ಕರ್ನಾಟಕ

karnataka

ETV Bharat / sitara

ಹ್ಯಾಟ್ರಿಕ್ ಹಿರೋ ಶಿವಣ್ಣನಿಗೆ ಸ್ಟ್ರೀಟ್​​ ಫುಡ್​​ ಅಂದ್ರೆ ಬಲು ಇಷ್ಟನಂತೆ! - ಹ್ಯಾಟ್ರಿಕ್ ಹಿರೋ ಶಿವಣ್ಣನಿಗೆ ಸ್ಟ್ರೀಟ್​​ ಫುಡ್​​ ಅಂದ್ರೆ ಬಲು ಇಷ್ಟನಂತೆ...!

ಶಿವರಾಜ್​ ಕುಮಾರ್​​ ಶುಕ್ರವಾರ ತಮ್ಮ ಮನೆ ದೇವರಾದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿಯ ಮುತ್ತೆತ್ತರಾಯನ ಪೂಜೆಗೆ ಹೋಗಿದ್ದರು. ಪೂಜೆ ಮುಗಿಸಿಕೊಂಡು ಸೀದಾ ಅವರು ಹೋಗಿದ್ದು ಒಂದು ಶೆಡ್ ಹೋಟೆಲ್‌ಗೆ. ಅಲ್ಲಿಗೆ ಹೋಗಿ ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿ ಬೆಣ್ಣೆ ದೋಸೆ ತಿಂದು ಮಹದೇಶ್ವರ ಬೆಟ್ಟದ ಕಡೆ ತೆರಳಿದರು.

ಹ್ಯಾಟ್ರಿಕ್ ಹಿರೋ ಶಿವರಾಜ್​​​​​ ಕುಮಾರ್​​​​

By

Published : Sep 7, 2019, 5:09 PM IST

ಹ್ಯಾಟ್ರಿಕ್ ಹಿರೋ ಶಿವಣ್ಣ ತಮ್ಮ ಸಿನಿಮಾಗಳಲ್ಲಿ ಸರಳತೆ ಮೆರೆಯುತ್ತಾರೆ ನಿಜ. ಆದ್ರೆ ನಿಜ ಜೀವನದಲ್ಲೂ ಸರಳತೆ ಮೆರೆದು ಜನರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ.

ಹೌದು, ಶುಕ್ರವಾರ ತಮ್ಮ ಮನೆ ದೇವರಾದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿಯ ಮುತ್ತೆತ್ತರಾಯನ ಪೂಜೆಗೆ ಹೋಗಿದ್ದರು. ಪೂಜೆ ಮುಗಿಸಿಕೊಂಡು ಸೀದಾ ಅವರು ಹೋಗಿದ್ದು ಒಂದು ಶೆಡ್ ಹೋಟೆಲ್‌ಗೆ. ಅಲ್ಲಿಗೆ ಹೋಗಿ ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿ ಬೆಣ್ಣೆ ದೋಸೆ ತಿಂದು ಮಹದೇಶ್ವರ ಬೆಟ್ಟದ ಕಡೆ ತೆರಳಿದರು.

ಹ್ಯಾಟ್ರಿಕ್ ಹಿರೋ ಶಿವಣ್ಣನಿಗೆ ಸ್ಟ್ರೀಟ್​​ ಫುಡ್​​ ಅಂದ್ರೆ ಬಲು ಇಷ್ಟನಂತೆ!

ಹಲಗೂರು-ಮಳವಳ್ಳಿ ರಸ್ತೆಯಲ್ಲಿರುವ ಬಾಬು ಸೆಡ್ಡು ಹೋಟೆಲ್‌ನಲ್ಲಿ ಶಿವಣ್ಣಗೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಕಾಂತಣ್ಣ, ಗುರುದತ್ ಸಾಥ್ ನೀಡಿ ಅವರೂ ಬೆಣ್ಣೆ ದೋಸೆಯ ರುಚಿ ಸವಿದರು.
ಬಾಬು ಸುಮಾರು 40 ವರ್ಷಗಳಿಂದ ಹೋಟೆಲ್ ನಡೆಸುತ್ತಿದ್ದಾರೆ. ಹಲವು ಗಣ್ಯರು ಬಾಬು ಹೋಟೆಲ್ ರುಚಿಗೆ ಮಾರುಹೋಗಿದ್ದಾರೆ. ಡಾ. ರಾಜ್‌ಕುಮಾರ್ ಕೂಡ ಈ ಹೋಟೆಲ್ ತಿಂಡಿಯ ರುಚಿ ನೋಡಿದ್ದಾರೆ.

ರುಚಿಗೆ ಮಾರುಹೋಗಿರುವ ರಾಜ್ ಕುಟುಂಬ ಈ ರಸ್ತೆಯಲ್ಲಿ ಪ್ರಯಾಣ ಮಾಡಿದರೆ ದೋಸೆ ಸವಿದು ಹೋಗುವುದು ಸಾಮಾನ್ಯವಾಗಿದೆ.

ABOUT THE AUTHOR

...view details