ಬಾಲಿವುಡ್ನಲ್ಲಿ ಜೀವನಾಧಾರಿತ ಸಿನಿಮಾಗಳು ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿವೆ. ಇದೀಗ ಇವುಗಳ ಸಾಲಿನಲ್ಲಿ ನಿಲ್ಲಲು ಶಕುಂತಲಾ ದೇವಿ-ಹ್ಯೂಮನ್ ಕಂಪ್ಯೂಟರ್ ಚಿತ್ರ ಕೂಡ ಸಿದ್ದವಾಗುತ್ತಿದೆ.
ಈ ಸಿನಿಮಾ ಶೂಟಿಂಗ್ ಸೆಟ್ಟೇರಿದ್ದು, ಸಿನಿಮಾದಲ್ಲಿ ವಿದ್ಯಾ ಬಾಲನ್ ಮತ್ತು ಸನ್ಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲಂಡನ್ನಲ್ಲಿ ಶೂಟಿಂಗ್ ಪ್ರಾರಂಭವಾಗಿದ್ದು, ಈ ಬಗ್ಗೆ ಸನ್ಯ ಮಲ್ಹೋತ್ರ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾ ಶೂಟಿಂಗ್ ಮಾಡುತ್ತಿರುವುದರಿಂದ ಫುಲ್ ಎಕ್ಸೈಟೆಡ್ ಆಗಿದ್ದೇನೆ. ಈ ಜರ್ನಿ ನನಗೆ ಕುತೂಹಲ ಮೂಡಿಸುತ್ತಿದೆ ಎಂದು ಬರೆದುಕೊಂಡಿದ್ದು, ಇದನ್ನು ವಿದ್ಯಾ ಬಾಲನ್ ಮತ್ತು ನಿರ್ದೇಶಕ ಅನುಜ್ ಮೆನನ್ಗೆ ಟ್ಯಾಗ್ ಮಾಡಿದ್ದಾರೆ.
ಈ ಸಿನಿಮಾದಲ್ಲಿ ನಟಿಸುತ್ತಿರುವ ಮತ್ತೊಬ್ಬ ನಟಿ ವಿದ್ಯಾ ಬಾಲನ್ ಇದೇ ತಿಂಗಳಲ್ಲಿ ಶಕುಂತಲಾ ದೇವಿ ಸಿನಿಮಾದ ಟೀಸರ್‌ನ ಶೇರ್ ಮಾಡಿದ್ದರು. ಈ ಟೀಸರ್‌ನಿಂದ ಅಭಿಮಾನಿಗಳಲ್ಲಿ ಕುತೂಹಲ ಜಾಸ್ತಿಯಾಗಿತ್ತು.
ಶಕುಂತಲಾ ದೇವಿಯವರ ನಿಜ ಜೀವನದ ಕಥೆಯನ್ನ ಚಿತ್ರ ಹೊಂದಿದೆ. ಶಕುಂತಲಾದೇವಿ ತಮ್ಮ 18 ನೇ ವಯಸ್ಸಿಗೆ ಯಾವುದೇ ಕ್ಯಾಲ್ಕುಲೇಟರ್ ಮತ್ತು ಸೂತ್ರಗಳಿಲ್ಲದೆ ನಿರಾಯಾಸವಾಗಿ ಗಣಿತದ ಲೆಕ್ಕವನ್ನು ಬಿಡಿಸುತ್ತಿದ್ದರು. ಈ ಕಥೆಯನ್ನು ಆಧಾರವಾಗಿಟ್ಟುಕೊಂಡು ಚಿತ್ರವನ್ನು ಹೆಣೆಯಲಾಗಿದೆ.
ಈ ಸಿನಿಮಾವನ್ನು ಸೋನಿ ಪಿಕ್ಚರ್ ನೆಟ್ವರ್ಕ್ ಪ್ರೊಡಕ್ಷನ್ ಮತ್ತು ವಿಕ್ರಮ್ ಮಲ್ಹೊತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಕಾಣ ಸಿಗುವ ಸನ್ಯ ಈ ಹಿಂದೆ "ಬಧೀ ಹೋ" ಎಂಬ ಹಿಂದಿ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು.