ಕರ್ನಾಟಕ

karnataka

ETV Bharat / sitara

'ಕವಲುದಾರಿ'ಯ ಹುಡುಗನಿಗೆ ಕೂಡಿಬಂತು ಕಂಕಣ ಭಾಗ್ಯ - ಸ್ವಾತಿಯನ್ನು ಮದುವೆಯಾದ ರಿಷಿ

ಸ್ವಾತಿ ಎಂಬವರನ್ನು ವರಿಸುವ ಮೂಲಕ ನಟ ರಿಷಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ರಿಷಿ ಮತ್ತು ಸ್ವಾತಿ

By

Published : Nov 10, 2019, 7:58 PM IST

Updated : Nov 12, 2019, 4:01 PM IST

ಸ್ಯಾಂಡಲ್​​ವುಡ್​​ನಲ್ಲಿ ಮದುವೆ ಸುಗ್ಗಿ ಪ್ರಾರಂಭವಾಗಿದೆ. ಚಂದನವನದ ಅಪ್‌ಕಮಿಂಗ್ ಸ್ಟಾರ್ ಎಂದೇ ಪರಿಗಣಿಸಲಾಗುವ ರಿಷಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ರಿಷಿ ಮತ್ತು ಸ್ವಾತಿ ಮದುವೆ ಸಂಭ್ರಮ

'ಆಪರೇಷನ್ ಅಲಮೇಲಮ್ಮ' ಹಾಗೂ 'ಕವಲುದಾರಿ' ಚಿತ್ರಗಳಲ್ಲಿ ನಟಿಸಿ ಗಮನ‌ಸೆಳೆದಿರುವ ರಿಷಿ ಇಂದು ವೈವಾಹಿಕ ಜೀವನಕ್ಕೆ ಎಂಟ್ರಿ ಕೊಟ್ಟರು. ಇತ್ತೀಚೆಗಷ್ಟೆ ಮೈಸೂರಿನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅವರು ಇಂದು ಸ್ವಾತಿ ಜೊತೆ ಸಪ್ತಪದಿ ತುಳಿದಿದ್ದಾರೆ.

ರಿಷಿ ಮತ್ತು ಸ್ವಾತಿ ಮದುವೆ ಸಂಭ್ರಮ

ಚೆನ್ನೈನಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಆಪ್ತರು, ಗಣ್ಯರು ಹಾಗು ಕುಟುಂಬದವರು ಪಾಲ್ಗೊಂಡು ಸಂಭ್ರಮಕ್ಕೆ ಸಾಕ್ಷಿಯಾದ್ರು.

ರಿಷಿ ಮತ್ತು ಸ್ವಾತಿ ಮದುವೆ ಸಂಭ್ರಮ

ಚಿತ್ರರಂಗದ ಗಣ್ಯರಿಗಾಗಿ ಇದೇ ನವಂಬರ್ 20 ರಂದು ಬೆಂಗಳೂರಿನಲ್ಲಿ ರಿಷಿ ಹಾಗೂ ಸ್ವಾತಿ ಅದ್ದೂರಿಯಾಗಿ ರಿಸೆಪ್ಷನ್ ಇಟ್ಟುಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್‌ನ ಗಣ್ಯರು ಭಾಗವಹಿಸಲಿದ್ದಾರೆ.

ರಿಷಿ ಮತ್ತು ಸ್ವಾತಿ ಮದುವೆ ಸಂಭ್ರಮ
ರಿಷಿ ಮದುವೆ ಸಂಭ್ರಮ
Last Updated : Nov 12, 2019, 4:01 PM IST

ABOUT THE AUTHOR

...view details