ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನೆಲ್ಲ ಅಗಲಿ ಮೂರು ತಿಂಗಳು ಕಳೆಯುತ್ತಿವೆ. ಪ್ರತಿ ದಿನ ಪುನೀತ್ ರಾಜ್‍ಕುಮಾರ್ ಅವರನ್ನು ಸ್ಮರಿಸುವ ಕೆಲಸಗಳು ನಡೆಯುತ್ತಿವೆ. ಅದರಂತೆ ಪುನೀತ್ಗೆ ಅಮೆಜಾನ್ ಪ್ರೈಮ್ ಸಂಸ್ಥೆ ಕಡೆಯಿಂದ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ.
ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಹಾಗೂ ಪಿಆರ್‌ಕೆ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿದ್ದ ಕವಲುದಾರಿ, ಮಾಯಾಬಜಾರ್, ಯುವರತ್ನ, ಲಾ, ಫ್ರೆಂಚ್ ಬಿರಿಯಾನಿ ಸಿನಿಮಾಗಳನ್ನು ಫೆ. 1ರಿಂದ 28ರವರೆಗೆ ಉಚಿತವಾಗಿ ಅಮೆಜಾನ್ ಪ್ರೈಮ್‌ನಲ್ಲಿ ಪ್ರಸಾರ ಮಾಡುವ ಮೂಲಕ ಗೌರವ ಸಲ್ಲಿಸಲಾಗುತ್ತದೆ. ಇದರ ಜೊತೆ ಮೂರು ಹೊಸ ಸಿನಿಮಾಗಳ ಬಿಡುಗಡೆ ಮಾಡುವುದಾಗಿ ಹೇಳಿದೆ.
ಪಿಆರ್‌ಕೆ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿರುವ ಹೊಸ ಸಿನಿಮಾಗಳಾದ ಒನ್ ಕಟ್ ಟು ಕಟ್, ಫ್ಯಾಮಿಲಿ ಪ್ಯಾಕ್, ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾಗಳನ್ನು ನೇರವಾಗಿ ಅಮೆಜಾನ್ ಪ್ರೈಮ್‌ನಲ್ಲಿ ರಿಲೀಸ್ ಮಾಡಲಾಗುವುದು.
ಈ ಜವಾಬ್ದಾರಿಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೊತ್ತಿದ್ದಾರೆ. ಅಪ್ಪು ಕನಸನ್ನು ಪತ್ನಿ ಅಶ್ವಿನಿ ನನಸು ಮಾಡುತ್ತಿದ್ದಾರೆ. ಈ ಮೂರು ಸಿನಿಮಾಗಳ ಬಿಡುಗಡೆ ದಿನಾಂಕವನ್ನು ಸದ್ಯದಲ್ಲೇ ತಿಳಿಸಲಾಗುವುದು ಅಂತಾ ಹೇಳಲಾಗಿದೆ.
ಪುನೀತ್ ರಾಜ್‌ಕುಮಾರ್ ಅವರ ವಿಭಿನ್ನ ದೃಷ್ಟಿಕೋನವು ಹಲವಾರು ವರ್ಷಗಳಿಂದ ಪ್ರೇಕ್ಷಕರನ್ನು ಆಕರ್ಷಿಸಿತ್ತು. ಅವರಿಗೆ ಅರ್ಹವಾದ ಅಭಿಮಾನಿಗಳನ್ನು ಮತ್ತು ಗೌರವವನ್ನು ಗಳಿಸಿದ್ದಾರೆ. ಆ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಇದು ನಮ್ಮ ಪ್ರಯತ್ನವಾಗಿದೆ.