ಕರ್ನಾಟಕ

karnataka

ETV Bharat / sitara

ಜೇಮ್ಸ್​​ಗೆ ಆರ್​ಆರ್​ಆರ್​ ಕಂಟಕ; ಚಿತ್ರಮಂದಿರಗಳ ಸಮಸ್ಯೆಗೆ ಕೊನೆಗೂ ಇತಿಶ್ರೀ

ತೆಲುಗಿನ ಆರ್​ಆರ್​ಆರ್​ ಸಿನಿಮಾ ನಾಳೆ ತೆರೆ ಕಾಣುತ್ತಿದೆ. ರಾಜ್ಯದಲ್ಲಿ ಈಗಾಗಲೇ ಭರ್ಜರಿ ಪ್ರದರ್ಶನ ಕಾಣುತ್ತಿರುವ ಈ​ ಸಿನಿಮಾವನ್ನು ಕೆಲ ಚಿತ್ರಮಂದಿರಗಳಲ್ಲಿ ಕೈಬಿಡಲು ಹುನ್ನಾರ ನಡೆಸಿದ್ದಾರೆ ಎಂಬುದರ ಬಗ್ಗೆ ನಟ ಶಿವರಾಜ್‌ ಕುಮಾರ್​, ಫಿಲ್ಮ್‌ ಛೇಂಬರ್​ ಪದಾಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿದ್ದಾರೆ.

james
ಜೇಮ್ಸ್

By

Published : Mar 24, 2022, 3:16 PM IST

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಜೇಮ್ಸ್ ಕಳೆದ ವಾರ ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೆ, ತೆಲುಗಿನ ಆರ್​ಆರ್​ಆರ್​ ಸಿನಿಮಾ ನಾಳೆ ಬಿಡುಗಡೆ ಕಾಣುತ್ತಿದೆ. ಚಿತ್ರಮಂದಿರಗಳಲ್ಲಿ ಜೇಮ್ಸ್ ತೆಗೆದು ಆರ್​​ಆರ್​ಆರ್ ಸಿನಿಮಾ ಹಾಕುವ ಹುನ್ನಾರ ನಡೆದಿದೆ ಎಂದು ಹೇಳಲಾಗಿದೆ.

ನಿನ್ನೆಯಷ್ಟೇ ವಾಟಾಳ್ ನಾಗರಾಜ್, ಜೇಮ್ಸ್ ಸಿನಿಮಾ ತೆಗೆಯದಂತೆ ಪ್ರತಿಭಟನೆ ಮಾಡಿದ್ದರು. ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಕನ್ನಡ ಹೋರಾಟಗಾರ ಪ್ರವೀಣ್ ಶೆಟ್ಟಿ ಪ್ರತಿಭಟನೆ ಮಾಡಿದರು. ಈ ಸಮಸ್ಯೆ ಬಗೆಹರಿಸೋದಕ್ಕೆ ನಟ ಶಿವರಾಜ್ ಕುಮಾರ್, ಜೇಮ್ಸ್ ಸಿನಿಮಾ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಫಿಲ್ಮ್ ಚೇಂಬರ್​ಗೆ ಆಗಮಿಸಿ, ಅಧ್ಯಕ್ಷ ಜಯರಾಜ್ ಜೊತೆ ಚರ್ಚೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ಸಿನಿಮಾಗಳಿಗೆ ಥಿಯೇಟರ್ ಸಮಸ್ಯೆ ಇದ್ದಿದ್ದೇ. ಇದು ನನ್ನ ತಮ್ಮ ಅಪ್ಪು ಸಿನಿಮಾ ಅಂತಲ್ಲ. ಇದರಲ್ಲಿ ಯಾರದು ತಪ್ಪು ಅಂತ ಹೇಳೋಕೆ ಆಗಲ್ಲ. ಇಂಡಸ್ಟ್ರಿಯಲ್ಲಿ ಎಲ್ಲರೂ ಒಂದೇ. ಅಪ್ಪು ಸಿನಿಮಾ ಅಂದ್ರೆ ಎಮೋಷನ್, ಬಿಟ್ಟುಕೊಡೋದಕ್ಕೆ ಆಗಲ್ಲ ಎಂದರು.

ಜೇಮ್ಸ್ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಮಾತನಾಡಿ, ಮೊದಲು ಒಂಭತ್ತು ಚಿತ್ರಮಂದಿರಗಳ ಸಮಸ್ಯೆ ಇತ್ತು. ಶಿವಣ್ಣ ಹಾಗೂ ವಾಣಿಜ್ಯ ಮಂಡಳಿ ಸೇರಿ ಸಮಸ್ಯೆ ಬಗೆಹರಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಬಿಜೆಪಿಗೆ ಸೇರ್ಪಡೆಯಾದ ಮೂವರು 'ವಿಐಪಿ' ಶಾಸಕರು..

For All Latest Updates

ABOUT THE AUTHOR

...view details