ತಬ್ಬಲಿ ಹೆಣ್ಣು ಮಗುವಿನ ಶಿಕ್ಷಣಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನೆರವಾಗಿದ್ದಾರೆ. ತಂದೆ ಇಲ್ಲದ ಪುಟ್ಟ ಮಗುವನ್ನು ದತ್ತು ಪಡೆದು ಆ ಮಗುವಿನ ಶಿಕ್ಷಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಮೂಲಕ ಮಗುವನ್ನು ದತ್ತು ಪಡೆದಿದ್ದು, ಇಂದು ಶಾಲೆಗೆ ಟ್ರಸ್ಟ್ನ ಸದಸ್ಯರು ಫೀಸ್ ಕಟ್ಟಿದ್ದಾರೆ. ಆರನೇ ತರಗತಿ ಓದುತ್ತಿರುವ ಕನೀಷಾ, ಬೆಂಗಳೂರಿನ ನಾಗದೇವನ
ಹಳ್ಳಿಯ ಬಡ ಕುಟುಂಬದ ಹೆಣ್ಣು ಮಗಳು.
ತಂದೆ ಇಲ್ಲದ ಮಗು ದತ್ತು ಪಡೆದು ವಿದ್ಯಾಭ್ಯಾಸದ ಜವಾಬ್ದಾರಿ ಹೊತ್ತ ಕಿಚ್ಚ ಲಾಕ್ಡೌನ್ ಎಫೆಕ್ಟ್ನಿಂದ ಸಂಕಷ್ಟದಲ್ಲಿ ಸಿಲುಕಿದ್ದ ಕನೀಷಾ ತಾಯಿ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ಗೆ ಹೋಗಿದ್ರು. ಕನೀಷಾ ತಾಯಿ ಮನವಿಗೆ ಸ್ಪಂದಿಸಿದ ಸುದೀಪ್ ಮತ್ತು ತಂಡ ಕೂಡಲೇ ಕನೀಷಾ ಕುಟುಂಬಕ್ಕೆ ನೆರವಾಗಿದೆ.
ತಂದೆ ಇಲ್ಲದ ಮಗು ದತ್ತು ಪಡೆದು ವಿದ್ಯಾಭ್ಯಾಸದ ಜವಾಬ್ದಾರಿ ಹೊತ್ತ ಕಿಚ್ಚ ತಂದೆಯಿಲ್ಲದೆ ತಾಯಿಯ ಮಡಿಲಲ್ಲಿ ಬೆಳೆಯುತ್ತಿದ್ದ ಕನೀಷಾಳನ್ನು ದತ್ತು ಪಡೆದ ಕಿಚ್ಚ ಆ ಹೆಣ್ಣು ಮಗುವಿನ ವಿದ್ಯಾಭ್ಯಾಸದ ಜವಾಬ್ದಾರಿ ಹೊತ್ತಿದ್ದಾರೆ.