ಕರ್ನಾಟಕ

karnataka

ETV Bharat / sitara

ತಾಯಿ ಒಪ್ಪಿದ ಸಿನಿಮಾಗಳನ್ನು ಮಾತ್ರ ಮಾಡ್ತಾರಂತೆ ಈ ನಟಿ

ಕಿಸ್ ಹಾಗೂ ಭರಾಟೆ ಚಿತ್ರದ ನಂತರ ಶ್ರೀಲೀಲಾ ಯಾವ ಚಿತ್ರದಲ್ಲಿ ಕಾಣಿಸ್ತಾರೆ ಎಂಬ ಕುತೂಹಲದಲ್ಲಿದ್ದ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಭರಾಟೆ ಚಿತ್ರದ ನಂತರ ಶ್ರೀಲೀಲಾ ಸುಮಾರು 20 ಕಥೆಗಳನ್ನು ಕೇಳಿದ್ದು, ಶೀಘ್ರದಲ್ಲೇ ಹೊಸ ಚಿತ್ರವನ್ನು ಅನೌನ್ಸ್ ಮಾಡುವುದಾಗಿ ಹೇಳಿದ್ದಾರೆ.

Srileela speak about 2020  project
ತಾಯಿ ಒಪ್ಪಿದ ಸಿನಿಮಾಗಳನ್ನು ಮಾತ್ರ ಮಾಡ್ತಾರಂತೆ ಈ ನಟಿ

By

Published : Dec 18, 2019, 8:58 AM IST

'ಕಿಸ್ 'ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ಮೈಸೂರು ಹುಡ್ಗಿ ಶ್ರೀಲೀಲಾ 'ಭರಾಟೆ' ಚಿತ್ರದ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಲಗ್ಗೆ ಇಟ್ಟಿದ್ರು. ಅಲ್ಲದೆ ಒಂದೇ ವರ್ಷದಲ್ಲಿ ಎರಡು ಸಿನಿಮಾ ರಿಲೀಸ್ ಆಗಿರೋದ್ರಿಂದ ನನಗೆ 2019 ತುಂಬಾ ಮೆಮೋರಬಲ್ ಇಯರ್ ಎನ್ನುತ್ತಾರೆ. ಅಲ್ಲದೆ 2020ಕ್ಕೆ ಭರ್ಜರಿ ಪ್ಲಾನ್ ಮಾಡಿಕೊಂಡಿರುವುದಾಗಿಯೂ ತಿಳಿಸಿದ್ದಾರೆ.

ಹೌದು, ಕಿಸ್ ಹಾಗೂ ಭರಾಟೆ ಚಿತ್ರದ ನಂತರ ಶ್ರೀಲೀಲಾ ಯಾವ ಚಿತ್ರದಲ್ಲಿ ಕಾಣಿಸ್ತಾರೆ ಎಂಬ ಕುತೂಹಲದಲ್ಲಿದ್ದ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಭರಾಟೆ ಚಿತ್ರದ ನಂತರ ಶ್ರೀಲೀಲಾ ಸುಮಾರು 20 ಕಥೆಗಳನ್ನು ಕೇಳಿದ್ದು, ಶೀಘ್ರದಲ್ಲೇ ಹೊಸ ಚಿತ್ರವನ್ನು ಅನೌನ್ಸ್ ಮಾಡುವುದಾಗಿ ಹೇಳಿದ್ದಾರೆ.

ಸುಮಾರು 20 ಕಥೆಗಳನ್ನು ಕೇಳಿದ್ದು, ಶೀಘ್ರದಲ್ಲೇ ಹೊಸ ಚಿತ್ರವನ್ನು ಅನೌನ್ಸ್ ಮಾಡುತ್ತೇನೆ: ಶ್ರೀಲೀಲಾ

ಒಂದೊಳ್ಳೆ ಫ್ಯಾಮಿಲಿ ಎಂಟರ್​​ಟೈನ್​​ಮೆಂಟ್​ ಸಿನಿಮಾ ಮಾಡಬೇಕು ಎಂಬ ನಿಟ್ಟಿನಲ್ಲಿ ಸುಮಾರು 20 ಕಥೆಗಳನ್ನು ಕೇಳಿದ್ದೇನೆ. ಎಲ್ಲಾ ಕಥೆಗಳು ತುಂಬಾ ಇಷ್ಟವಾಗಿವೆ. ಆದರೆ ಅಷ್ಟು ಸಿನಿಮಾಗಳನ್ನು ಮಾಡೋಕೆ ಸಾಧ್ಯವಿಲ್ಲ. ಮನೆಯವರ ಜೊತೆ ಚರ್ಚೆ ಮಾಡಿ ಅಮ್ಮನೊಂದಿಗೆ ಮಾತುಕತೆ ನಡೆಸಿ ಸಿನಿಮಾ ಯಾವುದು ಅಂತ ತಿಳಿಸುವುದಾಗಿ ಹೇಳಿದ್ರು.

ಇಂಡಸ್ಟ್ರಿಯಲ್ಲಿ ಇರುವ ಎಲ್ಲಾ ನಟರ ಜೊತೆ ನಟಿಸಬೇಕು ಎಂಬ ಆಸೆ ನನಗಿದೆ. ಕಡಿಮೆ ಅವಧಿಯಲ್ಲಿ ಎಲ್ಲಾ ನಟರ ಜೊತೆ ನಟಿಸುವ ಆಸೆ ಇದೆ. ಉತ್ತಮ ಕಥೆಗಳು ಬಂದರೆ ಹೊಸ ನಟರ ಜೊತೆಯೂ ಸಿನಿಮಾ ಮಾಡುತ್ತೇನೆ ಎಂದು ಹೇಳಿದರು.

ABOUT THE AUTHOR

...view details