ಕೆಜಿಎಫ್-2 ಚಿತ್ರದ ಶೂಟಿಂಗ್ನಲ್ಲಿ ಸಕ್ರಿಯರಾಗಿರುವ ರಾಕಿಂಗ್ ಸ್ಟಾರ್ ಯಶ್ ಇಂದು ವಿಶೇಷ ಸಂಭ್ರಮವೊಂದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಕೆಜಿಎಫ್ ಚಿತ್ರ ಬಿಡುಗಡೆ ವೇಳೆ ವೈಯಕ್ತಿಕ ಜೀವನದಲ್ಲಿ ಅಪ್ಪನ ಸ್ಥಾನಕ್ಕೆ ಬಡ್ತಿ ಪಡೆದಿದ್ದ ಯಶ್, ಇಂದು ತಮ್ಮ ಮುದ್ದಾದ ಮಗಳಿಗೆ ನಾಮಕರಣ ಮಾಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಯಶ್-ರಾಧಿಕಾ ದಂಪತಿ ತಮ್ಮ ಪುತ್ರಿಗೆ 'ಐರಾ' ಎಂದು ಹೆಸರನ್ನಿಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಎರಡೂ ಕುಟುಂಬದ ಆಪ್ತರು ಭಾಗವಹಿಸಿದ್ದರು.
ತಮ್ಮ ಮಗಳ ನಾಮಕರಣದ ಪುಟ್ಟ ವಿಡಿಯೋ ಒಂದನ್ನು ಯಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಕಾರ್ಯಕ್ರಮದ ಝಲಕ್ ಜೊತೆಗೆ ಕೊನೆಯಲ್ಲಿ ಮಗಳ ಹೆಸರನ್ನು ರಿವೀಲ್ ಮಾಡಿದ್ದಾರೆ. ನಮ್ಮದೇ ಉಸಿರಿನ ಮಗಳೆಂಬ ಕನಸಿಗೆ ಇಂದು ಹೆಸರಿಟ್ಟ ಸಂಭ್ರಮ, ಹರಸಿ.. ಹಾರೈಸಿ ಎಂದು ಯಶ್ ಕ್ಯಾಪ್ಶನ್ ನೀಡಿದ್ದಾರೆ.