ಕರ್ನಾಟಕ

karnataka

ETV Bharat / sitara

ತಮ್ಮ ಹೊಟ್ಟೆ ಆಡಿಕೊಂಡವರಿಗೆ ಟಾಂಗ್ ಕೊಟ್ಟ ಶ್ರೀ ಕೃಷ್ಣ..! - ಚಾಲೆಂಜಿಂಗ್ ಸ್ಟಾರ್ ದರ್ಶನ್

ನನ್ನ ಹೊಟ್ಟೆ ಇರಲಿ, ಬಿಡಲಿ. ನನ್ನ ಬಿಟ್ಟು ಕನ್ನಡ ಚಿತ್ರರಂಗದಲ್ಲಿ ಬೇರೆ ಯಾರಾದರೂ ಕೃಷ್ಣನ ಪಾತ್ರ ಮಾಡಬಹುದು ಎಂಬುದನ್ನು ಹೇಳಿ ಎಂದು ಪ್ರಶ್ನಿಸಿದರು.

v.ravichandran

By

Published : Aug 12, 2019, 1:57 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹಲವು ವಿಶೇಷತೆಗಳಿಂದ ತುಂಬಿರುವ ಕುರುಕ್ಷೇತ್ರ ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರ ಬರುತ್ತಿದೆ. ಚಿತ್ರದಲ್ಲಿ ನಟಿಸಿರುವ ಎಲ್ಲ ಕಲಾವಿದರು ಅದ್ಭುತವಾಗಿ ಅಭಿನಯಿಸಿದ್ದಾರೆ ಎಂದು ವಿಮರ್ಶಕರು ಹಾಗೂ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕುರುಕ್ಷೇತ್ರ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕೃಷ್ಣನ ಪಾತ್ರ ನಿಭಾಯಿಸಿದ್ದಾರೆ.ಈ ಪಾತ್ರಕ್ಕೆ ರವಿಮಾಮ ಆಯ್ಕೆಯಾಗಿದ್ದ ವೇಳೆ ಹಲವು ಟೀಕೆಗಳು ಕೇಳಿ ಬಂದಿದ್ದವು. ಹೊಟ್ಟೆ ಬಿಟ್ಟುಕೊಂಡಿರುವ ರವಿಚಂದ್ರನ್ ಈ ಪಾತ್ರಕ್ಕೆ ಸೂಟ್ ಆಗ್ತಾರಾ? ಎನ್ನುವ ಪ್ರಶ್ನೆ ಗಾಂಧಿನಗರದಲ್ಲಿ ಕೇಳಿ ಬಂದಿತ್ತು. ಆದರೆ, ಸಿನಿಮಾ ನೋಡಿದ ಮೇಲೆ ಕೃಷ್ಣನ ಪಾತ್ರದಲ್ಲಿ ರವಿಚಂದ್ರನ್​ ಅವರ ಅಭಿನಯ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಕೃಷ್ಣನ ಪಾತ್ರದ ಬಗ್ಗೆ ರವಿಚಂದ್ರನ್ ಮಾತು

ಅಂದು ತಮ್ಮ ಹೊಟ್ಟೆ ಬಗ್ಗೆ ಆಡಿಕೊಂಡವರಿಗೆ 'ರವಿ ಬೋಪಣ್ಣ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಉತ್ತರ ಕೊಟ್ಟಿದ್ದಾರೆ ರವಿಚಂದ್ರನ್​​. ನನ್ನ ಹೊಟ್ಟೆ ಇರಲಿ,ಬಿಡಲಿ. ನನ್ನ ಬಿಟ್ಟು ಕನ್ನಡ ಚಿತ್ರರಂಗದಲ್ಲಿ ಬೇರೆ ಯಾರಾದರೂ ಕೃಷ್ಣನ ಪಾತ್ರ ಮಾಡಬಹುದು ಎಂಬುದನ್ನು ಹೇಳಿ ಎಂದು ಪ್ರಶ್ನಿಸಿದರು.

ಇನ್ನು ಕೃಷ್ಣನ ಪಾತ್ರದ ತಯಾರಿ ಬಗ್ಗೆ ಮಾತಾಡಿದ ಅವರು, ಈ ಪಾತ್ರಕ್ಕೆ ಒಂದು ತಿಂಗಳುಗಳ ಕಾಲ ಮಾಂಸಾಹಾರ ಬಿಟ್ಟಿದ್ದೆ. ಆದ್ದರಿಂದ ಕುರುಕ್ಷೇತ್ರ ಚಿತ್ರದ ಶೂಟಿಂಗ್ ವೇಳೆ ಅಷ್ಟಂದು ಹೊಟ್ಟೆ ಇರಲಿಲ್ಲ. ಪಾತ್ರಗಳಿಗೆ ವಿಷಯದಲ್ಲಿ ನಾನು ತುಂಬಾ ಕಮಿಟ್ಮೆಂಟ್. ಸುಮಾರು 5ಕ್ಕೂ ಹೆಚ್ಚು ಗಂಟೆ ಮೇಕಪ್ ಅನ್ನು ಹಾಕಿಕೊಳ್ಳುತ್ತಿದ್ದೆ. ಅಲ್ಲದೇ ನಾನು ನಟಿಸುವ ಪಾತ್ರಗಳಲ್ಲಿ ತಲ್ಲೀನನಾಗುತ್ತೇನೆ. ಇತ್ತೀಚಿಗೆ ಹೊಸ ಚಿತ್ರವೊಂದು ಬಂದಿತ್ತು. ಆ ಚಿತ್ರಕ್ಕೆ ಗಡ್ಡ ತೆಗೆಯಬೇಕು ಎಂದರು. ಆದರೆ, ಈ ಗೆಟಪ್​​ನಲ್ಲಿ ರವಿ ಬೋಪಣ್ಣ ಮಾಡುತ್ತಿದ್ದೇನೆ. ಆದ್ದರಿಂದ ಆ ಚಿತ್ರ ನಿರಾಕರಿಸಿದೆ. ಯಾವುದೇ ಪಾತ್ರವಾಗಲಿ ಅದಕ್ಕೆ ನ್ಯಾಯ ಒದಗಿಸ್ತಿನಿ. ಅಲ್ಲದೆ ಕೃಷ್ಣನ ಪಾತ್ರಕ್ಕೆ ನಾನೇ ಡಬ್ಬಿಂಗ್ ಮಾಡಿದ್ದೆ. ಅದ್ರೆ ನನ್ನ ವಾಯ್ಸ್ ಬಳಸಿಲ್ಲ. ಅದು ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಬಿಟ್ಟ ವಿಷ್ಯ ಎಂದರು ಕ್ರೇಜಿ ಸ್ಟಾರ್.

ABOUT THE AUTHOR

...view details