ಕರ್ನಾಟಕ

karnataka

ETV Bharat / sitara

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಗಿಮಿಕ್ ಇಂದೇ ನೋಡಿ... ಮನಸ್ಸಿನಾಟ ಪ್ರೀಮಿಯರ್​ ಶೋ ಮಾತ್ರ

73ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕನ್ನಡದ ಮೂರು ಚಿತ್ರಗಳು ಗಿಮಿಕ್, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮತ್ತು ಮನಸ್ಸಿನಾಟ ಚಿತ್ರಗಳು ಬಿಡುಗಡೆಯಾಗುತ್ತಿವೆ.

ಕನ್ನಡ ಚಿತ್ರಗಳು

By

Published : Aug 15, 2019, 10:12 AM IST

73ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕನ್ನಡದ ಮೂರು ಚಿತ್ರಗಳು ‘ಗಿಮಿಕ್, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಮತ್ತು ‘ಮನಸ್ಸಿನಾಟ’ ಬಿಡುಗಡೆಗೆ ನಿಂತಿವೆ. ಅದರಲ್ಲಿ ಎರಡು ಸಿನಿಮಾಗಳು ಸಾರ್ವಜನಿಕರಿಗೆ ಲಭ್ಯವಾಗಲಿದ್ದು, ಮನಸ್ಸಿನಾಟ ಪ್ರಿಮಿಯರ್ ಶೋ ಮಾತ್ರ ನಡೆಯಲಿದೆ.

ಮೂರು ಸಿನಿಮಾಗಳಲ್ಲಿ ಹಿರಿಯ ನಿರ್ದೇಶಕ ನಾಗಣ್ಣ ಅವರಿಗೆ ವಾರಕ್ಕೆ ಒಂದು ಸಿನಿಮಾ ಬಿಡುಗಡೆ ಆದಂತೆ, ಅವರ ‘ಮುನಿರತ್ನ ಕುರುಕ್ಷೇತ್ರ’ ಕಳೆದ ವಾರ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿದೆ. ಅವರದೇ ನಿರ್ದೇಶನದ ‘ಗಿಮಿಕ್’ ಗೋಲ್ಡನ್ ಸ್ಟಾರ್ ಗಣೇಶ್ ಅವರ ಮೊದಲ ಹಾರರ್ ಕಂ ಥ್ರಿಲ್ಲರ್ ಸಿನಿಮಾ ಜೊತೆಗೆ ಒಂದು ಮೊಟ್ಟೆಯ ಕಥೆ ನಟ, ಬರಹಗಾರ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿ ಅವರ ಅಭಿನಯದ ನಗೆ ನಟ ಸುಜಯ್ ಶಾಸ್ತ್ರೀ ಪ್ರಥಮ ನಿರ್ದೇಶನದ ಸಿನಿಮಾ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಯಶಸ್ವಿ ಸಿನಿಮಾಗಳ ನಿರ್ಮಾಪಕ ಟಿ ಆರ್ ಚಂದ್ರಶೇಖರ್ ಅವರ ನಿರ್ಮಾಣದ ಸಿನಿಮಾ. ಇವೆರಡರ ಜೊತೆಗೆ ಸಾಮಾಜಿಕ ಕಾಳಜಿ ಇರುವ ಚಿತ್ರ ‘ಮನಸ್ಸಿನಾಟ’ ಸಹ ಬಿಡುಗಡೆ ಆಗುತ್ತಿದೆ.

ಗಿಮಿಕ್​

ಗಿಮಿಕ್ :ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿನಿಮಾ ಸಾಮಿ ಪಿಕ್ಚರ್ಸ್ ಅಡಿಯಲ್ಲಿ ದೀಪಕ್ ನಿರ್ಮಾಣ ಮಾಡಿರುವ ಚಿತ್ರಕ್ಕೆ ಹಿರಿಯ ನಿರ್ದೇಶಕ ನಾಗಣ್ಣ ನಿರ್ದೇಶನ ಮಾಡಿದ್ದು, ಚಿತ್ರಕ್ಕೆ ನಂಜುಂಡ ಸಂಭಾಷಣೆ, ಕವಿರಾಜ್ ಸಾಹಿತ್ಯ, ಅರ್ಜುನ್ ಜನ್ಯ ಸಂಗೀತ, ವಿಜ್ಞೇಶ್ ಛಾಯಾಗ್ರಹಣ, ಸುರೇಶ್ ಕಲಾ ನಿರ್ದೇಶನ, ಮುರಳಿ ನೃತ್ಯ, ಸುರೇಶ್ ಅರಸ್ ಸಂಕಲನ ಮಾಡಿದ್ದಾರೆ. ಮೋನಿಕ್ ಸಿಂಗ್​ ಮೊದಲ ಬಾರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಾಯಕಿಯಾಗಿ ನಟಿಸಿದ್ದಾರೆ. ಸುಂದರ್ ರಾಜ್, ಶೋಭಾರಾಜ್, ಮಂಡ್ಯ ರಮೇಶ್, ಚಿ ಗುರುದತ್, ರವಿಶಂಕರ್ ಗೌಡ, ಸಂಗೀತ, ಶ್ವೇತ ಹಾಗೂ ಇತರರು ತಾರಗಣದಲ್ಲಿದ್ದಾರೆ.

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ :ಇದು ಕ್ರಿಸ್ಟಲ್ ಪಾರ್ಕ್ ಟಿ ಆರ್ ಚಂದ್ರಶೇಖರ್ ನಿರ್ಮಾಣದ ನಾಲ್ಕನೇ ಕನ್ನಡ ಸಿನಿಮಾ ಆಗಿದ್ದು, ಹಾಸ್ಯ ಪಾತ್ರಗಳಿಗೆ ಪ್ರಸಿದ್ಧಿ ಆಗಿರುವ ನಟ ಸುಜಯ್ ಶಾಸ್ತ್ರೀ ನಿರ್ದೇಶನವಿದೆ. ಪ್ರದೀಪ್ ಹಾಗೂ ಸುಜಯ್ ಕಥೆ ಹಾಗೂ ಚಿತ್ರಕಥೆ ಬರೆದಿದ್ದಾರೆ. ಪ್ರಸನ್ನ ಎಂ ವಿ ಸಂಭಾಷಣೆ ರಚಿಸಿದ್ದಾರೆ. ಮಣಿಕಾಂತ್ ಖದ್ರಿ ಸಂಗೀತ, ಸುನೀತ್ ಹಲಗೇರಿ ಛಾಯಾಗ್ರಹಣ, ಎಸ್ ಶ್ರೀಕಾಂತ್ ಶ್ರಾಫ್ ಸಂಕಲ ಒದಗಿಸಿದ್ದಾರೆ. ಒಂದು ಮೊಟ್ಟೆಯ ಕಥೆ ಖ್ಯಾತಿ ರಾಜ್ ಬಿ ಶೆಟ್ಟಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರೆ, ಪರ್ಪಲ್ ಪ್ರಿಯ ಆಗಿ ಕವಿತಾ ಗೌಡ ನಾಯಕಿ, ಪ್ರಮೋದ್ ಶೆಟ್ಟಿ, ಶೋಭಾರಾಜ್, ಮಂಜುನಾಥ್ ಹೆಗ್ಡೆ, ಬಾಬು ಹಿರಣ್ಣಯ್ಯ, ಗಿರೀಶ್​, ಶಿವಣ್ಣ, ಅರುಣ ಬಾಲರಾಜ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ.

ಮನಸ್ಸಿನಾಟ

ಮನಸ್ಸಿನಾಟ :ಮಕ್ಕಳು ಆಡುವ ಬ್ಲೂ ವೇಲ್ ಆಟ ಹಾಗೂ ಮೊಬೈಲ್ ಕುರಿತಾದ ಸಿನಿಮಾ ಆಗಿದ್ದು, ಈ ವಾರ ಬಿಡುಗಡೆ ಆಗುತ್ತಿರುವ ‘ಮನಸ್ಸಿನಾಟ’ ಸಾಮಾಜಿಕ ಕಳಕಳಿ ಇರುವ ಚಿತ್ರ ತಂತ್ರಜ್ಞಾನದ ಅನ್ವೇಷಣೆಯಿಂದ ಆಗುವ ದುಷ್ಪರಿಣಾಮ ಸಹ ಅವಲೋಕಿಸುತ್ತದೆ. ಅದೇ ‘ಬ್ಲೂ ವೇಲ್ ಗೇಮ್’ - ನೀಲಿ ತಿಮಿಂಗಿಲ ಎಂಬ ಉಪ ಶಿರ್ಷಿಕೆಯನ್ನು ಹೊಂದಿದೆ. ನಿಕೇತನ್ ಸಿನಿಮಾಸ್​ ಮತ್ತು ನೆರಳು ಮೀಡಿಯಾ ಅಡಿಯಲ್ಲಿ ಡಿ ಮಂಜುನಾಥ್, ಹನುಮೇಶ್ ಗಂಗಾವತಿ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಆರ್ ರವೀಂದ್ರ ಈ ಸಿನಿಮಾ ನಿರ್ದೇಶಕರೂ. ಡಿ ಮಂಜುನಾಥ್ ಅವರ ಕಥೆಗೆ ಆರ್ ರವೀಂದ್ರ ಹಾಗೂ ಮಧು ಕಟ್ಟೆ ಚಿತ್ರಕಥೆ ಮಾಡಿದ್ದಾರೆ. ಹನುಮೇಶ್ ಪಾಟೀಲ್ ಸಂಕಲನ, ಸಚಿನ್ ಸಂಗೀತ, ಮಂಜುನಾಥ್ ಬಿ ನಾಯಕ್ ಛಾಯಾಗ್ರಹಣ ಇರುವ ಈ ಚಿತ್ರದಲ್ಲಿ ರಾಜೇಶ್ ಕೃಷ್ಣನ್​ ಅವರ ಒಂದು ಭಾವನಾತ್ಮಕ ಹಾಡನ್ನು ಡಾ ವಿ ನಾಗೇಂದ್ರ ಪ್ರಸಾದ್ ರಚಿಸಿದ್ದಾರೆ.

ತಾರಾಗಣದಲ್ಲಿ ಮಾಸ್ಟರ್ ಹರ್ಷಿತ್, ಮಾಸ್ಟರ್ ಮಂಜು, ಪ್ರೀತಿಕ, ಸ್ವಪ್ನ, ನಟರಾಜ್, ದತ್ತಣ್ಣ, ಯಮುನ ಶ್ರೀನಿದಿ, ರಾಮಸ್ವಾಮಿ, ಚಂದನ್, ಮಂಜುನಾಥ್ ಹೆಗ್ಡೆ, ರಮೇಶ್ ಪಂಡಿತ್, ಹನುಮೇಶ್ ಪಾಟಿಲ್, ಡಿ ಮಂಜುನಾಥ್, ಪುಷ್ಪ, ವಾಸು ಪ್ರಸಾದ್, ಸೋನು ಉಪಾಧ್ಯಾಯ ಹಾಗೂ ಇತರರು ಇದ್ದಾರೆ.

ABOUT THE AUTHOR

...view details