ಕರ್ನಾಟಕ

karnataka

ETV Bharat / sitara

ಬಾಲಿವುಡ್‌ ಯುವ ನಟನ ದೊಡ್ಡ ಅಭಿಮಾನಿಯಂತೆ 'ದಳಪತಿ' ವಿಜಯ್​! - Actor Tiger Shroff

ಕಾಲಿವುಡ್‌ನ ಸ್ಟಾರ್ ನಟ 'ದಳಪತಿ' ವಿಜಯ್​ ಬಾಲಿವುಡ್‌ ಯುವ ನಟ ಟೈಗರ್ ಶ್ರಾಫ್​ರ ದೊಡ್ಡ ಅಭಿಮಾನಿಯಂತೆ. ಅವರ ಸಿನಿಮಾಗಳನ್ನು ತೆರೆಮೇಲೆ ನೋಡಿ ವಿಜಯ್ ಎಂಜಾಯ್ ಮಾಡುತ್ತಾರಂತೆ.

Kollywood actor Vijay
ಕಾಲಿವುಡ್​​ ನಟ ವಿಜಯ್

By

Published : Jun 24, 2021, 11:35 AM IST

ಕಾಲಿವುಡ್​​ ನಟ ವಿಜಯ್​ಗೆ ಬರೀ ತಮಿಳುನಾಡಿನಲ್ಲಷ್ಟೇ ಅಲ್ಲ, ಭಾರತದೆಲ್ಲೆಡೆ ಅಪಾರ ಪ್ರಮಾಣದ ಅಭಿಮಾನಿ ಬಳಗವಿದೆ. ವಿಜಯ್ ಸಿನಿಮಾಗಳಿಗೆ ಸೌತ್ ಇಂಡಿಯಾದಲ್ಲೇ ದೊಡ್ಡ ಮಾರುಕಟ್ಟೆ ಇದೆ. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ವಿಜಯ್‌, ಬಾಲಿವುಡ್‌ನ ಯುವನಟರೊಬ್ಬರ ಅಭಿಮಾನಿಯಂತೆ. ಈ ವಿಷಯವನ್ನು ಮಾಸ್ಟರ್ ಚಿತ್ರದಲ್ಲಿ ವಿಜಯ್‌ ಜೊತೆ ನಟಿಸಿದ್ದ ಮಾಳವಿಕ ಮೋಹನನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಹೌದು.. ಇತ್ತೀಚೆಗೆ ಸಂದರ್ಶನವೊಂದರಲ್ಲಿ ವಿಜಯ್​ ಬಗ್ಗೆ ಮಾತನಾಡಿರುವ ಮಾಳವಿಕಾ ಮೋಹನನ್, 'ಮಾಸ್ಟರ್' ಚಿತ್ರೀಕರಣದ ಸಮಯದಲ್ಲಿ ಎಲ್ಲರೂ ಒಟ್ಟಿಗೆ ಬಾಲಿವುಡ್ ನಟ ಟೈಗರ್ ಶ್ರಾಫ್‌ ಅವರ ಹೊಸ ಸಿನಿಮಾ 'ಭಾಗಿ 3' ನೋಡಲು ಚಿತ್ರಮಂದಿರಕ್ಕೆ ಹೋಗಿದ್ದೆವು. ಈ ಸಂದರ್ಭದಲ್ಲಿ ಟೈಗರ್ ಶ್ರಾಫ್ ಎಂಟ್ರಿ ಸೀನ್ ನೋಡಿ ವಿಜಯ್ ಬಹಳ ಖುಷಿಯಿಂದ ಚಪ್ಪಾಳೆ ತಟ್ಟಿದರು. ಅಷ್ಟೇ ಅಲ್ಲ 'ತಲೈವಾ' ಎಂದು ಕೂಗುತ್ತಾ ಏಂಜಾಯ್ ಮಾಡುತ್ತಿದ್ದರು.

ಟೈಗರ್ ಶ್ರಾಫ್ ಅವರನ್ನು ವಿಜಯ್ ನಿಜಕ್ಕೂ ತುಂಬಾ ಇಷ್ಟಪಡುತ್ತಾರೆ. ಅವರ ದೊಡ್ಡ ಅಭಿಮಾನಿಯಾಗಿಬಿಟ್ಟಿದ್ದಾರೆ ಎಂದು ಮಾಳವಿಕಾ ತಿಳಿಸಿದ್ದಾರೆ.

ಇದನ್ನೂ ಓದಿ:ಆ.12ರಂದು 'ಮರಕ್ಕರ್: ಅರಬಿಕಡಲಿಂಟೆ ಸಿಂಹಂ' ಚಿತ್ರ ಬಿಡುಗಡೆ

ABOUT THE AUTHOR

...view details