ಕರ್ನಾಟಕ

karnataka

By

Published : Nov 9, 2021, 9:52 AM IST

ETV Bharat / sitara

‘ಒಂದಾನೊಂದು ಕಾಲದಲ್ಲಿ’ ಆರಂಭವಾದ ಶಂಕ್ರಣ್ಣನ ಸಿನಿ ಜರ್ನಿ 'ನಿಗೂಢ ರಹಸ್ಯ'ದೊಂದಿಗೆ ಅಂತ್ಯ.. ಕರಾಟೆ ಕಿಂಗ್​ ಸವಿನೆನಪು

ಇಂದು ಅಭಿಮಾನಿಗಳ ಪ್ರೀತಿಯ ಶಂಕ್ರಣ್ಣನ ಹುಟ್ಟಿದ ದಿನ. ಒಂದಾನೊಂದು ಕಾಲದಲ್ಲಿ ಚಿತ್ರದ ಮೂಲಕ ನಟನೆ ಆರಂಭಿಸಿದ ಶಂಕರ್​​ನಾಗ್, ಸುಮಾರು 90ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅನೇಕ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ನಿರ್ಮಾಪಕರಾಗಿ ಕೂಡಾ ಗುರುತಿಸಿಕೊಂಡಿದ್ದ ಶಂಕ್ರಣ್ಣನಿಗೆ ಇಂದು 67ನೇ ಜನ್ಮದಿನ.

shankar nag birthday, shankar nag 67th birthday, shankar nag memory on his 67th birthday, shankar nag birthday news, shankar nag birthday latest news, ಶಂಕರ್​ ನಾಗ್​ ಜನ್ಮದಿನ, ಶಂಕರ್​ ನಾಗ್ 67ನೇ​ ಜನ್ಮದಿನ, ಶಂಕರ್​ ನಾಗ್​ ಜನ್ಮದಿನ ಸುದ್ದಿ,
ಇಂದು ಶಂಕರ್​ ನಾಗ್​ ಜನ್ಮದಿನ

ಶಂಕರ್​ ನಾಗ್, ಹೆಸರು ಕೇಳಿದೊಡನೆ ಕನ್ನಡ ಸಿನಿಮಾ ಪ್ರಿಯರಿಗೆ ಏನೋ ಒಂದು ವಿಧವಾದ ಭಕ್ತಿ, ಗೌರವ. ಆ್ಯಕ್ಟಿಂಗ್​​ನಲ್ಲಿ ವಿಭಿನ್ನ ಮ್ಯಾನರಿಸಂ, ನಿರ್ದೇಶನದಲ್ಲಿ ಸದಾ ಕ್ರಿಯಾಶೀಲತೆ ತೋರುತ್ತಿದ್ರು ಶಂಕ್ರಣ್ಣ. ಆಟೋ ಚಾಲಕರ ಪ್ರೀತಿಯ ಆಟೋರಾಜ, ಕರಾಟೆ ಕಿಂಗ್ ಶಂಕರ್ ​​ನಾಗ್​ ಅವರು ಇಂದು ಹುಟ್ಟಿದ ದಿನ. ಅವರು ಬದುಕಿದ್ದರೆ ಇಂದು 67ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು.

ಇಂದು ಶಂಕರ್​ ನಾಗ್​ ಜನ್ಮದಿನ

ಶಂಕರ್ ನಾಗ್ ಮೂಲ ಹೆಸರು ನಾಗರಕಟ್ಟೆ ಶಂಕರ್. 9 ನವೆಂಬರ್ 1954 ರಲ್ಲಿ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಗ್ರಾಮದಲ್ಲಿ ಜನಿಸಿದ ಶಂಕರ್​ನಾಗ್, ಬಾಲ್ಯದಲ್ಲೇ ಬಹಳ ಚುರುಕಾಗಿದ್ದರು. ಅವರ ತಂದೆ ತಾಯಿ ಪ್ರೀತಿಯಿಂದ ಮಗನನ್ನು ಭವಾನಿ ಶಂಕರ ಎಂದು ಕರೆಯುತ್ತಿದ್ದರು. ಅಣ್ಣ ಅನಂತ್​​ ನಾಗ್ ಅವರೊಂದಿಗೆ ನಾಟಕಗಳನ್ನು ನೋಡಲು ತೆರಳುತ್ತಿದ್ದ ಶಂಕರ್​​ ನಾಗ್, ಅಣ್ಣನ ಒತ್ತಾಯದ ಮೇರೆಗೆ ತಾವೂ ಕೂಡಾ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಅಣ್ಣ-ತಮ್ಮ ಇಬ್ಬರೂ ಬ್ಯಾಂಕ್​ ನೌಕರರಾಗಿದ್ದರೂ ಅದರ ಜೊತೆಗೆ ರಂಗಭೂಮಿಯಲ್ಲೂ ಸಕ್ರಿಯರಾಗಿದ್ದರು.

ಇಂದು ಶಂಕರ್​ ನಾಗ್​ ಜನ್ಮದಿನ

ಸ್ನೇಹಿತರೊಂದಿಗೆ ವಿದೇಶಕ್ಕೆ ತೆರಳಬೇಕು ಎಂದುಕೊಂಡಿದ್ದ ಶಂಕರ್​ ನಾಗ್​​​ಗೆ ಗಿರೀಶ್ ಕಾರ್ನಾಡ್​ ನಿರ್ದೇಶನದ 'ಒಂದಾನೊಂದು ಕಾಲದಲ್ಲಿ' ಚಿತ್ರದಲ್ಲಿ ನಟಿಸುವ ಅವಕಾಶ ದೊರೆಯಿತು. ಮೊದಲ ಚಿತ್ರದಲ್ಲೇ ಎಲ್ಲರ ಗಮನ ಸೆಳೆದ ಶಂಕರ್ ​ನಾಗ್​ಗೆ ಒಂದರ ಹಿಂದೊಂದರಂತೆ ಸಿನಿಮಾಗಳು ಹುಡುಕಿ ಬಂದವು. 'ಮಿಂಚಿನ ಓಟ' ಚಿತ್ರದ ಮೂಲಕ ನಿರ್ದೇಶನಕ್ಕೂ ಇಳಿದ ಶಂಕರ್​ ನಾಗ್ ಅನೇಕ ಸಿನಿಮಾಗಳನ್ನು ನಿರ್ದೇಶಿಸಿದರು. ಜನ್ಮಜನ್ಮದ ಅನುಬಂಧ, ಗೀತಾ, ಮಿಂಚಿನ ಓಟ ಸಿನಿಮಾಗಳನ್ನು ನಿರ್ಮಾಣ ಕೂಡಾ ಮಾಡಿದರು.

ಇಂದು ಶಂಕರ್​ ನಾಗ್​ ಜನ್ಮದಿನ

ಆರ್​.ಕೆ. ನಾರಾಯಣ್ ಅವರ 'ಮಾಲ್ಗುಡಿ ಡೇಸ್' ಕಾದಂಬರಿಯನ್ನು ಮೂಲ ಹೆಸರಿನಲ್ಲೇ ಧಾರಾವಾಹಿಯಾಗಿ ನಿರ್ಮಿಸಿದ ಶಂಕರ್ ​​ನಾಗ್ ಈ ಧಾರಾವಾಹಿ ಮೂಲಕ ರಾಷ್ಟ್ರಮಟ್ಟದಲ್ಲೂ ಹೆಸರು ಮಾಡಿದರು. 1987 ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ಈ ಧಾರಾವಾಹಿ, ಹಿಂದಿ ಹಾಗೂ ಇಂಗ್ಲಿಷ್​​ನಲ್ಲಿ ಪ್ರಸಾರವಾಯ್ತು. ಕನ್ನಡಕ್ಕೂ ಡಬ್ ಆಗಿ ಕಿರುತೆರೆಯಲ್ಲಿ ಪ್ರಸಾರ ಕೂಡಾ ಆಗಿದೆ. ಕನ್ನಡ ಕಲಾವಿದರೇ ನಟಿಸಿದ್ದ ಈ ಧಾರಾವಾಹಿಯನ್ನು ಕರ್ನಾಟಕದ ಶಿವಮೊಗ್ಗ, ಆಗುಂಬೆ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

ಇಂದು ಶಂಕರ್​ ನಾಗ್​ ಜನ್ಮದಿನ

ರಂಗಭೂಮಿ ಕಲಾವಿದೆ ಅರುಂಧತಿ ನಾಗ್ ಅವರನ್ನು ಪ್ರೀತಿಸಿ ಮದುವೆಯಾದ ಶಂಕರ್ ​ನಾಗ್, ಪತ್ನಿಯೊಂದಿಗೆ ಸೇರಿ 'ಸಂಕೇತ್' ಎಂಬ ಹವ್ಯಾಸಿ ರಂಗಭೂಮಿ ತಂಡವನ್ನು ಕಟ್ಟಿ ಅನೇಕ ನಾಟಕಗಳನ್ನು ಪ್ರದರ್ಶಿಸಿದರು. ಈ ದಂಪತಿಗೆ ಕಾವ್ಯ ಎಂಬ ಪುತ್ರಿ ಇದ್ದಾರೆ. ಶಂಕರ್​ ನಾಗ್ ನಿಧನದ ನಂತರ ಅರುಂಧತಿ ನಾಗ್ 'ರಂಗಶಂಕರ' ಎಂಬ ರಂಗಮಂದಿರವನ್ನು ಸ್ಥಾಪಿಸಿದರು. 'ಆಟೋರಾಜ' ಚಿತ್ರದ ಮೂಲಕ ಶಂಕರ್​ ನಾಗ್​ ಆಟೋ ಚಾಲಕರ ಮೆಚ್ಚಿನ ನಟನಾದರು. ಇಂದಿಗೂ ಕೂಡಾ ಬಹುತೇಕ ಆಟೋಗಳಲ್ಲಿ ಶಂಕರ್ ​​ನಾಗ್ ಫೋಟೋಗಳನ್ನು ಕಾಣಬಹುದು.

ಇಂದು ಶಂಕರ್​ ನಾಗ್​ ಜನ್ಮದಿನ

ಶಂಕರ್​ ನಾಗ್ ಅಭಿನಯದ ಕೊನೆಯ ಚಿತ್ರ 'ನಿಗೂಢ ರಹಸ್ಯ'. ಕನ್ನಡ ಚಿತ್ರರಂಗದ ಅಭಿವೃದ್ಧಿ ಬಗ್ಗೆ ದೊಡ್ಡ ಮಟ್ಟಿನ ಕನಸು ಕಂಡಿದ್ದ ಶಂಕರ್ ​ನಾಗ್ ಅದನ್ನು ಕಾರ್ಯರೂಪಕ್ಕೆ ತರುವಷ್ಟರಲ್ಲೇ ನಿಧನರಾದರು. 30 ಸೆಪ್ಟೆಂಬರ್​ 1990 ದಾವಣಗೆರೆ ಬಳಿ ಶಂಕರ್ ​​​​​​ನಾಗ್ ಚಲಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ನಮ್ಮೆಲ್ಲರ ಪ್ರೀತಿಯ ಶಂಕ್ರಣ್ಣ ಕೊನೆಯುಸಿರೆಳೆದರು. ಶಂಕರ್​​​ ನಾಗ್ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರು ಕನ್ನಡ ಕಲಾಭಿಮಾನಿಗಳ ಹೃದಯದಲ್ಲಿ ಸದಾ ಹಸಿರಾಗಿರುತ್ತಾರೆ. ಶಂಕರ್​ ನಾಗ್​ ಅವರನ್ನು ನಾವು ಸ್ಮರಿಸುತ್ತಾ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೊರುತ್ತಿದ್ದೇವೆ.

ABOUT THE AUTHOR

...view details