ಪ್ರತಿದಿನ ಮಧ್ಯಾಹ್ನ ಸುಜಾತ ಅಕ್ಷಯಾ ನಡೆಸಿಕೊಡುವ ಅಡುಗೆ ಕಾರ್ಯಕ್ರಮ 'ಕಿಚನ್ ದರ್ಬಾರ್' ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಈಗಾಗಲೇ ಸುಮಾರು ಸೆಲೆಬ್ರಿಟಿಗಳು ಈ ಶೋಗೆ ಅತಿಥಿಗಳಾಗಿ ಬಂದು ಹೋಗಿದ್ದಾರೆ. ಆದ್ರೆ ಈ ಬಾರಿ ಬಂದಿರುವ ಅತಿಥಿವೋರ್ವರಿಂದ ಕಿಚನ್ ದರ್ಬಾರ್ ಕಾರ್ಯಕ್ರಮದ ಮೆರುಗು ಮತ್ತಷ್ಟು ಹೆಚ್ಚಿದೆ. ಅವರೇ ಹೆಸರಾಂತ ಸಾಹಿತಿ, ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ.
ನಿರೂಪಕಿ ಸುಜಾತ ಜೊತೆ ಕಿಚನ್ ದರ್ಬಾರ್ ಕಾರ್ಯಕ್ರಮದಲ್ಲಿ ಸುಮಧುರ ಕ್ಷಣಗಳನ್ನು ಕಳೆದಿರುವ ಸುಧಾ ಮೂರ್ತಿ, ತಮ್ಮಿಷ್ಟದ ತಿಂಡಿಯ ಬಗ್ಗೆ ಅದರಲ್ಲೂ ಉತ್ತರ ಕರ್ನಾಟಕದ ಅಡುಗೆಗಳ ಬಗ್ಗೆ ಮಾತನಾಡಿದ್ದಾರೆ.
ಮಹಿಳಾ ಸಬಲೀಕರಣದ ಬಗ್ಗೆಯೂ ಮಾತನಾಡಿರುವ ಅವರು ಮಹಿಳೆ ಯಾವ ರೀತಿ ಸ್ಟ್ರಾಂಗ್ ಆಗಿರಬೇಕು ಎಂಬುದನ್ನು ವೀಕ್ಷಕರಿಗೆ ಹೇಳಿದರು. ಕಿಚನ್ ದರ್ಬಾರ್ನಲ್ಲಿ ತಮಾಷೆಯಿಂದ ಮಾತನಾಡಿದ ಸುಧಾ ಮೂರ್ತಿ ಅವರು ಅಡುಗೆ ಮಾಡುವಾಗ ನಡೆದ ಸನ್ನಿವೇಶಗಳನ್ನು ಮೆಲುಕು ಹಾಕಿದರು.
ಸುಜಾತಾ ಅಕ್ಷಯಾ ನಡೆಸಿಕೊಡುವ ಅಡುಗೆ ಕಾರ್ಯಕ್ರಮ 'ಕಿಚನ್ ದರ್ಬಾರ್' ಸುಧಾಮೂರ್ತಿ ಕಿಚನ್ ದರ್ಬಾರ್ ಸುಧಾ ಮೂರ್ತಿ ಕಿಚನ್ ದರ್ಬಾರ್ ಕಾರ್ಯಕ್ರಮಕ್ಕೆ ಬಂದಿದ್ದು ಅದ್ಭುತ ಕ್ಷಣಗಳು. ಇದು ನನಗೆ ತುಂಬಾ ಖುಷಿ ತಂದಿದೆ. ನಾನು ಸುಧಾ ಮೂರ್ತಿಯವರಿಗೆ ಕಾರ್ಯಕ್ರಮಕ್ಕೆ ಬರಲು ಆಹ್ವಾನವಿತ್ತಾಗ ಇಲ್ಲ ಎನ್ನದೇ ಒಪ್ಪಿಕೊಂಡಿದ್ದರು. ಕಿಚನ್ ದರ್ಬಾರ್ನಲ್ಲಿ ಸುಧಾ ಅವರೊಂದಿಗೆ ಕಳೆದ ಕ್ಷಣ ತುಂಬಾ ಮಧುರವಾಗಿತ್ತು" ಎಂದು ಸುಜಾತ ಹೇಳಿದ್ದಾರೆ.
ಸುಧಾಮೂರ್ತಿ ಕಿಚನ್ ದರ್ಬಾರ್ ಅಡುಗೆ ಮನೆಯಲ್ಲಿ ಇನ್ಫೋಸಿಸ್ ಮುಖ್ಯಸ್ಥೆ ಅಡುಗೆ ಮನೆಯಲ್ಲಿ ಇನ್ಫೋಸಿಸ್ ಮುಖ್ಯಸ್ಥೆ ಅಂದಹಾಗೆ ಸುಧಾ ಮೂರ್ತಿ ಅವರ ಈ ಸಂಚಿಕೆ ಮಾರ್ಚ್ 8 ರ ಮಹಿಳಾ ದಿನಾಚರಣೆಯಂದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.