ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಅವರು ಒಂದು ಪೋಸ್ಟ್ ಮಾಡಿದ್ರೆ ಮಿಲಿಯಗಟ್ಟಲೆ ಅಭಿಮಾನಿಗಳು ಲೈಕ್, ಕಮೆಂಟ್ ಮಾಡ್ತಾರೆ. ಇನ್ನು ಸಲ್ಲು ಭಾಯ್ ಇನ್ಸ್ಟಾಗ್ರಾಮ್ ಫಾಲೋವರ್ಸ್ ಬಗ್ಗೆ ಕೇಳಿದ್ರೆ ನೀವು ಬೆರಗಾಗೋದು ಗ್ಯಾರೆಂಟಿ.
ಸಲ್ಮಾನ್ ಖಾನ್ (ಸಂಗ್ರಹ ಚಿತ್ರ) ದಬ್ಬಾಂಗ್ ನಾಯಕನ ಇನ್ಸ್ಟಾಗ್ರಾಮ್ ಹಿಂಬಾಲಕರ ಸಂಖ್ಯೆ ಬರೋಬ್ಬರಿ 30 ಮಿಲಿಯನ್ಗೆ ತಲುಪಿದೆ.
ವಿಶೇಷ ರೀತಿಯಲ್ಲಿ ಥ್ಯಾಂಕ್ಸ್ ಹೇಳಿರುವ ಸಲ್ಲು, ಇನ್ಸ್ಟಾಗ್ರಾಮ್ನಲ್ಲಿ ಕೈ ಮುಗಿರುವ ಬೂಮ್ರಾಂಗ್ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಸಲ್ಮಾನ್ ಅಭಿಮಾನಿಗಳು ಲವ್ ಯು ಸಲ್ಮಾನ್ ಖಾನ್, ಓಹ್ ಸ್ವಾಗ್, ಆ್ಯಮ್ ಯುವರ್ ಬಿಗ್ಗೆಸ್ಟ್ ಫ್ಯಾನ್ ಅಂತೆಲ್ಲ ಕಮೆಂಟ್ ಮಾಡಿದ್ದಾರೆ.
ಸದ್ಯ ಬಿಗ್‌ಬಾಸ್ 13ರ ನಿರೂಪಣೆ ಮುಗಿಸಿರುವ ಸಲ್ಮಾನ್, ರಾಧೆ ಸಿನಿಮಾದ ಬ್ಯುಸಿಯಲ್ಲಿದ್ದಾರೆ. ನಿನ್ನೆ ರಾಧೆ ಚಿತ್ರದ ಅಪ್ಡೇಟ್ ಕೊಟ್ಟಿದ್ದ ಸಲ್ಲು, 2020ರ ಈದ್ ಹಬ್ಬಕ್ಕೆ ಪ್ರಭುದೇವ್ ನಿರ್ದೇಶನದ ರಾಧೆ ಚಿತ್ರ ರಿಲೀಸ್ ಆಗಲಿದೆ ಎಂದು ತಿಳಿಸಿದ್ದರು.