ಕರ್ನಾಟಕ

karnataka

ETV Bharat / sitara

ಸ್ಯಾಂಡಲ್​ವುಡ್​ಗೆ ಕೊರೊನಾ ಲಗ್ಗೆ: ಶ್ರೀನಗರ ಕಿಟ್ಟಿ ಸಹೋದರ ಮಹಾಮಾರಿಗೆ ಬಲಿ! - Sandalwood actor

ಮಹಾಮಾರಿ ಕೊರೊನಾ ವೈರಸ್​ ಇದೀಗ ಸ್ಯಾಂಡಲ್​ವುಡ್​ಗೂ ಲಗ್ಗೆ ಹಾಕಿದ್ದು,ನಟ ಶ್ರೀನಗರ ಕಿಟ್ಟಿ ಸಹೋದರ ಕೋವಿಡ್​-19 ಸೋಂಕಿಗೆ ಬಲಿಯಾಗಿದ್ದಾರೆ.

srinagar kitty brother dies due to COVID
srinagar kitty brother dies due to COVID

By

Published : Jul 8, 2020, 12:36 AM IST

ಬೆಂಗಳೂರು:ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸ ಜೋರಾಗಿದ್ದು, ಇದೀಗ ಇದೀಗ ಸ್ಯಾಂಡಲ್​ವುಡ್​ಗೂ ಅದು ಲಗ್ಗೆ ಹಾಕಿದೆ.

ಸ್ಯಾಂಡಲ್​ವುಡ್​ ನಟರೊಬ್ಬರ ಕುಟುಂಬಕ್ಕೂ ಮಹಾಮಾರಿ ತಗುಲಿದ್ದು, ನಟ ಶ್ರೀನಗರ ಕಿಟ್ಟಿ ಸಹೋದರನನ್ನ ವೈರಸ್​ ಬಲಿ ಪಡೆದುಕೊಂಡಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಬುಧವಾರ ಶ್ರೀನಗರ ಕಿಟ್ಟಿ ಸಹೋದರ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ತದನಂತರ ಅವರಿಗೆ ಕೋವಿಡ್​ ಪರೀಕ್ಷೆ ನಡೆಸಲಾಗದ್ದು, ಇದರಲ್ಲಿ ಪಾಸಿಟಿವ್​ ಇರುವುದು ಕನ್ಫರ್ಮ್​ ಆಗಿದೆ. ಕಿಟ್ಟಿ ಸಹೋದರ ಶಿವಶಂಕರ್​​ ಕೋವಿಡ್​​ನಿಂದ ಸಾವನ್ನಪ್ಪಿರುವುದು ಮತ್ತಷ್ಟು ಆತಂಕ ಮೂಡಿಸಿದೆ.

ಇದೀಗ ಶ್ರೀನಗರ ಕಿಟ್ಟಿ, ಅವರ ಪತ್ನಿ ಭಾವನಾ ಬೆಳಗೆರೆ ಸೇರಿ ಇಡೀ ಕುಟುಂಬಕ್ಕೆ ಕೋವಿಡ್ ಟೆಸ್ಟ್ ಮಾಡಿಸಲಾಗಿದ್ದು,ಸದ್ಯ ಎಲ್ಲರಿಗೂ ನೆಗೆಟಿವ್ ರಿಪೋರ್ಟ್ ಬಂದಿದೆ. ಶ್ರೀನಗರ ಕಿಟ್ಟಿ ನಿವಾಸ ಸೀಲ್​ಡೌನ್​ ಮಾಡಲಾಗಿದ್ದು, 14 ದಿನಗಳ ಕಾಲ ಹೋಮ್​ ಕ್ವಾರಂಟೈನ್​​ಗೆ ಒಳಪಡಿಸಲಾಗಿದೆ.

ಇನ್ನು ಜುಲೈ 6 ರಂದು ಸ್ವತಃ ಸುಮಲತಾ ಅಂಬರೀಶ್ ನನಗೆ ಕೊವಿಡ್ -19 ಪಾಸಿಟಿವ್ ಆಗಿದೆ ಅಂತ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು.

ABOUT THE AUTHOR

...view details