಊರಿಗೆ ಇನ್ನೇನು ಸೇರಬೇಕು ಅನ್ನುವಷ್ಟರಲ್ಲಿ ಮೂರು ವಿಚಾರಗಳು ಪ್ರಸ್ತಾಪಕ್ಕೆ ಬರುತ್ತವೆ. ಒಂದು ಭರತ್ ಹಾಗೂ ನಿಶ ಪ್ರೇಮ, ಎರಡನೆಯದು ಲೋಕಲ್ ರಾಜಕೀಯ ವ್ಯಕ್ತಿ ಈ ಯುವಕರಿಂದ ಅನುಭವಿಸಿದ ಅವಮಾನಕ್ಕೆ ತಿರುಗೇಟಿಗೆ ಕಾಯುತ್ತಾನೆ. ಕೊನೆಯದು ಪೊಲೀಸರ ಹುಡುಕಾಟ. ಯಾರು ಯಾವ ರೀತಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಂಡು ಡಿಕೆ ಬೋಸ್ ಆಗುತ್ತಾರೆ ಎಂಬುದು ಮುಂದಿನ ಚಿತ್ರಕಥೆ.