ಟೈಟಲ್ನಿಂದಲೇ ಸ್ಯಾಂಡಲ್ ವುಡ್ನಲ್ಲಿ ಭರವಸೆ ಮೂಡಿಸುತ್ತಿರುವ ಕನ್ನಡದ ಖ್ಯಾತ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಅಭಿನಯದ ಎರಡನೇ ಚಿತ್ರ 'ವಿಷ್ಣು ಪ್ರಿಯ'ದ ಟ್ರೈಲರ್ ರಿಲೀಸ್ ಆಗಿದೆ. 'ಪಡ್ಡೆಹುಲಿ' ಚಿತ್ರದ ಬಳಿಕ 2ನೇ ಇನ್ನಿಂಗ್ಸ್ ಸ್ಟಾರ್ಟ್ ಮಾಡಿರುವ ಶ್ರೇಯಸ್ಗೆ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಜೊತೆಯಾಗಿದ್ದಾರೆ.
ಚಿತ್ರದ ಆಫೀಶಿಯಲ್ ಟ್ರೈಲರ್‌ನ ಪವರ್ಸ್ಟಾರ್ ಪುನೀತ್ ರಾಜ್‍ಕುಮಾರ್ ಬಿಡುಗಡೆ ಮಾಡಿ, ಸಿನಿಮಾ ಪ್ರಾಮಿಸ್ಸಿಂಗ್ ಆಗಿದೆ ಅಂತಾ ಮೆಚ್ಚುಗೆ ವ್ಯಕ್ತಪಡಿಸಿದರು. ನಿರ್ದೇಶಕ ಇಂದ್ರಜಿತ್ ಲಂಕೇಶ್, ನಿರ್ಮಾಪಕ ರಮೇಶ್ ರೆಡ್ಡಿ ಟ್ರೈಲರ್ ನೋಡಿ ಹರ್ಷ ವ್ಯಕ್ತಪಡಿಸಿದರು.
ನಿರ್ಮಾಪಕ ಕೆ.ಮಂಜು ಮಾತನಾಡಿ, 'ವಿಷ್ಣು ಪ್ರಿಯ' ಸಿನಿಮಾ ನೈಜ ಘಟನೆಯ ಲವ್ ಸ್ಟೋರಿ, ಇವತ್ತಿನ ಯುವ ಮನಸ್ಸುಗಳಿಗೆ ಈ ಸಿನಿಮಾ ಇಷ್ಟ ಆಗುತ್ತೆ ಅಂತಾ ಮಗನ ಸಿನಿಮಾದ ಬಗ್ಗೆ ಭರವಸೆಯ ಮಾತುಗಳನ್ನಾಡಿದರು. ನಾನು ಡ್ಯಾನ್ಸ್, ಫೈಟ್ ಮಾಡೋದಕ್ಕೆ ಅಪ್ಪು ಅವರೇ ಸ್ಫೂರ್ತಿ ಅಂತಾ ನಟ ಶ್ರೇಯಸ್ ಹೇಳಿದರು.