ಸೆಪ್ಟೆಂಬರ್ 18 ಸೂಪರ್ ಸ್ಟಾರ್ ಉಪೇಂದ್ರ ಬರ್ತ್ ಡೇ. ಪ್ರತಿ ವರ್ಷ ಅಭಿಮಾನಿಗಳು ಬುದ್ದಿವಂತನ ಬರ್ತ್ ಡೇಯನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡ್ತಿದ್ರು. ಅದ್ರೆ ಈ ವರ್ಷ ಕೊರೊನಾ ರಿಯಲ್ ಸ್ಟಾರ್ ಹುಟ್ಟು ಹಬ್ಬದ ಆಚರಣೆಗೆ ಬ್ರೇಕ್ ಹಾಕಿದೆ.
ಕೊರೊನಾ ಭೀತಿಯಿಂದ ಹುಟ್ಟುಹಬ್ಬ ಆಚರಣೆಯನ್ನೇ ಕೈಬಿಟ್ಟ ಉಪ್ಪಿ
ಕೊರೊನಾ ಇರೋದ್ರಿಂದ ಈ ಬಾರಿ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ನಟ ಉಪೇಂದ್ರ ಹೇಳಿದ್ದಾರೆ. ನನ್ನ ಬರ್ತ್ ಡೇ ದಿನ ಯಾರೂ ನಮ್ಮ ಮನೆ ಬಳಿ ಬರಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಸೆಪ್ಟೆಂಬರ್ 18 ರಂದು ನನ್ನ ಹುಟ್ಟು ಹಬ್ಬ ಸೆಲೆಬ್ರೇಟ್ ಮಾಡಲು ಯಾರು ಮನೆ ಬಳಿ ಬರಬೇಡಿ. ನಾನು 5 ದಿನಗಳು ಮನೆಯಲ್ಲಿ ಇರಲ್ಲ. ಅಲ್ಲದೆ ಪ್ರತಿ ವರ್ಷದ ನಿಮ್ಮ ಬೇಡಿಕೆಯಾದ ನನ್ನ ಡೈರೆಕ್ಷನ್ ಸದ್ಯದಲ್ಲೇ ಅನೌನ್ಸ್ ಮಾಡ್ತಿದ್ದೀನಿ ಎಂದು ನಟ ಉಪೇಂದ್ರ ತಿಳಿಸಿದ್ದಾರೆ.
ಸದ್ಯ ಸಾಕಷ್ಟು ಸಿನಿಮಾಗಳ ಕಮಿಟ್ ಆಗಿದ್ದು, ಅವೆಲ್ಲ ಮುಗಿಸಿ ಶೀಘ್ರದಲ್ಲೇ ಟೈಟಲ್ ಅನೌನ್ಸ್ ಮಾಡ್ತಿನಿ. ಈಗಾಗಲೇ ಸ್ಕ್ರಿಪ್ಟ್ ಬಗ್ಗೆ ಥಿಂಕ್ ಮಾಡಿದ್ದು, ಸದ್ಯದ ಪರಿಸ್ಥಿತಿಗೆ ಹೊಂದುವಂತೆ ಸ್ಕ್ರಿಪ್ಟ್ ಮಾಡಬೇಕಿದೆ. ಶೀಘ್ರದಲ್ಲೇ ನನ್ನ ಡೈರೆಕ್ಷನ್ ಸಿನಿಮಾದ ಟೈಟಲ್ ಅನೌನ್ಸ್ ಮಾಡ್ತಿನಿ. ನನ್ನ ಹುಟ್ಟಿದ ದಿನ ಅದು ನಿಮ್ಮ ದಿನ. ಕೊರೊನಾದಿಂದ ನಾನು ನಿಮ್ಮನ್ನ ಮಿಸ್ ಮಾಡಿಕೊಳ್ತಿದ್ದೀನಿ ಎಂದು ಉಪ್ಪಿ ಅಭಿಮಾನಿ ದೇವರುಗಳಿಗೆ ಹೇಳಿದ್ದಾರೆ.