ಕರ್ನಾಟಕ

karnataka

ETV Bharat / sitara

ಸಹೋದರಿಯಿಂದ ರಾಖಿ ಕಟ್ಟಿಸಿಕೊಂಡು ಸಂಭ್ರಮಿಸಿದ ರಾಕಿ ಭಾಯ್​​!

ಸ್ಯಾಂಡಲ್​​​ವುಡ್ ನಟ ಯಶ್, ಸಹೋದರಿ ನಂದಿನಿಯೊಂದಿಗೆ ಇಂದು ಸಂಭ್ರಮದಿಂದ ರಾಖಿ ಹಬ್ಬ ಆಚರಿಸಿದ್ದಾರೆ. ತಂಗಿ ನಂದಿನಿಯೊಂದಿಗೆ ಇರುವ ಫೋಟೋವನ್ನು ಯಶ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೂ ಶುಭ ಕೋರಿದ್ದಾರೆ.

By

Published : Aug 15, 2019, 8:14 PM IST

Updated : Aug 15, 2019, 11:40 PM IST

ರಾಕಿ ಭಾಯ್

ಇಂದು ದೇಶಾದ್ಯಂತ 73ನೇ ಸ್ವಾತಂತ್ಯ್ರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಜೊತೆಗೆ ಎಲ್ಲೆಡೆ ಸಹೋದರ-ಸಹೋದರಿಯರು ಸಂಭ್ರಮದ ರಾಖಿ ಹಬ್ಬವನ್ನು ಆಚರಿಸುತ್ತಿದ್ದಾರೆ. ತಮ್ಮ, ಅಣ್ಣಂದಿರಿಗೆ ಹೆಣ್ಣುಮಕ್ಕಳು ರಕ್ಷಾ ಬಂಧನ ಕಟ್ಟಿ ಹಾರೈಸುತ್ತಿದ್ದಾರೆ.

ಚಂದನವನದಲ್ಲೂ ಕೂಡಾ ಸೆಲಬ್ರಿಟಿಗಳು ರಕ್ಷಾ ಬಂಧನ ಆಚರಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಕೂಡಾ ಸಹೋದರಿ ಜೊತೆ ರಾಖಿ ಹಬ್ಬ ಆಚರಿಸಿದ್ದಾರೆ. ಯಶ್ ತಂಗಿ ನಂದಿನಿ ಅಣ್ಣನಿಗೆ ರಾಖಿ ಕಟ್ಟಿದ್ದಾರೆ. ತಂಗಿಯೊಂದಿಗೆ ಇರುವ ಫೋಟೋವನ್ನು ಯಶ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ರಕ್ಷಾ ಬಂಧನ ಹಬ್ಬದ ಶುಭ ಕೋರಿದ್ದಾರೆ. 'ಈ ರಾಕಿ ನಿನ್ನೊಂದಿಗೆ ಇರುವವರೆಗೂ ನೀನು ನಿಶ್ಚಿಂತೆಯಿಂದ ಇರು. ಹಾಗೇ ನೀನು ಕಟ್ಟಿರುವ ರಾಖಿ ನನ್ನೊಂದಿಗೆ ಇರುವವರೆಗೂ ನನಗೆ ಯಾವುದೇ ಚಿಂತೆ ಇಲ್ಲ' ಎಂದು ಬಹಳ ಅರ್ಥಪೂರ್ಣವಾಗಿ ಯಶ್ ಬರೆದುಕೊಂಡಿದ್ದಾರೆ. ಅಲ್ಲದೆ ಅಭಿಮಾನಿಗಳಿಗೆ ಕೂಡಾ ರಕ್ಷಾ ಬಂಧನ ಹಾಗೂ ಸ್ವಾಂತತ್ಯ್ರೋತ್ಸವದ ಶುಭ ಕೋರಿದ್ದಾರೆ.

Last Updated : Aug 15, 2019, 11:40 PM IST

ABOUT THE AUTHOR

...view details