ಕಮಲ್ಹಾಸನ್-ನಿರ್ದೇಶಕ ಶಂಕರ್ ಕಾಂಬಿನೇಶನ್ನಲ್ಲಿ ಮೂಡಿಬಂದ 'ಇಂಡಿಯನ್' ಸಿನಿಮಾವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಕಮರ್ಷಿಯಲ್ ಎಲಿಮೆಂಟ್ ಜೊತೆಗೆ ಒಂದು ಸಾಮಾಜಿಕ ಸಂದೇಶದೊಂದಿಗೆ 1996 ರಲ್ಲಿ ಬಿಡುಗಡೆಯಾದ ಸಿನಿಮಾ ಇದು.
ಇಂಡಿಯನ್-2ರಲ್ಲಿ ಕಮಲ್ಹಾಸನ್ ಬದಲಿಗೆ ಚಿಯಾನ್ ವಿಕ್ರಮ್?
ಕಮಲ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸಿ 1996 ರಲ್ಲಿ ಬಿಡುಗಡೆಯಾಗಿದ್ದ'ಇಂಡಿಯನ್' ಸಿನಿಮಾ ಭಾಗ 2 ಶೂಟಿಂಗ್ ಜನವರಿಯಲ್ಲಿ ಆರಂಭವಾಗಿತ್ತು. ಆದರೆ ಇದೀಗ ಚಿತ್ರ ಆರಂಭದಲ್ಲೇ ನಿಂತಿದ್ದು ಕಮಲ್ ಬದಲಿಗೆ ಹೀರೋ ಆಗಿ ವಿಕ್ರಮ್ ನಟಿಸುವ ಸಾಧ್ಯತೆ ಇದೆ.
ಕಮಲ ಹಾಸನ್ ಈ ಸಿನಿಮಾದಲ್ಲಿ ಮೂರು ಶೇಡ್ಗಳಲ್ಲಿ ನಟಿಸಿದ್ದರು. ಮೊನಿಷಾ ಕೊಯಿರಾಲ, ಊರ್ಮಿಳಾ ಮಾತೊಂಡ್ಕರ್ ನಾಯಕಿಯರಾಗಿ ನಟಿಸಿದ್ದರು. ತಮಿಳಿನಲ್ಲಿ 'ಭಾರತೀಯುಡು' ಹಾಗೂ ಹಿಂದಿಯಲ್ಲಿ 'ಇಂಡಿಯನ್' ಹೆಸರಿನಲ್ಲಿ ಈ ಸಿನಿಮಾ ಏಕಕಾಲಕ್ಕೆ ಬಿಡುಗಡೆಯಾಗಿತ್ತು.ಎ.ಎಮ್.ರತ್ನಂ, ಜಮು ಸುಗಂಧ್ ಜೊತೆ ಸೇರಿ ಸಿನಿಮಾವನ್ನು ನಿರ್ಮಿಸಿದ್ದರು. ಎ.ಆರ್. ರೆಹಮಾನ್ ಸಂಗೀತ ನಿರ್ದೇಶನ ಮಾಡಿದ ಎಲ್ಲಾ ಹಾಡುಗಳೂ ಒಂದಕ್ಕಿಂತ ಒಂದು ಚೆನ್ನಾಗಿವೆ.
'ಇಂಡಿಯನ್' ಭಾಗ 2 ಸಿನಿಮಾವನ್ನು ತೆರೆಗೆ ತರಲು ಶಂಕರ್ ಸಾಕಷ್ಟು ಪ್ರಯತ್ನ ಪಟ್ಟರೂ ಈ ಸಿನಿಮಾಗೆ ಸಾಕಷ್ಟು ವಿಘ್ನಗಳು ಎದುರಾಗಿವೆ. ನಿರ್ಮಾಪಕ ಹಾಗೂ ನಿರ್ದೇಶಕರ ಮಧ್ಯೆ ಮನಸ್ಥಾಪ ಉಂಟಾಗಿ ಸಿನಿಮಾ ಆರಂಭವಾಗಲೇ ಇಲ್ಲ.ಆದರೆ ಸಿನಿಮಾವನ್ನು ಹೇಗಾದರೂ ಶುರು ಮಾಡಬೇಕು ಎಂಬುದು ಶಂಕರ್ ಹಠ. ಆದರೆ ಈ ಬಾರಿ ಚಿತ್ರದ ಹೀರೋ ಬದಲಾಗಲಿದ್ದು ಕಮಲ ಹಾಸನ್ ಜಾಗಕ್ಕೆ ನಟ ವಿಕ್ರಮ್ ಅವರನ್ನು ಕರೆತರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆಯಾಗಬೇಕಿದೆ ಅಷ್ಟೇ. ಶಂಕರ್-ವಿಕ್ರಮ್ ಕಾಂಬಿನೇಶನ್ನಲ್ಲಿ 'ಅಪರಿಚಿತುಡು' 'ಐ' ಸಿನಿಮಾಗಳು ಸೂಪರ್ ಹಿಟ್ ಆಗಿವೆ.