ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ಅಭಿನಯದ ಸಿನಿಮಾ ‘ಪ್ರಾರಂಭ’ ಏಪ್ರಿಲ್ ಮೊದಲ ವಾರದಲ್ಲೇ ಬಿಡುಗಡೆ ಆಗಬೇಕಿತ್ತು.ಆದರೆ, ಕೊರೊನಾದಿಂದ ಬ್ರೇಕ್ ಬಿದ್ದಿದೆ.
ಮನೋರಂಜನ್ ಸಿನಿಮಾ ಹಾಡು ಸೈಯಾನ್...ಸೈಯಾನ್... ಇಂದು 'ಪ್ರಾರಂಭ' - ಮನೋರಂಜನ್
ಇಂದು ಸಂಜೆ 5 ಗಂಟೆ 7 ನಿಮಿಷಕ್ಕೆ ಸರಿಯಾಗಿ ಸೈಯಾನ್ ...ಸೈಯಾನ್ ...ಲಿರಿಕಲ್ ಹಾಡು ಆನಂದ್ ಆಡಿಯೋ ಯುಟ್ಯೂಬ್ ಅಲ್ಲಿ ಬಿಡುಗಡೆ ಆಗುತ್ತಿದೆ.
ಇಂದು ಸಂಜೆ 5 ಘಂಟೆ 7 ನಿಮಿಷಕ್ಕೆ ಸರಿಯಾಗಿ ಸೈಯಾನ್...ಸೈಯಾನ್...ಲಿರಿಕಲ್ ಹಾಡು ಆನಂದ್ ಆಡಿಯೋ ಯು ಟ್ಯೂಬ್ ಅಲ್ಲಿ ಬಿಡುಗಡೆ ಆಗುತ್ತಿದೆ. ಈ ಹಿಂದೆ ಮೈಸೂರಿನ ಫಲ ಪುಷ್ಪ ಪ್ರದರ್ಶನದಲ್ಲಿ ‘ಪ್ರಾರಂಭ’ಚಿತ್ರದ ಮೊದಲ ಗೀತೆ ಅನಾವರಣ ಮಾಡಲಾಗಿತ್ತು. ಮನು ಕಲ್ಯಾಡಿ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಜೇನುಸ್ರಿ ತನುಷ ಪ್ರೊಡಕ್ಷನ್ ಅಡಿಯಲ್ಲಿ ಜಗದೀಶ್ ಕಲ್ಯಾಡಿ ಅವರ ನಿರ್ಮಾಣದಲ್ಲಿ ‘ಪ್ರಾರಂಭ’ಚಿತ್ರ ತಯಾರಾಗಿದೆ.
ಐದು ಹಾಡುಗಳಿಗೆ ಪ್ರಜ್ವಲ್ ಪೈ ಸಂಗೀತವಿದೆ. ಈ ಚಿತ್ರದ ಪರಿಚಯದ ಗೀತೆ ಬಾರೆ ನೀನೆ ನೀನೆ... ಹಾಡನ್ನು ಅರ್ಮಾನ್ ಮಲ್ಲಿಕ್ ಹಾಡಿದ್ದಾರೆ, ಪಲಾಕ್ ಮುಚ್ಚಾಲ್ ಒಂದೇ ಒಂದು ಸಾರಿ....ಹಾಡಿಗೆ ಧ್ವನಿಗೂಡಿಸಿದ್ದಾರೆ. ಪ್ರಾರಂಭ ಚಿತ್ರದ ಟೀಸರ್ ಅಲ್ಲಿ ಡಿ ಬಾಸ್ ದರ್ಶನ್ ಮಾತುಗಳನ್ನೂ ಜೋಡಿಸಲಾಗಿದೆ.