ಚಿತ್ರರಂಗ ಎನ್ನುವುದು ಸಾಗರ ಇದ್ದಂತೆ. ಈ ಸಾಗರದಲ್ಲಿ ಈಜುವುದು ಒಂದು ಸವಾಲಿನ ಕೆಲಸ. ಯಾವುದೇ ಚಿತ್ರರಂಗ ಆದರೂ ಸಕ್ಸಸ್ ಆಗಬೇಕೆಂದರೆ ಪ್ರತಿಭೆ ಜೊತೆಗೆ ಅದೃಷ್ಟ ಕೂಡಾ ಇರಬೇಕು.
ರಿಷಭ್ ಶೆಟ್ಟಿಯ ಲಕ್ನ್ನೇ ಬದಲಿಸಿದ ಬ್ರಾಸ್ಲೆಟ್: ಈ ಗಿಫ್ಟ್ ಕೊಟ್ಟಿದ್ದು ಯಾರು ಗೊತ್ತಾ?
ನಟ, ನಿರ್ದೇಶಕ ರಿಷಭ್ ಶೆಟ್ಟಿ ಧರಿಸಿರುವ ಬ್ರಾಸ್ಲೆಟ್ ಅವರಿಗೆ ಬಹಳ ಲಕ್ಕಿಯಂತೆ. ತಮ್ಮ ಸಿನಿಮಾಗಳು ಸಕ್ಸಸ್ ಆಗಲು ತಮಗೆ ಅಭಿಮಾನಿ ನೀಡಿದ ಈ ಬ್ರಾಸ್ಲೆಟ್ ಕಾರಣ ಎನ್ನುತ್ತಾರೆ ಬೆಲ್ ಬಾಟಮ್ ನಾಯಕ.
ಇನ್ನು, ನಟ-ನಟಿಯರು ಚಿತ್ರರಂಗದಲ್ಲಿ ಸಕ್ಸಸ್ ಆಗುವ ಉದ್ದೇಶದಿಂದ ಹೆಸರು ಬದಲಿಸಿಕೊಳ್ಳುವುದು, ತಮ್ಮ ಹೆಸರಿಗೆ ತಕ್ಕ ಅದೃಷ್ಟದ ಹರಳುಗಳ ಉಂಗುರ ಧರಿಸುವುದು ಸಾಮಾನ್ಯ. ಅದೇ ರೀತಿ ರಿಷಭ್ ಶೆಟ್ಟಿ, ಸಿನಿಮಾ ಸಕ್ಸಸ್ ಜರ್ನಿಯಲ್ಲಿ, ಒಂದು ಬ್ರಾಸ್ಲೆಟ್ ಅವರ ಅದೃಷ್ಟಕ್ಕೆ ಜೊತೆಯಾಗಿದೆಯಂತೆ. ಇಂತಹದ್ದೇ ಬ್ರಾಸ್ಲೆಟ್ನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡಾ ಧರಿಸಿದ್ದಾರೆ. ರಿಷಭ್ ಶೆಟ್ಟಿ 'ಉಳಿದವರು ಕಂಡಂತೆ', 'ಕಿರಿಕ್ ಪಾರ್ಟಿ' ಚಿತ್ರದ ನಂತರ ನಿರ್ದೇಶಿಸಿದ ಹಾಗೂ ಅಭಿನಯಿಸಿದ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿವೆ. ಅದರಲ್ಲಿ 'ರಿಕ್ಕಿ', 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಹಾಗೂ ಮೊದಲ ಬಾರಿ ನಾಯಕನಾಗಿ ಅಭಿನಯಿಸಿದ 'ಬೆಲ್ ಬಾಟಮ್' ಚಿತ್ರ ರಿಷಭ್ ಶೆಟ್ಟಿ ಸಿನಿಕರಿಯರ್ನಲ್ಲಿ ಬಹಳ ಯಶಸ್ಸು ಕಂಡ ಸಿನಿಮಾಗಳು. ಇದಕ್ಕೆಲ್ಲಾ ತಾವು ಧರಿಸಿರುವ ಬ್ರಾಸ್ಲೆಟ್ ಕಾರಣ ಎನ್ನುತ್ತಾರೆ ರಿಷಭ್.
ಈ ಬ್ರಾಸ್ಲೆಟ್ ಕೊಟ್ಟಿದ್ದು ಆಶಾ ಎಂಬ ಅಭಿಮಾನಿಯಂತೆ. 'ಉಳಿದವರು ಕಂಡಂತೆ' ಚಿತ್ರ ನೋಡಿ ಆಶಾ ಎಂಬುವರು ನನಗೆ ಈ ಬ್ರಾಸ್ಲೆಟ್ ಕೊಟ್ಟಿದ್ದಾರೆ. ಮಂಗಳೂರಿನವರೇ ಆದ ಆಶಾ, ರಿಷಭ್ ಶೆಟ್ಟಿ ಹುಟ್ಟಿದ ದಿನಾಂಕಕ್ಕೆ ಸರಿ ಹೊಂದುವ ಲಕ್ಕಿ ಸ್ಟೋನ್ ಹಾಕಿ ಅವರಿಗೆ ಧರಿಸಲು ನೀಡಿದ್ದಾರಂತೆ. ಇದನ್ನು ಹಾಕಿದಾಗಿನಿಂದಲೂ ನನಗೆ ಬಹಳ ಒಳ್ಳೆಯದಾಗಿದೆ. ಇದೀಗ ರಿಷಭ್ ಶೆಟ್ಟಿ 'ಕಥಾಸಂಗಮ' ಚಿತ್ರದಲ್ಲಿ ಬ್ಯುಸಿ ಇದ್ದು, ಈ ಸಿನಿಮಾ ಕೂಡಾ ಖಂಡಿತ ಹಿಟ್ ಆಗುತ್ತೆ ಎಂಬ ನಂಬಿಕೆಯಲ್ಲಿದ್ದಾರೆ ರಿಷಬ್.