ಬೆಂಗಳೂರು: ಶೈನ್ ಶೆಟ್ಟಿ ಬಿಗ್ ಬಾಸ್ ಶೋ ಮೂಲಕ ಗಮನ ಸೆಳೆದ ನಟ. ಈಗ ಶೈನ್ ಶೆಟ್ಟಿ ಮನೆ ಹೋಳಿಗೆ ಎಂಬ ಅಂಗಡಿಯನ್ನು ಉದ್ಘಾಟನೆ ಮಾಡಿ ಸ್ನೇಹಿತನಿಗೆ ಸಾಥ್ ನೀಡಿದ್ದಾರೆ.
ಸ್ನೇಹಿತನ ಮನೆ ಹೋಳಿಗೆಗೆ ಶೈನ್ ಶೆಟ್ಟಿ ಸಾಥ್! - Shine Shetty
ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಮನೆ ಹೋಳಿಗೆ ಎಂಬ ಅಂಗಡಿಯನ್ನು ಉದ್ಘಾಟನೆ ಮಾಡಿ ಸ್ನೇಹಿತನಿಗೆ ಸಾಥ್ ನೀಡಿದ್ದಾರೆ.
ಶೈನ್ ಶೆಟ್ಟಿ ಬಿಗ್ ಬಾಸ್ ಮನೆಗೆ ಹೋಗುವುದಕ್ಕಿಂತ ಮುಂಚೆ ಕಿರುತೆರೆ ಹಾಗೂ ಗಲ್ಲಿ ಕಿಚನ್ ಎಂಬ ಹೋಟೆಲ್ ನಡೆಸುತ್ತಿದ್ದರು. ಕಷ್ಟದಿಂದ ಮೇಲೆ ಬಂದಿರುವ ಶೈನ್ ಶೆಟ್ಟಿ, ಭಾಸ್ಕರ್ ಮನೆ ಹೋಳಿಗೆ ಕುರುಕ್ ತಿಂಡಿ ಎಂಬ ವಿನೂತನ ಮಳಿಗೆಯನ್ನು ಉದ್ಘಾಟಿಸಿದ್ದಾರೆ. ಈ ಸಿಹಿ ತಿಂಡಿ ಹಾಗೂ ಹೋಳಿಗೆಗೆ ಹೆಚ್ಚು ಬೇಡಿಕೆ ಇರುವ ಕಾರಣ ಬನಶಂಕರಿಯಲ್ಲಿ ಹತ್ತನೇ ಶಾಖೆ ತೆರೆಯಲಾಗಿದೆ. ಬೆಂಗಳೂರು, ಹುಬ್ಬಳ್ಳಿ, ಮಂಗಳೂರಿನಲ್ಲಿ ಶಾಖೆಗಳನ್ನು ಹೊಂದಿರುವ ಈ ಮಳಿಗೆ ಗ್ರಾಹಕರ ಮನ ಗೆದ್ದಿದೆಯಂತೆ.
ಈ ನೂತನ ಶಾಖೆಯ ಆರಂಭದ ನೆನಪಿಗಾಗಿ ಒಂದು ರೂಪಾಯಿಗೆ ಒಂದು ಹೋಳಿಗೆ ಮಾರಾಟ ಮಾಡಿರೋದು ವಿಶೇಷವಾಗಿದೆ. ಈ ಭಾಸ್ಕರ್ ಅಂಗಡಿಯಲ್ಲಿ ಹೋಳಿಗೆ, ಕುರುಕ್ ತಿಂಡಿ ಹಾಗೂ ಚಟ್ನಿ ಪುಡಿ, ಬಿಸಿಬೇಳೆ ಬಾತ್ ಪುಡಿ ಸೇರಿದಂತೆ ಎಲ್ಲಾ ರೀತಿಯ ಪುಡಿಗಳು, ತಿಂಡಿ-ತಿನಿಸುಗಳು ದೊರೆಯಲಿವೆ.