ಕರ್ನಾಟಕ

karnataka

ETV Bharat / sitara

ಮಾನವ ಕಂಪ್ಯೂಟರ್​​ ಶಕುಂತಲಾ ದೇವಿ ಪಾತ್ರದಲ್ಲಿ ವಿದ್ಯಾ ಬಾಲನ್...ಫಸ್ಟ್​​​ಲುಕ್ ಬಿಡುಗಡೆ - ವಿದ್ಯಾ ಬಾಲನ್ ಹೊಸ ಸಿನಿಮಾ

ಮಾನವ ಕಂಪ್ಯೂಟರ್ ಎಂದೇ ಖ್ಯಾತರಾದ ಬರಹಗಾರ್ತಿ, ಮೆಂಟಲ್ ಕ್ಯಾಲ್ಕುಲೇಟರ್ ಶಕುಂತಲಾ ದೇವಿ ಕುರಿತಾದ ಜೀವನಚರಿತ್ರೆ ಸಿನಿಮಾ ತಯಾರಾಗುತ್ತಿದೆ. ಚಿತ್ರದಲ್ಲಿ ವಿದ್ಯಾ ಬಾಲನ್ ಶಕುಂತಲಾ ದೇವಿ ಪಾತ್ರದಲ್ಲಿ ನಟಿಸಿದ್ದು ಚಿತ್ರದ ಫಸ್ಟ್​​​​ಲುಕ್​​​, ಟೀಸರ್ ಬಿಡುಗಡೆಯಾಗಿದೆ.

ವಿದ್ಯಾ ಬಾಲನ್

By

Published : Sep 16, 2019, 6:49 PM IST

ಸಾಧನೆ ಮಾಡಿದ ಗಣ್ಯಾತಿಗಣ್ಯರ ಜೀವನಚರಿತ್ರೆಯನ್ನು ಸಿನಿಮಾವಾಗಿ ಹೊರತರುವುದು ಇತ್ತೀಚೆಗೆ ಸಾಮಾನ್ಯವಾಗಿ ಹೋಗಿದೆ. ಇದುವರೆಗೂ ಎಷ್ಟೋ ಗಣ್ಯರ ಜೀವನ ಚರಿತ್ರೆ ಸಿನಿಮಾ ಮೂಲಕ ಹೊರಬಂದಿದೆ. ಇದೀಗ ಮಾನವ ಕಂಪ್ಯೂಟರ್ ಎಂದೇ ಖ್ಯಾತರಾಗಿದ್ದ ಶಕುಂತಲಾ ದೇವಿ ಬಯೋಪಿಕ್ ತೆರೆಗೆ ಬರುತ್ತಿದೆ. ಈ ಸಿನಿಮಾದ ಫಸ್ಟ್​​​​ಲುಕ್, ಟೀಸರ್​​​​​​ ಕೂಡಾ ಬಿಡುಗಡೆಯಾಗಿದೆ.

ಕರ್ನಾಟಕದ ಬೆಂಗಳೂರಿನಲ್ಲಿ ಒಂದು ಮಧ್ಯಮ ಕುಟುಂಬದಲ್ಲಿ ಹುಟ್ಟಿ ಇಡೀ ವಿಶ್ವವನ್ನೇ ತನ್ನತ್ತ ತಿರುಗಿನೋಡುವಂತೆ ಮಾಡಿದ ಶಕುಂತಲಾ ದೇವಿ ಹೆಸರು ಗಿನ್ನೆಸ್​ ಬುಕ್ ಆಫ್​ ವರ್ಲ್ಡ್​​ ರೆಕಾರ್ಡ್​ನಲ್ಲೂ ದಾಖಲಾಗಿದೆ. ಈ ಮಹಾನ್ ಪ್ರತಿಭೆ ಬಗ್ಗೆ ಇದೀಗ ಬಾಲಿವುಡ್​​​ನಲ್ಲಿ ಸಿನಿಮಾ ತಯಾರಾಗುತ್ತಿದೆ. ಶಕುಂತಲಾ ದೇವಿ ಪಾತ್ರವನ್ನು ನಟಿ ವಿದ್ಯಾ ಬಾಲನ್ ನಿರ್ವಹಿಸುತ್ತಿದ್ದಾರೆ. ಚಿತ್ರತಂಡ ಬಿಡುಗಡೆ ಮಾಡಿರುವ ಫಸ್ಟ್​​​ಲುಕ್​​​ನಲ್ಲಿ ವಿದ್ಯಾಬಾಲನ್​ ಥೇಟ್ ಶಕುಂತಲಾ ದೇವಿಯಂತೆ ಕಾಣುತ್ತಿದ್ದಾರೆ. ಕೆಂಪು ಸೀರೆ ಧರಿಸಿ, ಶಕುಂತಲಾ ದೇವಿಯಂತೆ ಹೇರ್​ ಸ್ಟೈಲ್​​​​​​ನಲ್ಲಿ ವಿದ್ಯಾ ಪೋಸ್ ನೀಡಿದ್ದಾರೆ. ರ್‍ಯಾಂಕಿಂಗ್​ನಲ್ಲಿ ಮೊದಲನೆ ಸ್ಥಾನದಲ್ಲಿ ಶಕುಂತಲಾ ದೇವಿ ಪಾತ್ರಧಾರಿ ವಿದ್ಯಾ ಬಾಲನ್, ಎರಡನೇ ರ್‍ಯಾಂಕಿಂಗ್​​​ನಲ್ಲಿ ಕಂಪ್ಯೂಟರ್ ಹಾಗೂ ಮೂರನೇ ರ್‍ಯಾಂಕಿಂಗ್​​​​​ನಲ್ಲಿ ಕ್ಯಾಲ್ಕುಲೇಟರ್​ ಇಡಲಾಗಿದ್ದು ಚಿತ್ರ ಪೋಸ್ಟರ್ ಬಹಳ ಕ್ರಿಯೇಟಿವ್ ಆಗಿದೆ.

ವಿದ್ಯಾ ಬಾಲನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಚಿತ್ರದ ಫಸ್ಟ್​​​ಲುಕ್ ಹಾಗೂ ಟೀಸರ್​​​​ ಶೇರ್ ಮಾಡಿಕೊಂಡಿದ್ದಾರೆ. ಅನು ಮೆನನ್ , ನಯನಿಕ ಮಹಾತ್ನಿ ಸಿನಿಮಾಗೆ ಚಿತ್ರಕಥೆ ಬರೆದಿದ್ದಾರೆ. ಚಿತ್ರವನ್ನು ಅನು ಮೆನನ್ ನಿರ್ದೇಶಿಸಿದ್ದಾರೆ. ಮುಂದಿನ ವರ್ಷ ಮೇ ತಿಂಗಳಿನಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.

ABOUT THE AUTHOR

...view details