ಕರ್ನಾಟಕ

karnataka

ETV Bharat / sitara

'ಅರಬ್ಬೀ ಕಡಲ ತೀರದಲ್ಲಿ' ಒಂದು ತೀರದ ದಾಹ - ನಾಯಕ ವಂಶಿ ಕೃಷ್ಣ ಮನೋಹರ್

ಅರಬ್ಬೀ ಕಡಲ ತೀರದಲ್ಲಿ ಚಿತ್ರ ವಿಮರ್ಶೆ

By

Published : Mar 15, 2019, 2:17 PM IST

ಇಂದು ತೆರೆ ಕಂಡಿರುವ ಸಿನಿಮಾ 'ಅರಬ್ಬೀ ಕಡಲ ತೀರದಲ್ಲಿ' ಒಂದು ತೀರದ ದಾಹ ಇದೆ. ನಂಬಿಕೆ-ದ್ರೋಹ ಉಂಟು. ಆಮಾಯಕನ ಪ್ರಾಣಕ್ಕೆ ಕುತ್ತು ಇದೆ. ಅತಿ ಆಸೆ ಗತಿ ಕೆಡಿಸುತ್ತದೆ ಎಂಬುದಕ್ಕೆ ಇಲ್ಲಿ ಸರಿಯಾದ ಉತ್ತರವಿದೆ.

ನಾಯಕ ವಂಶಿ ಕೃಷ್ಣ ಮನೋಹರ್ (ಕೃಷ್ಣೆ ಗೌಡ) ಪ್ರಸಿದ್ಧ ಛಾಯಾಗ್ರಾಹಕ. ಇವನ ಮೊದಲನೇ ಹೆಂಡತಿ ವೇದ (ರಂಜಿತ ರಾವ್). ಕೃಷ್ಣ ತನ್ನಲ್ಲಿ ಏನೋ ದೋಷವಿದೆ ಎಂದು ವೈದ್ಯರನ್ನು ಸಂಪರ್ಕಿಸುತ್ತಾನೆ. ಆದರೆ, ಅವನ ಜೀವನದಲ್ಲಿ ನಡೆದಿರುವುದೇ ಬೇರೆಯಾಗಿರುತ್ತೆ. ಅವನ ಆ ಸ್ಥಿತಿಗೆ ಬೇರೆಯವರ ಅತಿಯಾಸೆಯೇ ಕಾರಣವಾಗಿರುತ್ತದೆ. ಇದರ ನಡುವೆಯೆ ಕೃಷ್ಣನಿಗೆ ಮತ್ತೊಬ್ಬ ಸುಂದರ ಹುಡುಗಿಯ ಜೊತೆ ಪ್ರೇಮಾಂಕುರವಾಗಿ ಮದುವೆಗೆ ತಿರುಗುತ್ತದೆ. ಆಗಲೇ ಅರಬ್ಬೀ ಕಡಲ ತೀರದ ಘಾಟು ಪ್ರೇಕ್ಷಕನಿಗೆ ರಾಚುವುದು.

ಕೃಷ್ಣ ಅವರ ಎರಡನೇ ಹೆಂಡತಿ ಮಧುಲತಾ (ವೈಷ್ಣವಿ) ಹಾಕಿರುವ ಸಂಚೆ ಘೋರವಾಗಿರುತ್ತೆ. ಈ ಸಂಚು ಏನಾಗುವುದು? ಕೃಷ್ಣ ಅನುಭವಿಸಿದ್ದ ಯಾತನೆಗೆ ತನ್ನ ಊರಿನ ಕೊಮ್ರ (ಸುಂದರ್ ವೀಣ) ಹೇಗೆ ಕನೆಕ್ಟ್ ಆಗುತ್ತಾನೆ ? ಎಂಬುದನ್ನು ತಿಳಿಯಲು ಚಿತ್ರಮಂದಿರಕ್ಕೆ ಹೋಗಬೇಕು.

ಕೊನೆಗೆ ಒಬ್ಬ ಆಸೆ ಬುರುಕನ ಹತ್ಯೆಯಾಗಿ, ಅಮಾಯಕನಿಗೆ ಎದೆ ಜೆಲ್ಲ್ ಎನ್ನುವಂತೆ ಚಿತ್ರಕಥೆ ರಚಿಸಿ ಹೇಳಿದ್ದಾರೆ ನಿರ್ದೇಶಕ ಉಮಾಕಾಂತ್. ಚಿತ್ರದ ಎರಡನೇ ಭಾಗದ ಸಾರಾಂಶ ಪ್ರೇಕ್ಷಕನನ್ನು ಹಿಡಿದು ಕೂಡಿಸುವುದು.ಈ ಚಿತ್ರ ಥ್ರಿಲ್ಲರ್ ಕಥಾ ವಸ್ತು ಇಷ್ಟ ಪಡುವವರಿಗೆ ಹೇಳಿ ಮಾಡಿಸಿದ ಚಿತ್ರ.

ಕೃಷ್ಣೆ ಗೌಡ ಬಹಳ ವರ್ಷಗಳ ಬಳಿಕ ದ್ವಿಪಾತ್ರದಲ್ಲಿ ಮಿಂಚಿದ್ದಾರೆ. ವೈಷ್ಣವಿ ಮೆನನ್ ಪಾತ್ರ ಪೋಷಣೆ ಬಹಳ ಗಟ್ಟಿಯಾಗಿದೆ. ಸುಂದರ್ ವೀಣ ಅವರ ಪಾತ್ರ ಬಹಳ ವಿಭಿನ್ನ ಹಾಗೂ ವಿಚಿತ್ರವಾಗಿದೆ. ಒಂದು ರೊಮ್ಯಾಂಟಿಕ್ ಗೀತೆ ಕಡಲ ತೀರದಲ್ಲಿ ಚನ್ನಾಗಿ ಮೂಡಿಬಂದಿದೆ. ಛಾಯಾಗ್ರಕ ಎಂ.ಆರ್ ಸೀನು (ಜೋಗಿ ಸೀನು) ಸುಂದರವಾದ ಲೋಕೇಶನ್ ಸೆರೆ ಹಿಡಿದಿದ್ದಾರೆ.

ABOUT THE AUTHOR

...view details