ಈ ಬಾರಿಯ ರಾಷ್ಟ್ರ ಮಟ್ಟದ ವಿಮರ್ಶಕ ಪ್ರಶಸ್ತಿಗೆ ಕನ್ನಡದ ಮೂರು ಚಿತ್ರಗಳು ಆಯ್ಕೆಯಾಗಿವೆ. ರಾಷ್ಟ್ರಮಟ್ಟದ ವಿಮರ್ಶಕ ಪ್ರಶಸ್ತಿಯನ್ನು ಒಟ್ಟು 8 ಭಾಷೆಯ ಸಿನಿಮಾಗಳಿಗೆ ನೀಡಲಾಗುವುದು.
ರಾಷ್ಟ್ರಮಟ್ಟದ ವಿಮರ್ಶಕ ಪ್ರಶಸ್ತಿ- ಕನ್ನಡದ ಮೂರು ಚಿತ್ರಗಳು ಆಯ್ಕೆ - undefined
ಕನ್ನಡದ 'ಒಂದಲ್ಲಾ ಎರಡಲ್ಲ' 'ನಾತಿಚರಾಮಿ' 'ಅಮ್ಮಚ್ಚಿಯೆಂಬ ನೆನಪು' ಸಿನಿಮಾಗಳು ಈ ಬಾರಿಯ ರಾಷ್ಟ್ರಮಟ್ಟದ ವಿಮರ್ಶಕ ಪ್ರಶಸ್ತಿಗೆ ಆಯ್ಕೆಯಾಗಿವೆ. ಇದೇ ತಿಂಗಳ 21 ರಂದು ಮುಂಬೈನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪ್ರಶಸ್ತಿಗೆ ಆಯ್ಕೆಯಾದ ಸಿನಿಮಾಗಳನ್ನು ಜನಪ್ರಿಯ ಬಾಲಿವುಡ್ ನಟಿ ವಿದ್ಯಾಬಾಲನ್ ಹಾಗೂ ನಿರ್ದೇಶಕ ಜೋಯ್ ಅಕ್ತರ್ ಇತ್ತೀಚೆಗೆ ಘೋಷಿಸಿದ್ದಾರೆ. ಕನ್ನಡ ಭಾಷೆಯಿಂದ ಡಿ. ಸತ್ಯಪ್ರಕಾಶ್ ನಿರ್ದೇಶನದ ‘ಒಂದಲ್ಲ ಎರಡಲ್ಲ’, ಮಂಸೋರೆ ನಿರ್ದೇಶನದ ‘ನಾತಿಚರಾಮಿ’, ಹಾಗೂ ಚಂಪ ಪಿ. ಶೆಟ್ಟಿ ನಿರ್ದೇಶನದ ‘ಅಮ್ಮಚ್ಚಿಯೆಂಬ ನೆನಪು’ ಸಿನಿಮಾಗಳು ಆಯ್ಕೆಯಾಗಿವೆ.
ತಮಿಳು, ತೆಲುಗು, ಮರಾಠಿ, ಗುಜರಾತಿ, ಬೆಂಗಾಲಿ ಹಾಗೂ ಮಲಯಾಳಂ ಭಾಷೆಗಳಿಂದ ಕೂಡಾ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರಶಸ್ತಿಯನ್ನು ಇದೇ ತಿಂಗಳ 21 ರಂದು ಮುಂಬೈನ ಬಾಂದ್ರಾದ ರಂಗಮಂದಿರದಲ್ಲಿ ನೀಡಲಾಗುತ್ತಿದೆ. ಬಾಲಿವುಡ್ ನಟಿ ನೇಹ ಧೂಪಿಯ ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.