ಕರ್ನಾಟಕ

karnataka

ETV Bharat / sitara

ಗುರುವಿನ​ ಪುತ್ರನನ್ನು ತಮ್ಮ ಮಗನಂತೆ ಎಂದ ಉಪ್ಪಿ... ಅಭಿಮನ್ಯು ಕಾಶಿನಾಥ್​ ಜೊತೆ ನಟಿಸಬೇಕೆಂದ ಬುದ್ದಿವಂತ

ಕಾಶಿನಾಥ್ ಪುತ್ರ ಅಭಿಮನ್ಯು ಅಭಿನಯದ ಎರಡನೇ ಚಿತ್ರ "ಎಲ್ಲಿಗೆ ಪಯಣ ಯಾವುದೋ ದಾರಿ" ಚಿತ್ರದ ಟೈಟಲ್ ಪೋಸ್ಟರ್ ಲಾಂಚ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಉಪ್ಪಿ, ತನ್ನ ಗುರುವಿನ ಮಗನ ಜೊತೆ ಸಿನಿಮಾ ಮಾಡುವುದಾಗಿ ಹೇಳಿದರು.

ನಟ ಉಪೇಂದ್ರ

By

Published : Oct 29, 2019, 10:45 AM IST

ನನಗೆ ನನ್ನ ಅಣ್ಣನ ಮಗ ನಿರಂಜನ್ ಸುಧೀಂದ್ರ ಬೇರೆ ಅಲ್ಲ ಅಭಿಮನ್ಯು ಕಾಶಿನಥ್ ಬೇರೆ ಅಲ್ಲ, ನನ್ನ ಅಣ್ಣನ ಮಗನ ಸಿನಿಮಾಗೆ ವಹಿಸುವ ಜವಾಬ್ದಾರಿಯನ್ನು ಕಾಶಿನಾಥ್ ಮಗನ ಸಿನಿಮಾಕ್ಕೂ ವಹಿಸುತ್ತೇನೆ ಎಂದು ಸೂಪರ್ ಸ್ಟಾರ್ ಉಪೇಂದ್ರ ಹೇಳಿದ್ದಾರೆ.

ಕಾಶಿನಾಥ್ ಪುತ್ರ ಅಭಿಮನ್ಯು ಅಭಿನಯದ ಎರಡನೇ ಚಿತ್ರ "ಎಲ್ಲಿಗೆ ಪಯಣ ಯಾವುದೋ ದಾರಿ" ಚಿತ್ರದ ಟೈಟಲ್ ಪೋಸ್ಟರ್ ಲಾಂಚ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಉಪ್ಪಿ, ತನ್ನ ಗುರುವಿನ ಮಗನ ಜೊತೆ ಸಿನಿಮಾ ಮಾಡುವುದಾಗಿ ಹೇಳಿದರು. ನನ್ನ ಗುರು ಕಾಶಿನಾಥ್ ಜೊತೆ ಸಿನಿಮಾ ಮಾಡಬೇಕೆಂದು ಸಾಕಷ್ಟು ಬಾರಿ ಮಾತುಕತೆ ನಡೆಸಿದ್ದೆವು, ಅದ್ರೆ ಇಬ್ಬರು ಬ್ಯುಸಿ ಇದ್ದ ಕಾರಣ ಅದು ಸಾಧ್ಯವಾಗಲಿಲ್ಲ. ಅದರೆ ವಿಧಿ ಬೇರೆ ಬಗೆಯಿತು. ಈಗ ಅವರ ಜಾಗಕ್ಕೆ ಆಭಿಮನ್ಯು ಬಂದಿದ್ದಾನೆ ಎಂದರು.

ನನ್ನ ಅಣ್ಣನ ಮಗ ಬೇರೆ ಅಲ್ಲ ಕಾಶಿನಾಥ್​​ ಮಗ ಬೇರೆ ಅಲ್ಲ : ನಟ ಉಪೇಂದ್ರ

ಅಭಿಮನ್ಯು ಬಗ್ಗೆ ಮಾತನಾಡಿದ ಬುದ್ದಿವಂತ, ಚಿಕ್ಕ ಪುಟ್ಟ ಪಾತ್ರಗಳನ್ನು ಇವರಿಗೆ ಕೊಡಲು ಆಗುವುದಿಲ್ಲ. ಸದ್ಯ ಅಭಿಮನ್ಯು ಬ್ಯುಸಿ ಇದ್ದಾನೆ‌. ಅಭಿಮನ್ಯು ಜೊತೆ ಸಿನಿಮಾ ಮಾಡಲು ಇನ್ನೂ ಸಾಕಷ್ಟು ಸಮಯವಿದೆ. ಬೇರೆ ಬೇರೆ ನಿರ್ದೇಶಕರ ಜೊತೆ ಕೆಲಸ ಮಾಡಲಿ ಅವನಿಗೂ ಒಳ್ಳೆ ಅನುಭವ ವಾಗಲಿದೆ‌. ಅನಂತರ ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡ್ತಿನಿ ಅಂತ ನಟ ಉಪೇಂದ್ರ ತಿಳಸಿದ್ರು.

ABOUT THE AUTHOR

...view details