ಕರ್ನಾಟಕ

karnataka

ETV Bharat / sitara

'ಗ್ಯಾಂಗ್‍ಸ್ಟರ್' ಚಿತ್ರೀಕರಣ ಮುಕ್ತಾಯ ! - ಗ್ಯಾಂಗ್‍ಸ್ಟರ್ ಚಿತ್ರ

ನಕ್ಸಲೈಟ್ ಬಗೆಗಿನ ನೈಜ ಕಥಾ ಹಂದರ ಹೊಂದಿರುವ ಗ್ಯಾಂಗ್‍ಸ್ಟರ್ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.

vasishta simha

By

Published : Aug 16, 2019, 9:19 AM IST

ವಸಿಷ್ಠ ಸಿಂಹ ನಾಯಕರಾಗಿ ನಟಿಸುತ್ತಿರುವ 'ಗ್ಯಾಂಗ್‍ಸ್ಟರ್'`ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಯಲ್ಲಾಪುರ, ತೆಲಂಗಾಣದಲ್ಲಿ ಸುಮಾರು 70 ದಿನಗಳ ಚಿತ್ರೀಕರಣ ನಡೆದಿದೆ.

ನಕ್ಸಲೈಟ್ ಬಗೆಗಿನ ನೈಜ ಕಥಾ ಹಂದರ ಹೊಂದಿರುವ ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಬಾಲಾಜಿ ಅವರು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಶ್ರೀಲಕ್ಷ್ಮೀನರಸಿಂಹ ಎಂಟರ್ ಪ್ರೈಸಸ್ ಲಾಂಛನದಲ್ಲಿ ಸಿ.ಎ.ವರದರಾಜ್ ಈ ಸಿನಿಮಾ ನಿರ್ಮಿಸುತ್ತಿದ್ದಾರೆ.

ವರುಣ್ ಕುಮಾರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸುರೇಶ್ ಭಾರ್ಗವ್ ಛಾಯಾಗ್ರಹಣ, ಕಿಶೋರ್ ಸಂಕಲನ ಹಾಗೂ ನಂದು, ರಾಮು, ಬಾಲಾಜಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ವಸಿಷ್ಠಸಿಂಹ, ಯಜ್ಞಶೆಟ್ಟಿ, ಸಂಯುಕ್ತ ಹೊರನಾಡು, ಅರವಿಂದರಾವ್ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.

ABOUT THE AUTHOR

...view details