ಸತ್ಯ ಹಾಗೂ ಧರ್ಮ ಯಾವಾಗಲೂ ಇದ್ದರೇನೆ ಸಮಾಜಕ್ಕೆ ಶ್ರೇಯಸ್ಸು. ಆದರೆ, ನಾವು ಹೇಳುತ್ತಾ ಇರುವ ಸತ್ಯ ಹಾಗೂ ಧರ್ಮ ಬೇರೆಯದೇ ವಿಚಾರ. 'ಸತ್ಯವನ್ನೇ ಹೇಳುತ್ತೇನೆ' ಎಂಬುದು ಕಿರು ಚಿತ್ರವಾಗಿದೆ. ಇದರ ನಿರ್ದೇಶಕ ರಾಮ ರಾಮ ರೇ ಸತ್ಯ ಪ್ರಕಾಶ್ ಹಾಗೂ ಹೆಸರಾಂತ ಹಾಸ್ಯ ನಟ ಧರ್ಮಣ್ಣ ಜೊತೆಯಾಗಿ ಈ ಕಿರು ಚಿತ್ರವನ್ನು ತಯಾರಿಸಿದ್ದಾರೆ.
ಸತ್ಯವನ್ನೇ ಹೇಳುತ್ತೇನೆ: ಸಿದ್ದವಾಗಿದೆ ನೂತನ ಕಿರು ಚಿತ್ರ - new short film by sathya prakash
ನಿರ್ದೇಶಕ ರಾಮ ರಾಮ ರೇ ಸತ್ಯ ಪ್ರಕಾಶ್ ಹಾಗೂ ಹೆಸರಾಂತ ಹಾಸ್ಯ ನಟ ಧರ್ಮಣ್ಣ ಜೊತೆಯಾಗಿ ಸತ್ಯವನ್ನೇ ಹೇಳುತ್ತೇನೆ ಎಂಬ ಕಿರು ಚಿತ್ರ ತಯಾರಿಸಿದ್ದಾರೆ.
ಈ ಕಿರು ಚಿತ್ರದ ಶೀರ್ಷಿಕೆ ಸಹ ಸೊಗಸಾಗಿರುವುದರಿಂದ ಇದರ ಅನೇಕ ಕಂತುಗಳ ಕಿರು ಚಿತ್ರ ಮಾಡುವುದಾಗಿ ಸಹ ತೀರ್ಮಾನಿಸಿದ್ದಾರೆ. ಸದ್ಯಕ್ಕೆ ಲಾಕ್ಡೌನ್ ಸಮಯದಲ್ಲಿ ಸತ್ಯ - ಧರ್ಮ ಚಿಕ್ಕಮಗಳೂರಿನ ಕಡೂರಿನಲ್ಲಿ ಇದ್ದಾರೆ. ಈ ಸಮಯದಲ್ಲೇ ಅವರಿಗೆ ಈ ಐಡಿಯಾ ಸಹ ಹೊಳದದ್ದು. ಕಿರು ಚಿತ್ರದ ಪರಿಕಲ್ಪನೆ ಸತ್ಯಪ್ರಕಾಶ್, ಸಂಗೀತವನ್ನು ವಾಸುಕಿ ವೈಭವ್ ಹಾಗೂ ಸಂಕಲನವನ್ನು ಬಿ.ಎಸ್ ಕೆಂಪರಾಜ್ ನಿರ್ವಹಿಸಿದ್ದಾರೆ.
ಇನ್ನು ಸತ್ಯವನ್ನೇ ಹೇಳುತ್ತೇನೆ ಶೀರ್ಷಿಕೆಯ ಮೊದಲ ಕಿರು ಚಿತ್ರ 3 ನಿಮಿಷ 30 ಸೆಕಂಡ್ ಇದೆ. ಈಗಾಗಲೇ ಯು ಟ್ಯೂಬ್ನಲ್ಲಿ ಇದು ಲಭ್ಯವಾಗಿದೆ. ಮೊದಲ ಕಥೆ ವಸ್ತುಗಳಿಗೆ ಕೆಮ್ಮು ಬಂದರೆ ಏನಾಗುತ್ತೆ ಎಂಬುದನ್ನು ಹಾಸ್ಯಮಯವಾಗಿ ಹೇಳಲಾಗಿದೆ.