ಕರ್ನಾಟಕ

karnataka

ETV Bharat / sitara

ಕನ್ನಡ ಸಿನಿರಂಗದ ಇತಿಹಾಸದಲ್ಲೇ ಮೊದಲ ZOMBIE ಸಿನಿಮಾ!

ಕನ್ನಡ ಸಿನಿರಂಗದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಝೋಂಬಿ ಕಾನ್ಸೆಪ್ಟ್ ತರುವುದಕ್ಕೆ ‘ಆನಾ’ ಚಿತ್ರತಂಡ ರೆಡಿಯಾಗಿದೆ.

the-first-zombie-movie-in-the-history-of-kannada-cinema
ಕನ್ನಡ ಸಿನಿಮಾರಂಗದ ಇತಿಹಾಸದಲ್ಲೇ ಮೊಟ್ಟ ಮೊದಲ ZOMBIE ಸಿನಿಮಾ

By

Published : Apr 14, 2021, 8:27 PM IST

ಭಾರತದಲ್ಲೇ ಮೊದಲ ಸೂಪರ್ ವುಮೆನ್ ಸಿನಿಮಾ ಮಾಡಿ ಎಲ್ಲರ ಗಮನ ಸೆಳೆದಿದ್ದ ‘ಆನಾ’ ಚಿತ್ರತಂಡದಿಂದ ಮಾತ್ತೊಂದು ಹೊಸ ಪ್ರಯತ್ನ ಶುರುವಾಗಿದೆ. ಆನಾ ಮತ್ತು ಬ್ಯಾಂಗ್ ಚಿತ್ರಕ್ಕೆ ಕೆಲಸ ಮಾಡಿರುವ ಆನಂದ್ ರಾಜ್ ಮೊದಲ ಬಾರಿಗೆ ಕನ್ನಡದಲ್ಲಿ ಝೋಂಬಿ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

'ಆನಾ' ನಿರ್ದೇಶಕ ಮನೋಜ್ ಪಿ. ನಡಲುಮನೆ ಈ ಸಿನಿಮಾಗೆ ಕಥೆ ಬರೆದಿದ್ದಾರೆ. ಆನಾ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರೋ ರನ್ವಿತ್ ಶಿವಕುಮಾರ್ ಈ ಬಾರಿ ನಟನೆಯ ಜೊತೆಗೆ ಕ್ರಿಯೇಟಿವ್ ಹೆಡ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೊಂದು ಝೋಂಬಿ ಸಿನಿಮಾವಾಗಿರಲಿದ್ದು, ಕನ್ನಡ ಇಂಡಸ್ಟ್ರಿಯಲ್ಲೇ ಮೊದಲ ಪ್ರಯತ್ನವಾಗಿದೆ.

ಸಿನಿಮಾ ತುಂಬಾನೇ ರಿಚ್ ಆಗಿಯೇ ನಿರ್ಮಾಣವಾಗಲಿದ್ದು, ತಾರಾಬಳಗದ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಚಿತ್ರತಂಡ ಹೇಳಿದೆ. ಅಂದುಕೊಂಡಂತೆ ಎಲ್ಲವೂ ಆದ್ರೆ ಸಿನಿಮಾ ಶೂಟಿಂಗ್ ಮುಂದಿನ ತಿಂಗಳ ಅಂತ್ಯದ ವೇಳೆಗೆ ಶುರುವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ. ಹೊಸಬರಿಂದ ಕೂಡಿರುವ ತಂಡ ಇಂತಹ ಅದ್ಭುತ ಪ್ರಯೋಗಕ್ಕೆ ಕೈ ಹಾಕಿದ್ದು, ಈಗಿನ ಯೂತ್ಸ್ ಅಭಿರುಚಿಯನ್ನ ಗಮನದಲ್ಲಿಟ್ಟುಕೊಂಡೇ ಸಿನಿಮಾ ಮಾಡುತ್ತಿರುವುದು ವಿಶೇಷವಾಗಿದೆ.

ಅಂದಹಾಗೆ ಏನಿದು ಝೋಂಬಿ…?

ಝೋಂಬಿ ಅಂದ್ರೆ ಸಹಜವಾಗಿ ರಕ್ತಪಿಶಾಚಿಯ ಕಾನ್ಸೆಪ್ಟ್ ಅಥವಾ ಒಂದು ವೈರಸ್ ಕುರಿತ ಸಿನಿಮಾ. ಸಾಮಾನ್ಯವಾಗಿ ಈ ಝೋಂಬಿ ಕಥೆಗಳಲ್ಲಿ ವೈರಸ್ ಇರುವ ವ್ಯಕ್ತಿ ಮತ್ತೊಬ್ಬರಿಗೆ ಕಚ್ಚಿದಾಗ ಅವರೂ ಸಹ ರಕ್ತಪಿಶಾಚಿ ಅಥವಾ ಝೋಂಬಿ ರೀತಿ ಆಗಿ ಬೇರೆಯವರನ್ನ ಬೇಟೆಯಾಡಲು ಹೋಗುತ್ತಾರೆ. ಈ ರೀತಿಯಾದ ಸಿನಿಮಾಗಳು ಈಗಿನ ಜೆನರೇಷನ್​ನ ಮಕ್ಕಳು ಹಾಗೂ ಯೂತ್ಸ್​​ಗೆ ತುಂಬಾ ಇಷ್ಟವಾಗುತ್ತೆ.

ಸಾಮಾನ್ಯವಾಗಿ ಹಾಲಿವುಡ್ ಸಿನಿಮಾಗಳಲ್ಲಿ ಝೋಂಬಿ ತುಂಬಾನೇ ಫೇಮಸ್ ಸೀರೀಸ್. ವಿಶ್ವಾದ್ಯಂತ ಎಲ್ಲಾ ಜನರು ಇಷ್ಟಪಟ್ಟು ನೋಡುವ ಒಂದು ಹಾರರ್ ಅಂಡ್ ಟೆರರ್ ಕಾನ್ಸೆಪ್ಟ್ ಕೂಡ ಹೌದು. ಹೀಗಾಗಿಯೇ ಝೋಂಬೀಸ್ ಆಧಾರಿತ ಅನೇಕ ಸಿನಿಮಾಗಳು, ಅದರ ಸೀರೀಸ್​ಗಳು ಬಂದುಬಿಟ್ಟಿವೆ. ಇಂತಹ ಸಿನಿಮಾಗಳ ಮೇಲೆ ಭಾರತದಲ್ಲಿ ಇರುವ ಕ್ರೇಜ್ ಗಮನಿಸಿ ಈಗಾಗಲೇ ಸಾಕಷ್ಟು ಸಿನಿಮಾಗಳು ಬಂದಿವೆ. ಆದ್ರೆ ಇದೇ ಮೊದಲ ಬಾರಿಗೆ ಕನ್ನಡದಲ್ಲಿಯೂ ರಿಲೀಸ್​ ಆಗಲು ದಿನಗಳನ್ನು ಎದುರು ನೋಡುತ್ತಿದೆ.

ಓದಿ:ಮುಷ್ಕರ ಹೂಡಿದ್ರೆ ಈವರೆಗಿನ ಯಾವ ಸರ್ಕಾರವೂ ಇಷ್ಟು ಕಟುವಾಗಿರಲಿಲ್ಲ.. ಆದರೆ, ಯಡಿಯೂರಪ್ಪ..

ABOUT THE AUTHOR

...view details