ಕರ್ನಾಟಕ

karnataka

ETV Bharat / sitara

ಸಬ್ಜೆಕ್ಟ್​ ಚೆನ್ನಾಗಿದ್ರೆ ಖಂಡಿತ ತುಳು ಚಿತ್ರದಲ್ಲಿ ನಟಿಸುವೆ: ರಿಷಬ್​ - Rishab shetty in success meet of tulu film Girgit

ರಿಷಬ್ ಶೆಟ್ಟಿ ಮಂಗಳೂರು ಮೂಲದ ಯುವ ಪ್ರತಿಭೆ. ಇವರು ಈಗಾಗಲೇ ಉತ್ತಮ ಕಂಟೆಂಟ್​ಗಳ ಸಿನಿಮಾಗಳನ್ನು ನಿರ್ದೇಶನ ಮಾಡಿ ಸಕ್ಸಸ್ ಗಳಿಸಿದವರು. ಅಲ್ಲದೆ ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ರಿಷಬ್ 'ಬೆಲ್ ಬಾಟಂ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕರಾಗಿ ಭಡ್ತಿಯನ್ನೂ ಪಡೆದಿದ್ದಾರೆ. ಮೂಲತಃ ಕುಂದಾಪುರದವರಾದ ರಿಷಬ್ ಅವರು ತುಳು, ಕುಂದಾಪುರ ಕನ್ನಡ ಹಾಗೂ ಬೆಂಗಳೂರು ಕನ್ನಡದ ಮೇಲೆ ಹಿಡಿತ ಇರುವ ಅದ್ಭುತ ಪ್ರತಿಭೆ.

ರಿಷಬ್ ಶೆಟ್ಟಿ

By

Published : Sep 10, 2019, 12:35 PM IST

ರಿಷಬ್ ಶೆಟ್ಟಿ ಮಂಗಳೂರು ಮೂಲದ ಯುವ ಪ್ರತಿಭೆ, ಉತ್ತಮ ಕಂಟೆಂಟ್​ಗಳ ಸಿನಿಮಾಗಳನ್ನು ನಿರ್ದೇಶನ ಮಾಡಿ ಸಕ್ಸಸ್ ಗಳಿಸಿದವರು. ಅಲ್ಲದೆ ಚಿಕ್ಕಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ರಿಷಬ್ 'ಬೆಲ್ ಬಾಟಂ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕರಾಗಿ ಭಡ್ತಿ ಪಡೆದು ಸಕ್ಸಸ್ ಕಂಡವರು. ಮೂಲತಃ ಕುಂದಾಪುರದವರಾದ ರಿಷಬ್​ಗೆ ತುಳು, ಕುಂದಾಪುರ ಕನ್ನಡ ಹಾಗೂ ಬೆಂಗಳೂರು ಕನ್ನಡದ ಮೇಲೆ ಹಿಡಿತ ಇದೆ.

ರಿಷಬ್ ಶೆಟ್ಟಿ ಈಗಾಗಲೇ ಕನ್ನಡದಲ್ಲಿ ಎರಡು ಯಶಸ್ವಿ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಅದರಲ್ಲಿ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಮೂಲಕ ಕರಾವಳಿ ತೀರದ ನೇಟಿವಿಟಿಯಲ್ಲಿ ಸಿನಿಮಾ ಮಾಡಿ ಯಶಸ್ಸು ಕಂಡಿದ್ದಾರೆ. ಅಲ್ಲದೆ ತುಳು ಭಾಷೆ ಮೇಲೆ ಹಿಡಿತ ಸಾಧಿಸಿರುವ ರಿಷಬ್ ಮುಂದಿನ ದಿನಗಳಲ್ಲಿ ನೀವೇನಾದ್ರೂ ತುಳು ಚಿತ್ರದ ನಿರ್ದೇಶನ ಹಾಗೂ ನಟನೆ ಮಾಡ್ತೀರಾ ಎಂಬ ಪ್ರಶ್ನೆಗೆ ತುಂಬಾ ನಾಜೂಕಾಗಿಯೇ ಉತ್ತರಿಸಿದ್ದಾರೆ.

ತುಳು ಚಿತ್ರದ ಸಕ್ಸಸ್​ ಮೀಟ್​ನಲ್ಲಿ ರಿಷಬ್​ ಶೆಟ್ಟಿ

ತುಳು ಚಿತ್ರ ಗಿರಿಗಿಟ್​ ಸಕ್ಸಸ್ ಮೀಟ್​ನಲ್ಲಿ ಭಾಗವಹಿಸಿದ್ದ ಶೆಟ್ರಿಗೆ ಇಂಥದೊಂದು ಪ್ರಶ್ನೆ ಎದುರಾಯಿತು. ಆಗ ತುಂಬಾ ಜಾಣ್ಮೆಯಿಂದ ಉತ್ತರಿಸಿದ ರಿಷಬ್, ಸದ್ಯ ನಾನು ಆ ಆಲೋಚನೆಯನ್ನು ಏನು ಮಾಡಿಲ್ಲ. ಆದರೆ ಕನ್ನಡದಲ್ಲಿ ಕರಾವಳಿ ಶೈಲಿಯ, ಉತ್ತರ ಕನ್ನಡ ಶೈಲಿಯ ಚಿತ್ರಗಳು ಬರಬೇಕು. ಅಲ್ಲದೆ ಅಂತಹ ಚಿತ್ರಗಳನ್ನು ಇತ್ತೀಚಿನ ದಿನಗಳಲ್ಲಿ ಜನರು ಸ್ವೀಕರಿಸುತ್ತಿದ್ದಾರೆ. ವಿಶೇಷ ಅಂದ್ರೆ ನನ್ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಉಳಿದವರು ಕಂಡಂತೆ ಚಿತ್ರ ಕರಾವಳಿ ಶೈಲಿಯ ಚಿತ್ರಗಳು. ಅವನ್ನು ಮೆಚ್ಚಿ ದೊಡ್ಡಮಟ್ಟದಲ್ಲಿ ಗೆಲ್ಲಿಸಿದ್ದಾರೆ. ಅದರಿಂದ ನಾನು ಕುಂದಾಪುರ ಶೈಲಿಯ ಕನ್ನಡದಲ್ಲಿ ಸಿನಿಮಾ ಮಾಡಬೇಕೆಂದುಕೊಂಡಿದ್ದೇನೆ ಎಂದರು.

ಕರ್ನಾಟಕದಲ್ಲಿ ಮಾತನಾಡುವ ತುಳು, ಕೊಂಕಣಿ, ಉತ್ತರ ಕರ್ನಾಟಕದ ಶೈಲಿಯ ಕನ್ನಡ ಹಾಗೂ ರಾಜ್ಯದಲ್ಲಿ ಮಾತನಾಡುವ ಭಾಷೆಯೂ ಕನ್ನಡವೇ ಆಗಿವೆ. ಅದರಿಂದ ಮುಂದಿನ ದಿನಗಳಲ್ಲಿ ಅಂತಹ ಚಿತ್ರಗಳನ್ನು ಮಾಡಿದರೂ ಮಾಡಬಹುದು. ನಾನು ಈಗ ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳನ್ನು ಮಾಡಿದ್ದೇನೆ. ಅಲ್ಲದೆ ಉತ್ತಮ ಅವಕಾಶಗಳು ಸಿಗುತ್ತಿವೆ. ಜನರು ನನ್ನನ್ನು ಬೆನ್ನು ತಟ್ಟಿದ್ದಾರೆ. ಕನ್ನಡ ಚಿತ್ರಗಳಲ್ಲಿ ಮಂಗಳೂರು ಶೈಲಿಯ, ಉತ್ತರ ಕರ್ನಾಟಕ ಶೈಲಿಯ ಚಿತ್ರಗಳನ್ನು ಮಾಡಿ ಅದರಲ್ಲೇ ಎಲ್ಲ ವಿಷಯಗಳನ್ನು ಹೇಳುವುದು ಉತ್ತಮ. ಹಾಗಾಗಿ ತುಳು ಸಿನಿಮಾ ಮಾಡಬೇಕೆಂಬ ಯೋಚನೆ ನನಗೆ ಬಂದಿರಲಿಲ್ಲ. ಅಲ್ಲದೆ ಒಂದು ಒಳ್ಳೆ ಸಬ್ಜೆಕ್ಟ್ ಸಿಕ್ಕರೆ, ಚಿತ್ರಕ್ಕೆ ನಾನು ಸೂಕ್ತ ಅನ್ನೋದಾದರೆ ತುಳು ಚಿತ್ರದಲ್ಲೂ ನಟಿಸಲು ಸಿದ್ಧ ಎಂದು ಹೇಳಿದ್ದಾರೆ.

ಸಿನಿಮಾ ಅಂದ ಮೇಲೆ ಎಲ್ಲಾನೂ ಒಂದೇ. ಆ ಸಿನಿಮಾ ಮಾಡಬೇಕು, ಇದನ್ನು ಮಾಡಬಾರದು ಅನ್ನೋದು ನನಗೇನೂ ಇಲ್ಲ. ಒಂದೊಳ್ಳೆ ಸಬ್ಜೆಕ್ಟ್ ಸಿಕ್ಕರೆ ಖಂಡಿತ ತುಳು ಸಿನಿಮಾ ಮಾಡುತ್ತೇನೆ ಎಂದು ಶೆಟ್ರು ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details