ನಿನ್ನೆ ಎಲ್ಲೆಡೆ ಗಾಂಧಿ ಜಯಂತಿ ಆಚರಿಸಲಾಗುತ್ತಿತ್ತು. ಈ ವೇಳೆ ಶ್ರುತಿ ಹರಿಹರನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದೇ ಮೊದಲ ಬಾರಿಗೆ ತಮ್ಮ ಮಗಳ ವಿಡಿಯೋವೊಂದು ಪೋಸ್ಟ್ ಮಾಡಿ, ಭಾವನಾತ್ಮಕ ಸಂದೇಶವನ್ನು ಸಾರಿದರು.
ತಮ್ಮ ಮಗಳ ಮೇಲಿರುವ ಪ್ರೀತಿಯನ್ನು ಪದ್ಯದ ಮೂಲಕ ತಿಳಿಸಿದ್ದಾರೆ. ವಿಡಿಯೋದಲ್ಲಿ ಮಗುವಿನ ಕಾಲುಗಳು ಮಾತ್ರ ಕಾಣುತ್ತವೆ. ‘ಎರಡು ತಿಂಗಳು ಹೇಗೆ ಕಳೆದವೋ ಎಂಬುದು ನನಗೆ ಗೊತ್ತೇ ಆಗುತ್ತಿಲ್ಲ’ ಎಂದು ಶ್ರುತಿ ಹರಿಹರನ್ ಬರೆದುಕೊಂಡಿದ್ದಾರೆ.
ಶ್ರುತಿ ಹರಿಹರನ್ ಅವರು ಕೇರಳದ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಈವರೆಗೂ ಮಗಳ ಫೋಟೋವನ್ನು ರಿವೀಲ್ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಪುತ್ರಿಯ ಕಾಲುಗಳ ವಿಡಿಯೋ ಮಾಡಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಶೃತಿ ಹರಿಹರನ್ ಸದ್ಯ ಸಿನಿಮಾಗಳಿಂದ ದೂರವಿದ್ದು ಮಗಳ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2018 ರಲ್ಲಿ ನಾತಿಚರಾಮಿ ಚಿತ್ರಕ್ಕಾಗಿ ವಿಶೇಷ ತೀರ್ಪುಗಾರರ ಪ್ರಶಸ್ತಿ ಪಡೆದಿದ್ದರು. ಜೊತೆಗೆ ನಾತಿಚರಾಮಿ ಚಿತ್ರಕ್ಕೂ ಉತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ.