ಕರ್ನಾಟಕ

karnataka

ETV Bharat / sitara

ದುನಿಯಾ ವಿಜಯ್​​​ 'ಸಲಗ'ಕ್ಕೆ 'ಪವರ್ ಸ್ಟಾರ್​​' ಸಪೋರ್ಟ್ - ಸ್ಯಾಂಡಲ್​ವುಡ್​ ಸುದ್ದಿ

ಬ್ಲಾಕ್​ ಕೋಬ್ರಾ ದುನಿಯಾ ವಿಜಯ್​ ನಟಿಸಿ ನಿರ್ದೇಶಿಸುತ್ತಿರುವ​ ಸಲಗ ಚಿತ್ರಕ್ಕೆ ಪವರ್​ ಸ್ಟಾರ್​​ ಪುನೀತ್​ ರಾಜಕುಮಾರ್​​ ಗುಡ್​​ಲಕ್​ ಹೇಳಿದ್ದು, ಚಿತ್ರದ 'ಮಳೆಯೆ ಮಳೆಯೇ' ಹಾಡನ್ನು ಬಿಡುಗಡೆ ಮಾಡಿದ್ದಾರೆ.

salaga-kannada-film-song-released-by-puneeth-rajkumar
ಪುನೀತ್​​ ರಾಜ್​ಕುಮಾರ್​​

By

Published : Sep 4, 2020, 9:53 PM IST

ಟೀಸರ್​ನಿಂದ ಸ್ಯಾಂಡಲ್​ವುಡ್​​ನಲ್ಲಿ ಸಖತ್​​ ಸೌಂಡ್​​ ಮಾಡುತ್ತಿರುವ ದುನಿಯಾ ವಿಜಯ್ ನಿರ್ದೇಶನ ಹಾಗೂ ನಟನೆಯ ಚಿತ್ರ 'ಸಲಗ'ಕ್ಕೆ ಮತ್ತಷ್ಟು ಪವರ್​ ಸಿಕ್ಕಿದ್ದು, ಚಿತ್ರದ ಹಾಡೊಂದನ್ನು ಪವರ್​​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಬಿಡುಗಡೆ ಮಾಡಿದ್ದಾರೆ.

ಸಲಗ ಚಿತ್ರದ ಹಾಡನ್ನು ಬಿಡುಗಡೆ ಮಾಡಿದ ಪವರ್​ಸ್ಟಾರ್​ ಪುನೀತ್​​ ರಾಜ್​ಕುಮಾರ್​​

ಕೆಲವು ದಿನಗಳ ಹಿಂದೆ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಹಾಸನದ ಸಕಲೇಶಪುರದಲ್ಲಿ 'ಮಳೆಯೆ ಮಳೆಯೇ' ಎಂಬ ರೋಮ್ಯಾಂಟಿಕ್ ಹಾಡೊಂದನ್ನ ಚಿತ್ರತಂಡ ಚಿತ್ರೀಕರಣ ಮಾಡಿತ್ತು. ಈ ಹಾಡನ್ನ ಮೆಚ್ಚಿರುವ ಅಪ್ಪು ವಿಜಯ್​ ಟೀಮ್​ಗೆ ಗುಡ್​​ಲಕ್​ ಹೇಳಿದ್ದಾರೆ.

ಸಂಗೀತ ನಿರ್ದೇಶಕ ಚರಣ್ ರಾಜ್ ಗೀತ ಸಂಯೋಜನೆ ಮಾಡಿದ್ದಾರೆ. ಟಗರು ಸಿನಿಮಾ ಬಳಿಕ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿರೋ ಸಲಗ ಚಿತ್ರ ಕೊರೊನಾ ಹಾವಳಿ ಕಡಿಮೆಯಾದ ಬಳಿಕ ತೆರೆ ಮೇಲೆ ಬರಲು ಸಿದ್ಧವಾಗಿದೆ.

ABOUT THE AUTHOR

...view details