ಹೈದರಾಬಾದ್: ಟಾಲಿವುಡ್ ಬ್ಯೂಟಿ ಸಮಂತಾ ಕಳೆದ ವರ್ಷ ನಾಯಕ ನಟ ಅಕ್ಕಿನೇನಿ ನಾಗಚೈತನ್ಯಗೆ ವಿಚ್ಛೇದನ ನೀಡಿದ್ದರು. ಅಂದಿನಿಂದ ಅವರ ಚಲನಚಿತ್ರ ವೃತ್ತಿಜೀವನಕ್ಕಿಂತ ಅವರ ಜೀವನದ ಬಗ್ಗೆಯೇ ಹೆಚ್ಚಿನ ಸುದ್ದಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಇದರ ಬೆನ್ನಲ್ಲೇ ಸದ್ಯಕ್ಕೆ ಈಗ ಮತ್ತೊಂದು ಸುದ್ದಿ ವೈರಲ್ ಆಗುತ್ತಿದೆ.
ಶಾಕಿಂಗ್..ನಟಿ ಸಮಂತಾ ಗರ್ಭಿಣಿ! 'ಯಶೋದೆ'ಗಾಗಿ!! - ಅಕ್ಕಿನೇನಿ ನಾಗಚೈತನ್ಯರಿಂದ ಬೇರ್ಪಟ್ಟ ಸಮಂತಾ
ಟಾಲಿವುಡ್ ಕ್ವೀನ್ ಸಮಂತಾ ಹೊಸ ಸಿನಿಮಾಗಳು ಮತ್ತು ವಿಭಿನ್ನ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಇವರು ಸದ್ಯಕ್ಕೆ ನಾಲ್ಕು ಚಿತ್ರಗಳಲ್ಲಿ ನಟಿಸುತ್ತಿದ್ದು, ಯಶೋದಾ ಸಿನಿಮಾದಲ್ಲಿ ಗರ್ಭಿಣಿ ಪಾತ್ರದಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಚಿತ್ರೋದ್ಯಮದ ವಲಯದಲ್ಲಿ ಕೇಳಿ ಬರುತ್ತಿದೆ.
ಟಾಲಿವುಡ್ ಕ್ವೀನ್ ಸಮಂತಾ ಹೊಸ ಸಿನಿಮಾಗಳು ಮತ್ತು ವಿಭಿನ್ನ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಇವರು ಸದ್ಯಕ್ಕೆ ನಾಲ್ಕು ಚಿತ್ರಗಳಲ್ಲಿ ನಟಿಸುತ್ತಿದ್ದು, ಯಶೋದಾ ಸಿನಿಮಾದಲ್ಲಿ ಗರ್ಭಿಣಿ ಪಾತ್ರದಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಚಿತ್ರೋದ್ಯಮದ ವಲಯದಲ್ಲಿ ಕೇಳಿ ಬರುತ್ತಿದೆ. ಲೇಡಿ ಓರಿಯೆಂಟೆಡ್ ಚಿತ್ರವಾಗಿ ತೆರೆಕಾಣಲಿರುವ ಈ ಚಿತ್ರದಲ್ಲಿ ನರ್ಸ್ ಪಾತ್ರದಲ್ಲಿ ಮಿಂಚುತ್ತಿರುವ ಇವರು ಗರ್ಭಿಣಿಯಾಗಿ ಕಾಣಿಸಿಕೊಂಡು ಜನಪ್ರಿಯತೆ ಗಳಿಸಲು ಹವಣಿಸುತ್ತಿದ್ದಾರೆ.
ಚಿತ್ರಕ್ಕಾಗಿ ಹೈದರಾಬಾದ್‌ನಲ್ಲಿ ಆಸ್ಪತ್ರೆ ಸೆಟ್ ಕೂಡ ಹಾಕಲಾಗಿತ್ತು. ಚಿತ್ರ ತಂಡ ಶೂಟಿಂಗ್ನ ಮೊದಲ ಶೆಡ್ಯೂಲ್ ಅನ್ನು ಪೂರ್ಣಗೊಳಿಸಿದೆ.