ಕರ್ನಾಟಕ

karnataka

ETV Bharat / sitara

ಡ್ರಗ್ಸ್​ ಪ್ರಕರಣ: ಒಟ್ಟಿಗೆ ಪಾರ್ಟಿ ಮಾಡದಿದ್ರೂ ಒಂದೇ ಕೋಣೆಯಲ್ಲಿ ರಾಗಿಣಿ- ಸಂಜನಾ - ರಾಗಿಣಿ

ಮಹಿಳಾ ಸಾಂತ್ವನ ಕೇಂದ್ರದಲ್ಲಿ ರಾಗಿಣಿ ಮತ್ತು ಸಂಜನಾ ಒಟ್ಟಿಗೆ ಹೇಗೆ ಇರುತ್ತಾರೆ ಅನ್ನೋದನ್ನ ನೋಡುವುದಕ್ಕಿಂತ ಮುಂಚೆ, ‌ತುಪ್ಪದ ಬೆಡಗಿ ರಾಗಿಣಿ ಮತ್ತು ಸಂಜನಾ ಗಲ್ರಾನಿ ಈ ಹಿಂದೆ ಒಟ್ಟಿಗೆ ಮುಖಾ ಮುಖಿಯಾಗಿದ್ರಾ?.

Sanjana and Ragini in the same room
ಡ್ರಗ್ಸ್ ಎಫೆಕ್ಟ್ : ಒಂದೇ ಕೊಠಡಿಯಲ್ಲಿ ಇರ್ತಾರಾ ಸಂಜನಾ ಮತ್ತು ರಾಗಿಣಿ?

By

Published : Sep 8, 2020, 10:26 PM IST

Updated : Sep 8, 2020, 10:42 PM IST

ಕನ್ನಡ ಚಿತ್ರರಂಗದಲ್ಲಿ ಸದ್ಯ ಡ್ರಗ್ಸ್ ಮಾಫಿಯಾದೆ ಮಾತು. ಚಂದನವನ ಅಂತಾ ಕರೆಯಿಸಿಕೊಂಡಿದ್ದ ಸ್ಯಾಂಡಲ್​​ವುಡ್ ಈಗ ಡ್ರಗ್ಸ್ ಮಾಫಿಯಾ ಬಿರುಗಾಳಿ ಎಬ್ಬಿಸಿದೆ. ಈ ಜಾಲದಲ್ಲಿ ಪಂಜಾಬಿ ಬೆಡಗಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಯನ್ನ ಸಿಸಿಬಿ ಅಧಿಕಾರಿಗಳು ಬಂಧಿಸಿರೋದು, ಇನ್ನು ಅನೇಕ ತಾರೆಯರ ನಿದ್ದೆಗೆಡಿಸಿದೆ. ಸದ್ಯ ತುಪ್ಪದ ಬೆಡಗಿ ರಾಗಿಣಿ, ಗಂಡ ಹೆಂಡತಿ ಸಿನಿಮಾದ ಸಂಜನಾ ಮಹಿಳಾ ಸಾಂತ್ವನ‌ ಕೇಂದ್ರದಲ್ಲಿ ಒಟ್ಟಿಗೆ ಇರುವ ಪರಿಸ್ಥಿತಿ ಎದುರಾಗಿದೆ‌.

ರಾಗಿಣಿ

ಹಾಗದ್ರೆ ಮಹಿಳಾ ಸಾಂತ್ವನ ಕೇಂದ್ರದಲ್ಲಿ ರಾಗಿಣಿ ಮತ್ತು ಸಂಜನಾ ಒಟ್ಟಿಗೆ ಹೇಗೆ ಇರುತ್ತಾರೆ ಅನ್ನೋದನ್ನ ನೋಡುವುದಕ್ಕಿಂತ ಮುಂಚೆ, ‌ತುಪ್ಪದ ಬೆಡಗಿ ರಾಗಿಣಿ ಮತ್ತು ಸಂಜನಾ ಗಲ್ರಾನಿ ಈ ಹಿಂದೆ ಒಟ್ಟಿಗೆ ಮುಖಾ ಮುಖಿಯಾಗಿದ್ರಾ?.

ರಾಗಿಣಿ

ಕನ್ನಡ ಚಿತ್ರರಂಗದಲ್ಲಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಸಿನಿಮಾ ಜರ್ನಿ ಶುರುವಾಗಿದ್ದು ಮಾತ್ರ ಇಂಟ್ರಸ್ಟ್ರಿಂಗ್. ಪಂಜಾಬಿ ಕುಟುಂಬದಿಂದ ಬಂದ‌ ರಾಗಿಣಿ ಕಾಲೇಜು ದಿನಗಳಲ್ಲಿ ಮಾಡಲಿಂಗ್ ಮಾಡಿ, ಫ್ಯಾಶನ್ ಶೋ ಗೊಸ್ಕರ ಬೋಲ್ಡ್ ಆಗಿ ಬಿಕಿನಿ ತೊಟ್ಟಿದ್ದ ರಾಗಿಣಿ ದ್ವಿವೇದಿ‌, ಕನ್ನಡ ಚಿತ್ರರಂಗದಲ್ಲಿ ಹೀರೋಯಿನ್ ಆಗ್ತೀನಿ ಅಂತಾ ಅಂದುಕೊಂಡಿರಲಿಲ್ಲ. ಹೋಳಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಾಗಿಣಿ ದ್ವಿವೇದಿಗೆ, ಸ್ಯಾಂಡಲ್ ವುಡ್​​ನಲ್ಲಿ ದೊಡ್ಡ ಮಟ್ಟದ ಯಶಸ್ಸು ತಂದು ಕೊಟ್ಟಿದ್ದು ಸುದೀಪ್ ಜೊತೆ ನಟಿಸಿದ ವೀರ ಮದಕರಿ ಸಿನಿಮಾ.

ಸಂಜನಾ

ಈ ಚಿತ್ರದ ಯಶಸ್ಸಿನ‌ ನಂತರ, ಮತ್ತೊಂದು ಹಿಟ್ ಕೊಟ್ಟ ಕೇಂಪೆಗೌಡ. ಈ ಎರಡು‌ ಸಿನಿಮಾಗಳ ಬಳಿಕ ರಾಗಿಣಿ ದ್ವಿವೇದಿ ಸ್ಟಾರ್ ನಟಿಯಾಗಿ ಸ್ಟಾರ್ ಡಮ್ ಪಡೆದುಕೊಂಡರು. ಅಲ್ಲಿಂದ ಕನ್ನಡದ ಮನೆ ಮಗಳು ಆಗ್ತಾರೆ. ಆದರೆ ಅವರು ಸಕ್ಸಸ್ಸನ್ನು ತುಂಬಾ ವರ್ಷಗಳ ಉಳಿಸಿಕೊಳ್ಳೊದಿಕ್ಕೆ ಆಗೋಲ್ಲ. ಯಾವಾಗ ರಾಗಿಣಿ ದ್ವಿವೇದಿ ಸಿನಿಮಾಗಳು ಸಕ್ಸಸ್​ ಆಗಲಿಲ್ಲವೋ ಆಗ ರಾಗಿಣಿ ನೈಟ್ ಪಾರ್ಟಿಗಳು, ಬಾಯ್ ಫ್ರೆಂಡ್ಸ್, ದೊಡ್ಡ ಗಣ್ಯ ವ್ಯಕ್ತಿಗಳ ಪರಿಚಯ ಆಗುತ್ತೆ.

ರಾಗಿಣಿ
ಸಂಜನಾ

ಬಹುಶಃ ಅಲ್ಲಿಂದಲೇ ಡ್ರಗ್ಸ್ ಕಡೆ ವಾಲಿದ್ರು ಅನ್ನೋದು ಸದ್ಯ ಚಿತ್ರರಂಗದಲ್ಲಿ ಕೇಳಿ ಬರುತ್ತಿರುವ ಮಾತು. ಇದರ ಜೊತೆಗೆ ರಾಗಿಣಿ ದ್ವಿವೇದಿ ತಮ್ಮ‌ ಸುತ್ತಮುತ್ತ ಇರುವ ಜನರು, ಫ್ರೆಂಡ್ಸ್ ಗಳು, ದೊಡ್ಡ ದೊಡ್ಡ ಗಣ್ಯರ ಜೊತೆಗೆ ಆತ್ಮೀಯವಾಗಿ ಇರುವುದು ತುಪ್ಪದ ಬೆಡಗಿಯ ವ್ಯಕ್ತಿತ್ವ.

ಇನ್ನು ಸಂಜನಾ ಗಲ್ರಾನಿ ವಿಷಯಕ್ಕೆ ಬಂದರೆ, 16ನೇ ವರ್ಷಕ್ಕೆ‌ ಜಾಹೀರಾತಿನಲ್ಲಿ ಮಿಂಚಿದ್ದ ಸಂಜಾನ ಕನ್ನಡದ‌‌‌‌‌ ಮೊದಲ ಚಿತ್ರ ಗಂಡ ಹೆಂಡತಿ, ಸಿನಿಮಾದಲ್ಲಿ ಸಿಕ್ಕಾಪಟ್ಟೇ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡು, ಮೊದಲ ಚಿತ್ರದಲ್ಲಿ ಪ್ರಖ್ಯಾತಿ ಹೊಂದಿದರು. ಆದರೆ ಸಂಜನಾ ಗಲ್ರಾನಿ ಸ್ಟಾರ್ ನಟಿಯಾಗಿ ಕ್ಲಿಕ್ ಆಗದೆ ಇದ್ರು ಕನ್ನಡ, ತೆಲುಗು ಸಿನಿಮಾಗಲ್ಲಿ ಅತಿಥಿ ಪಾತ್ರಗಳಲ್ಲಿ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರೋದು ಅಚ್ಚರಿ.

ಆದರೆ ರಾಗಿಣಿ ದ್ವಿವೇದಿ ಮತ್ತು ಸಂಜನಾ ಮಧ್ಯೆ ಸಿನಿಮಾ ಹೊಟ್ಟೆ ಹುರಿ‌ ಸಾಮಾನ್ಯವಾಗಿ ಇತ್ತು. ಅದ್ರಲ್ಲೂ ರಾಗಿಣಿ‌ ಮೇಲೆ ಸಂಜನಾಗೆ ತುಂಬಾ ಅಸೂಯೆ ಇದೆ ಅನ್ನೋ ಮಾತುಗಳು ಆಗಾಗ ಚಿತ್ರರಂಗದಲ್ಲಿ ಕೇಳಿ ಬರುತ್ತಿತ್ತು‌. ಯಾಕೆಂದರೆ ರಾಗಿಣಿ ತರ ನಾನು ಸ್ಟಾರ್ ಹೀರೋಯಿನ್ ಆಗಲಿಲ್ಲ ಅನ್ನೋದು ಸಂಜನಾ ಗಲ್ರಾನಿಗೆ ಸದಾ ಕಾಡುವ ವಿಷ್ಯ. ಸದ್ಯ ಡ್ರಗ್ಸ್ ಜಾಲದಲ್ಲಿ ಸಿಲುಕಿಕೊಂಡಿರುವ ರಾಗಿಣಿ ಮತ್ತು ಸಂಜನಾ ಗಲ್ರಾನಿ ಒಟ್ಟಿಗೆ ನೈಟ್ ಪಾರ್ಟಿಗಳನ್ನ ಮಾಡಿಲ್ಲ‌. ಆದರೆ ಇಬ್ಬರು ಬೇರೆ ಬೇರೆ ನೈಟ್ ಪಾರ್ಟಿಗಳನ್ನ ಮಾಡ್ತಾ, ಸಾಕಷ್ಟು ದೊಡ್ಡ ದೊಡ್ಡ ಗಣ್ಯರ ಸ್ನೇಹ, ಸಂಬಂಧ ಜೊತೆಗೆ ದೊಡ್ಡ ಮಟ್ಟದ ಕಾಂಟ್ಯಾಕ್ಟ್​​​ಗಳನ್ನ ಹೊಂದಿದ್ದಾರೆ.

ಇನ್ನು ರಾಗಿಣಿ ದ್ವಿವೇದಿಗಿಂತ ಸಂಜನಾ ಗಲ್ರಾನಿ ನೈಟ್ ಪಾರ್ಟಿಗಳಲ್ಲಿ ಗಲಾಟೆ ಮಾಡಿಕೊಂಡಿರೋದು ಹೆಚ್ಚು. ಆದರೆ ಇವರಿಬ್ಬರು ಒಟ್ಟಿಗೆ ಪಾರ್ಟಿ ಮಾಡಿಲ್ಲ ಅನ್ನೋದು. ಹೀಗೆ ಇರಬೇಕಾದ್ರೆ ಡ್ರಗ್ಸ್ ಜಾಲದಲ್ಲಿ ಸಿಲುಕಿಕೊಂಡಿರುವ ರಾಗಿಣಿ‌ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಈಗ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಒಟ್ಟಿಗೆ ಇರಬೇಕಾದ ಪರಿಸ್ಥಿತಿ ಎದುರಾಗಿದೆ‌. ಇನ್ನು ಸಿಸಿಬಿ ಅಧಿಕಾರಿಗಳ ಮಾಹಿತಿ ಪ್ರಕಾರ ಸಂಜನಾ ಗಲ್ರಾನಿ, ನಾನು ರಾಗಿಣಿ ದ್ವಿವೇದಿ ಇರುವ ಕೊಠಡಿಯಲ್ಲಿ ಇರೋಲ್ಲ, ನನಗೆ ಬೇರೆ ಕೊಠಡಿ ವ್ಯವಸ್ಥೆ ಮಾಡಿ‌ ಅಂತಾ ಕೇಳಿಕೊಂಡಿದ್ದಾರಂತೆ.

ಆದರೆ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಐದು ಬೆಡ್​​ಗಳು ಇರುವ ಒಂದೇ ಕೊಠಡಿ ಇದೆಯಂತೆ. ಹೀಗಾಗಿ ಒಂದೇ ರೂಮ್​​ನಲ್ಲಿ‌ ರಾಗಿಣಿ ಮತ್ತು ಸಂಜನಾ ಮುಖಾಮುಖಿಯಾಗುವ ಸನ್ನಿವೇಶ ಉದ್ಭವವಾಗಿದೆ. ಇವರ ಮಧ್ಯೆ ಮಹಿಳಾ ಸಿಸಿಬಿ ಅಧಿಕಾರಿಗಳು ಇದ್ದಾರೆ ಎಂಬುದನ್ನು ಮೂಲಗಳು ತಿಳಿಸಿವೆ.

ಒಟ್ಟಾರೆ ಕನ್ನಡ ಚಿತ್ರರಂಗದಲ್ಲಿ ಒಮ್ಮೆಯೂ ಭೇಟಿಯಾಗದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಈಗ ಡ್ರಗ್ಸ್ ಜಾಲದಲ್ಲಿ ಸಿಕ್ಕಿಹಾಕಿಕೊಂಡು ಒಬ್ಬರ ಮುಖ ಮತ್ತೊಬ್ಬರು ನೋಡಿಕೊಳ್ಳುವ ಕಾಲ ಕೂಡಿ ಬಂದಿದೆ‌.

Last Updated : Sep 8, 2020, 10:42 PM IST

ABOUT THE AUTHOR

...view details