ಕರ್ನಾಟಕ

karnataka

ETV Bharat / sitara

ಸುಶಾಂತ್​ ಜತೆಗಿನ ಫೋಟೋ​ ಶೇರ್​ ಮಾಡಿದ ನಟಿ ಸಾರಾ.. ಟ್ರೋಲಿಗರು ಅದಕ್ಕೆ ಹೀಗನ್ನಬೇಕೆ..

ಇಂದು ನನ್ನಲ್ಲಿರುವ ಎಲ್ಲವನ್ನೂ ನನಗೆ ಕೊಟ್ಟಿದ್ದೀರಿ. ಆದರೆ, ನೀವಿಂದು ಬಿಟ್ಟು ಹೋಗಿದ್ದೀರಿ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಆದರೆ, ಪ್ರತಿ ಬಾರಿಯೂ ನಾನು ನಕ್ಷತ್ರಗಳು, ಉದಯಿಸುತ್ತಿರುವ ಸೂರ್ಯ ಅಥವಾ ಚಂದ್ರನನ್ನು ನೋಡಿದಾಗ ನೀವು ಅಲ್ಲಿರುವಿರಿ ಎಂದು ನನಗೆ ಭಾಸವಾಗುತ್ತದೆ..

sara ali khan
ನಟಿ ಸಾರಾ ಅಲಿಖಾನ್

By

Published : Jun 15, 2021, 7:05 PM IST

ಹೈದರಾಬಾದ್ ​:ನಟ ಸುಶಾಂತ್​ ಸಿಂಗ್​ ರಜಪೂತ್​ ಪುಣ್ಯಸ್ಮರಣೆ ಅಂಗವಾಗಿ ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಅವರಿಗೆ ನಮನ ಸಲ್ಲಿಸಿದ್ದಾರೆ. ಅದೇ ರೀತಿ ನಟಿ ಸಾರಾ ಅಲಿಖಾನ್ ಅವರು ನಟನನ್ನು ಸ್ಮರಿಸಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಆದರೆ, ಇದು ನಕಲಿ ಭಾವನೆ ಎಂದು ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ.

ಸುಶಾಂತ್​ ಜೊತೆಗಿನ ಪೋಸ್ಟ್​ ಶೇರ್​ ಮಾಡಿದ ನಟಿ ಸಾರಾ

ಸೋಮವಾರ, ನಟಿ ಸಾರಾ ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಸುಶಾಂತ್ ಅವರೊಂದಿಗೆ ಈಜುಕೊಳದಲ್ಲಿ ಪೋಸ್ ನೀಡಿರುವ ಥ್ರೋಬ್ಯಾಕ್ ಫೋಟೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ "ನನಗೆ ಸಹಾಯ, ಸಲಹೆ ಅಥವಾ ನಗು ಬೇಕಾದಾಗಲೆಲ್ಲಾ ನೀವು ಯಾವಾಗಲೂ ಇರುತ್ತಿದ್ದೀರಿ. ನೀವು ನನ್ನನ್ನು ನಟನಾ ಜಗತ್ತಿಗೆ ಪರಿಚಯಿಸಿದ್ದೀರಿ, ಕನಸುಗಳು ನನಸಾಗಬಹುದೆಂದು ನನ್ನನ್ನು ನಂಬುವಂತೆ ಮಾಡಿದ್ದೀರಿ.

ಇಂದು ನನ್ನಲ್ಲಿರುವ ಎಲ್ಲವನ್ನೂ ನನಗೆ ಕೊಟ್ಟಿದ್ದೀರಿ. ಆದರೆ, ನೀವಿಂದು ಬಿಟ್ಟು ಹೋಗಿದ್ದೀರಿ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಆದರೆ, ಪ್ರತಿ ಬಾರಿಯೂ ನಾನು ನಕ್ಷತ್ರಗಳು, ಉದಯಿಸುತ್ತಿರುವ ಸೂರ್ಯ ಅಥವಾ ಚಂದ್ರನನ್ನು ನೋಡಿದಾಗ ನೀವು ಅಲ್ಲಿರುವಿರಿ ಎಂದು ನನಗೆ ಭಾಸವಾಗುತ್ತದೆ ಎಂದು ನಟಿ ಬರೆದುಕೊಂಡಿದ್ದಾರೆ.

ನಟಿ ಸಾರಾ ಈ ಪೋಸ್ಟ್‌ನ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡ ಕೂಡಲೇ, ಅವರ ಮೇಲೆ ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು ಟೀಕಾಸ್ತ್ರವನ್ನೇ ಸುರಿಸಿದ್ದಾರೆ. ಅದರಲ್ಲಿ ಕೆಲವರು ನಟ ಸುಶಾಂತ್​ ಬಗ್ಗೆ ಅವರ ಭಾವನೆಗಳು ನಿಜವಾದದ್ದಲ್ಲ ಎಂದು ಅಭಿಪ್ರಾಯಪಟ್ಟರೆ, ಕೆಲವರು ಸೋಶಿಯಲ್ ಮೀಡಿಯಾದಲ್ಲಿ ನಕಲಿ ಭಾವನೆ ವ್ಯಕ್ತಪಡಿಸುವುದನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ.

ನಟಿ ಸಾರಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದು 2018ರಲ್ಲಿ ತೆರೆಕಂಡಿದ್ದ ಕೇದಾರನಾಥ್ ಚಿತ್ರದಮೂಲಕ. ಆಗ ಅವರು ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ಪರದೆಯನ್ನು ಹಂಚಿಕೊಂಡಿದ್ದರು. ಆ ಸಮಯದಲ್ಲಿ ಇವರಿಬ್ಬರು ಡೇಟಿಂಗ್ ನಡೆಸಿದ್ದರು ಎಂಬ ಕುರಿತು ವದಂತಿಗಳು ಹಬ್ಬಿತ್ತು.

ಓದಿ:ಇನ್ಮುಂದೆ ಚಿನ್ನ ಮಾರಾಟಕ್ಕೆ ಹಾಲ್​ಮಾರ್ಕ್​ ಕಡ್ಡಾಯ!

ABOUT THE AUTHOR

...view details