ಇತ್ತೀಚಿನ ದಿನಗಳಲ್ಲಿ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕವೇ ಜನಮಾನಸದಲ್ಲಿ ಜಾಗ ಪಡೆದಿರುವ ಬಾಲಿವುಡ್ ನಟ ಸೋನು ಸೂದ್, ತಮ್ಮ ತಾಯಿಯ ಹುಟ್ಟುಹಬ್ಬದಂದು ಭಾವುಕ ಫೋಸ್ಟ್ ಹಾಕಿದ್ದಾರೆ. ಜೊತೆಗೆ ಅಮ್ಮನ ಅಪರೂಪದ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಅಮ್ಮನ ಹುಟ್ಟುಹಬ್ಬದಂದು ಭಾವುಕ ಪೋಸ್ಟ್ ಹಾಕಿದ ರಿಯಲ್ ಹೀರೋ - ನಟ ಸೋನು ಸೂದ್ ತಾಯಿ ಹುಟ್ಟುಹಬ್ಬ
ಸಮಾಜಸೇವೆಯ ಮುಖಾಂತರ ರಿಯಲ್ ಹೀರೋ ಎನಿಸಿಕೊಂಡಿರುವ ನಟ ಸೋನು ಸೂದ್, ತಮ್ಮ ತಾಯಿಯ ಹುಟ್ಟುಹಬ್ಬದ ಪ್ರಯುಕ್ತ ಇನ್ಸ್ಟಾಗ್ರಾಮ್ನಲ್ಲಿ ಭಾವುಕ ಫೋಸ್ಟ್ ಹಾಕಿದ್ದಾರೆ.
ಜೂನ್ 21ರಂದು ಸರೋಜ್ ಸೂದ್ ಅವರ ಜನ್ಮದಿನ. ಆ ಪ್ರಯುಕ್ತ ಅಮ್ಮನನ್ನು ನೆನೆದು ಸೋನು ಸೂದ್ ಭಾವುಕ ಪತ್ರ ಬರೆದಿದ್ದಾರೆ. ‘ಹುಟ್ಟುಹಬ್ಬದ ಶುಭಾಶಯಗಳು ಅಮ್ಮ'. ಪ್ರತಿ ವರ್ಷ ನಿಮ್ಮನ್ನು ತಬ್ಬಿಕೊಂಡು ನೇರವಾಗಿ ವಿಶ್ ಮಾಡಬೇಕು ಹಾಗೂ ಬದುಕಿನ ಪಾಠಗಳನ್ನು ಕಲಿಸಿದ್ದಕ್ಕೆ ಧನ್ಯವಾದ ಅರ್ಪಿಸಬೇಕು ಎಂದು ಬಯಸುತ್ತೇನೆ. ನನ್ನ ಕೆಲಸವನ್ನು ನಾನು ಉತ್ತಮವಾಗಿ ಮಾಡಿ, ನಿಮಗೆ ಹೆಮ್ಮೆ ತರುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ.
ನಾನು ನಿಮ್ಮನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಈ ಮೆಸೇಜ್ಗಳಿಂದ ತಿಳಿಸಲು ಸಾಧ್ಯವೇ ಇಲ್ಲ. ನೀವು ಇಲ್ಲದೇ ನನ್ನ ಬದುಕಿನಲ್ಲಿ ಖಾಲಿತನ ಉಂಟಾಗಿದೆ. ನಾನು ನಿಮ್ಮನ್ನು ಮತ್ತೆ ಭೇಟಿ ಆಗುವವರೆಗೂ ಆ ಖಾಲಿತನ ತುಂಬಲು ಸಾಧ್ಯವಿಲ್ಲ. ನೀವು ಎಲ್ಲೇ ಇದ್ದರೂ ಖುಷಿ ಆಗಿರಿ. ನನಗೆ ಮಾರ್ಗದರ್ಶನ ನೀಡುತ್ತಿರಿ. ಲವ್ ಯೂ ಅಮ್ಮ’ ಎಂದು ಸೋನು ಸೂದ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನು ಓದಿ:'ಹಾಟ್ಶಾಟ್' ಆ್ಯಪ್ಗಾಗಿ ನನ್ನನ್ನು ಸಂಪರ್ಕಿಸಿದ್ದರು: Kundra ಮುಖವಾಡ ಕಳಚಿಟ್ಟ Puneeth Kaur!