ಕರ್ನಾಟಕ

karnataka

ETV Bharat / sitara

ಫಾರಂ ಹೌಸ್​​​​ನಲ್ಲಿ ಕೃಷಿ ಮಾಡೋದಕ್ಕೆ ಹೊರಟ ರಾಕಿ ಭಾಯ್!

ಹಾಸನ ಜಿಲ್ಲೆಯ, ತಿಮ್ಲಾಪುರ ಗ್ರಾಮದಲ್ಲಿ 80 ಎಕರೆ ಜಮೀನನ್ನು ಯಶ್ ಖರೀದಿಸಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಭೂಮಿಯಲ್ಲಿ ಯಶ್ ಕೃಷಿ ಮಾಡುವ ಒಲವು ತೋರಿಸಿದ್ದಾರೆ. ಹೀಗಾಗಿ ಹಾಸನದ ತಿಮ್ಲಾಪುರ ಬಳಿಯ ತಮ್ಮ ಜಮೀನಿನ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಯಶ್, ಜಮೀನನ್ನು ಹದಗೊಳಿಸಿ ಕೃಷಿ ಮಾಡಲಿದ್ದಾರೆ ಎನ್ನಲಾಗಿದೆ.

Yash_Farming_Own_Farm_House_
ಫಾರಂ ಹೌಸ್​​​​ನಲ್ಲಿ ಕೃಷಿ ಮಾಡೋದಕ್ಕೆ ಹೊರಟ ರಾಕಿ ಬಾಯ್!

By

Published : Apr 12, 2021, 9:10 PM IST

Updated : Apr 12, 2021, 9:28 PM IST

ಕೆಜಿಎಫ್ ಸಿನಿಮಾ‌ ಮೂಲಕ ಭಾರತೀಯ ಚಿತ್ರರಂಗದ ತನ್ನದೇ ಛಾಪು ಮೂಡಿಸಿರೋ ನಟ‌ ರಾಕಿಂಗ್ ಸ್ಟಾರ್ ಯಶ್!. ಸದ್ಯ ಕೆಜಿಎಫ್ 2 ಚಿತ್ರೀಕರಣ ಮುಗಿಸಿರೋ ಯಶ್, ಕೆಲ ದಿನಗಳ ಹಿಂದೆ ಜಮೀನು ವಿವಾದ ವಿಷಯವಾಗಿ ಯಶ್ ಸುದ್ದಿಯಲ್ಲಿದ್ದರು. ಇದೀಗ ಅದೇ ಜಮೀನಿನಲ್ಲಿ ಕೃಷಿ ಮಾಡುವ ಯೋಚನೆಯಲ್ಲಿದ್ದಾರೆ‌.

ಫಾರಂ ಹೌಸ್​​​​ನಲ್ಲಿ ಕೃಷಿ ಮಾಡೋದಕ್ಕೆ ಹೊರಟ ರಾಕಿ ಭಾಯ್!

ಹೌದು ಹಾಸನ ಜಿಲ್ಲೆಯ, ತಿಮ್ಲಾಪುರ ಗ್ರಾಮದಲ್ಲಿ 80 ಎಕರೆ ಜಮೀನನ್ನು ಯಶ್ ಖರೀದಿಸಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಭೂಮಿಯಲ್ಲಿ ಕೃಷಿ ಮಾಡುವ ಒಲವು ತೋರಿಸಿದ್ದಾರೆ. ಹೀಗಾಗಿ ಹಾಸನದ ತಿಮ್ಲಾಪುರ ಬಳಿಯ ತಮ್ಮ ಜಮೀನಿನ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಅವರು ಜಮೀನನ್ನು ಹದಗೊಳಿಸಿ ಕೃಷಿ ಮಾಡಲಿದ್ದಾರೆ ಎನ್ನಲಾಗಿದೆ. ಮೊದಲಿಂದಲೂ ಕೃಷಿ ಮತ್ತು ರೈತರ ಬಗ್ಗೆ ಗೌರವ ಹೊಂದಿರುವ ಯಶ್ ಇದೀಗ ತಾವೇ ಸ್ವತಃ ಕೃಷಿ ಮಾಡಲು ಮುಂದಾಗಿದ್ದಾರೆ.

ಫಾರಂ ಹೌಸ್​​​​ನಲ್ಲಿ ಕೃಷಿ ಮಾಡೋದಕ್ಕೆ ಹೊರಟ ರಾಕಿ ಭಾಯ್!
ಫಾರಂ ಹೌಸ್​​​​ನಲ್ಲಿ ಕೃಷಿ ಮಾಡೋದಕ್ಕೆ ಹೊರಟ ರಾಕಿ ಭಾಯ್!
ಯಶ್ ತಾವೇ ಮುಂದಾಳತ್ವವಹಿಸಿ ತಮ್ಮ ಫಾರಂ ಹೌಸ್ ನಲ್ಲಿ ಜೆಸಿಬಿಯಿಂದ ಜಮೀನಿನಲ್ಲಿ ಉಳುವ ಮೂಲಕ ಸ್ವಚ್ಚತಾ ಕೆಲಸಗಳನ್ನ ಮಾಡ್ತಾ ಇದ್ದಾರೆ. ಮತ್ತೊಂದು ಕಡೆ ಮಳೆ ನೀರನ್ನ ಶೇಖರಣೆ ಮಾಡಲು ಕೊಳವೆಬಾವಿ ತೆಗೆಯಲಾಗುತ್ತಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಈ ಮಳೆ ನೀರಿನಿಂದ ತೋಟಗಾರಿಕೆ ಮಾಡುವ ಉದ್ದೇಶ ಕೂಡಾ ರಾಕಿಭಾಯ್​ ಅವರದ್ದಾಗಿದೆ. ಸದ್ಯ ಯಶ್ ಹಾಸನದ ತಮ್ಮ ಫಾರಂ ಹೌಸ್ ನಲ್ಲಿ ಕೆಲಸ ಮಾಡುಸುತ್ತಿರುವ ಫೋಟೋಗಳು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಫಾರಂ ಹೌಸ್​​​​ನಲ್ಲಿ ಕೃಷಿ ಮಾಡೋದಕ್ಕೆ ಹೊರಟ ರಾಕಿ ಭಾಯ್!
Last Updated : Apr 12, 2021, 9:28 PM IST

ABOUT THE AUTHOR

...view details