ಕರ್ನಾಟಕ

karnataka

ETV Bharat / sitara

ನನ್ನ ಹಣೆಬರಹವೇ ಸರಿ ಇಲ್ಲ; ವಿವಾದದ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟಿ ಸಂಜನಾ - Kannada film industry

ನನ್ನ ಹಣೆ ಬರಹ ಸರಿ ಇಲ್ಲ, ಕನ್ನಡ ಚಿತ್ರರಂಗದಲ್ಲಿ ಏನೇ ವಿವಾದ ಆದ್ರೂ ನನ್ನ ಹೆಸರು ಮೊದಲು ಹೊರ ಬರುತ್ತಿದೆ ಎಂದು ನಟಿ ಸಂಜನಾ ಗಲ್ರಾನಿ ಬೇಸರ ವ್ಯಕ್ತಪಡಿಸಿದ್ದಾರೆ.

Sanjjanaa Galrani Reaction
ನಟಿ ಸಂಜನಾ ಗಲ್ರಾನಿ

By

Published : Sep 5, 2020, 7:20 PM IST

Updated : Sep 5, 2020, 9:02 PM IST

ಸ್ಯಾಂಡಲ್​ವುಡ್​ನ​ ಡ್ರಗ್ಸ್​ ಮಾಫಿಯಾದಲ್ಲಿ ತಮ್ಮ ಹೆಸರು ಕೇಳಿ ಬಂದಿದ್ದಕ್ಕೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಧವಿಲ್ಲ. ರಾಗಿಣಿ ಅವರ ಬಂಧನ ಆಗಿರುವುದು ನನಗೂ ನೋವು ತಂದಿದೆ ಎಂದು ಸಂಜನಾ ಬೇಸರ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ರಾಹುಲ್ ನನ್ನ ರಾಕಿ ಬ್ರದರ್​​, ಅವನು ಒಳ್ಳೆಯವನು. ಅಲ್ಲದೆ ನಾನು ಕನ್ನಡದ ಯಾವುದೇ ಪಾರ್ಟಿಗಳಲ್ಲಿ ಭಾಗಿಯಾಗಿಲ್ಲ. ಈ ಪ್ರಕರಣದಲ್ಲಿ ನನ್ನ ಹೆಸರಿಲ್ಲ. ಈ ವಿಚಾರದಲ್ಲಿ ಯಾವುದೇ ಅಧಿಕಾರಿಗಳು ನನ್ನ ಸಂಪರ್ಕ ಮಾಡಿಲ್ಲ. ಒಂದು ವೇಳೆ ವಿಚಾರಣೆಗೆ ಬರುವಂತೆ ತಿಳಿಸಿದರೆ ಹೋಗುವುದಾಗಿ ತಿಳಿಸಿದರು.

ನಟಿ ಸಂಜನಾ ಗಲ್ರಾನಿ

ಈಗಾಗಲೇ ನಾನು ಈ ಬಗ್ಗೆ ನಮ್ಮ ಲಾಯರ್​ ಜೊತೆ ಮಾತನಾಡಿರುವೆ. ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಂಜನಾ ಹೇಳಿದರು. ಇನ್ನು ಬೆಳಗ್ಗೆಯಿಂದ ಮನೆಯಲ್ಲೇ ಇರುವ ಸಂಜನಾ, ಫ್ಯಾಮಿಲಿ ಜೊತೆ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ.

Last Updated : Sep 5, 2020, 9:02 PM IST

ABOUT THE AUTHOR

...view details