ನವದೆಹಲಿ:ದೇಶದಲ್ಲಿ 2ನೇ ಹಂತದ ಕೊರೊನಾ ಹಾವಳಿ ಜೋರಾಗಿದ್ದು, ಇದರ ಅಲೆಗೆ ಸಿಲುಕಿರುವ ಭಾರತ ಅನೇಕ ತೊಂದರೆ ಅನುಭವಿಸುತ್ತಿದೆ. ಇದೀಗ ಡೆಡ್ಲಿ ವೈರಸ್ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಕೈಜೋಡಿಸುತ್ತಿದ್ದು, ಸದ್ಯ ಬಾಲಿವುಡ್ನ ಸ್ಟಾರ್ ನಟ ಅಮಿತಾಬ್ ಬಚ್ಚನ್ ಕೂಡ ತಮ್ಮ ಕೈಲಾದ ಸಹಾಯ ನೀಡಿದ್ದಾರೆ.
ದೆಹಲಿಯ ರಕಾಬ್ ಗಂಜ್ನ ಗುರುದ್ವಾರದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೋವಿಡ್ ಕೇರ್ ಕೇಂದ್ರಕ್ಕೆ ಬಿಗ್ ಬಿ ಅಮಿತಾಬ್ ಬಚ್ಚನ್ 2 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರ್ಸಾ ತಿಳಿಸಿದ್ದಾರೆ.