ಕರ್ನಾಟಕ

karnataka

ETV Bharat / sitara

ಈ ವಾರಾಂತ್ಯ ಪ್ರಸಾರವಾಗಲಿದೆ ಲಾಕ್​ಡೌನ್​ ಡೈರೀಸ್​: ನಟರು ಹಂಚಿಕೊಳ್ಳಲಿದ್ದಾರೆ ತಮ್ಮ ಅನುಭವ - ಕನ್ನಡ ರಿಯಾಲಿಟಿ ಶೋ

ಲಾಕ್​ಡೌನ್ ಡೈರೀಸ್ ಜೊತೆಗೆ ಆರಂಭವಾಗಲಿರುವ ಕಾರ್ಯಕ್ರಮ ಕಾಫಿ ವಿತ್ ಅನುಶ್ರೀ. ಅನುಶ್ರೀ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳು ಭಾಗವಹಿಸಿ ತಮ್ಮ ಮನದಾಳದ ಮಾತುಗಳನ್ನಾಡಲಿದ್ದಾರೆ.

Two new program telecast in zee kannada channel
ಖಾಸಗಿ ಕನ್ನಡ ವಾಹಿನಿಯ ವೀಕ್ಷಕರಿಗೆ ಈ ವಾರಾಂತ್ಯವಂತೂ ಸುಗ್ಗಿಯೋ ಸುಗ್ಗಿ

By

Published : May 21, 2020, 3:38 PM IST

ಖಾಸಗಿ ವಾಹಿನಿಯ ವೀಕ್ಷಕರಿಗೆ ಈ ವಾರಾಂತ್ಯದಲ್ಲಿ ಮನರಂಜನೆಯ ಮಹಾಪೂರವನ್ನೇ ಉಣಬಡಿಸುವುದಕ್ಕಾಗಿ ಎರಡು ಹೊಸ ಕಾರ್ಯಕ್ರಮಗಳ ಪ್ರಸಾರ ಆರಂಭಿಸಲಾಗುತ್ತಿದೆ‌.

ಲಾಕ್​ಡೌನ್ ಡೈರೀಸ್ ಎಂಬ ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮ ಆರಂಭವಾಗಲಿದ್ದು, ಲಾಕ್​ಡೌನ್ ಸಮಯವನ್ನು ಸೆಲೆಬ್ರಿಟಿಗಳು ಹೇಗೆ ಕಳೆಯಲಿದ್ದಾರೆ ಎಂಬುದನ್ನು ವೀಕ್ಷಕರಿಗೆ ಜೀ ವಾಹಿನಿ ತೋರಿಸಲಿದೆ.

ಎಲ್ಲಾ ಕಲಾವಿದರು ತಮ್ಮ ತಮ್ಮ ಮನೆಯಿಂದಲೇ ವಿಡಿಯೋ ಮಾಡಿರುವುದು ಲಾಕ್​​ಡೌನ್ ಡೈರೀಸ್ ವಿಶೇಷ. ಲಾಕ್​ಡೌನ್ ಡೈರೀಸ್ ಜೊತೆಗೆ ಆರಂಭವಾಗಲಿರುವ ಮಗದೊಂದು ಕಾರ್ಯಕ್ರಮ ಕಾಫಿ ವಿತ್ ಅನುಶ್ರೀ. ಅನುಶ್ರೀ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳು ಭಾಗವಹಿಸಿ ತಮ್ಮ ಮನದಾಳದ ಮಾತುಗಳನ್ನಾಡಲಿದ್ದಾರೆ.

ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9.30ಕ್ಕೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್, ರಕ್ಷಿತ್ ಶೆಟ್ಟಿ, ರಚಿತಾ ರಾಮ್ ಸೇರಿದಂತೆ ಒಂದಿಷ್ಟು ಜನ ಕಲಾವಿದರು ಬಿಸಿ ಬಿಸಿ ಕಾಫಿ ಕುಡಿಯುತ್ತಾ ಅನುಶ್ರೀ ಜೊತೆ ಚಿಟ್ ಚಾಟ್ ಮಾಡಲಿದ್ದಾರೆ. ಈ ವಾರದ ಮೊದಲ ಅತಿಥಿಯಾಗಿ ಕನ್ನಡದ ಹೆಸರಾಂತ ನಟ, ವೀಕೆಂಡ್ ವಿತ್ ರಮೇಶ್ ಶೋ ಸಾರಥಿ ರಮೇಶ್ ಅರವಿಂದ್ ಭಾಗವಹಿಸಲಿದ್ದಾರೆ. ಲಾಕ್​ಡೌನ್ ಸಮಯದಲ್ಲಿ ಮಾಲ್ಗುಡಿ ಡೇಸ್ ಧಾರಾವಾಹಿಯ ಕನ್ನಡ ಅವತರಣಿಕೆ ಪ್ರಸಾರ ಮಾಡಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ಜೀ ಕನ್ನಡ ಈ ವಾರಾಂತ್ಯದಲ್ಲಿ ಮತ್ತೆರಡು ಹೊಸ ಕಾರ್ಯಕ್ರಮದ ಮೂಲಕ ವೀಕ್ಷಕರ ಮನ ಸೆಳೆಯಲು ಸಜ್ಜಾಗಿದೆ.

ABOUT THE AUTHOR

...view details