ಕರ್ನಾಟಕ

karnataka

ETV Bharat / sitara

ಹುಟ್ಟೂರಲ್ಲೇ ಕನಸನ್ನು ನನಸು ಮಾಡಿಕೊಂಡ ರವಿ ಬಸ್ರೂರು - News by Ravi Basrur

ಇಂದು ಹೊಸ ವರ್ಷದ ಮೊದಲ ದಿನ ತಮ್ಮ ಕನಸಿನ ಕೂಸಿನ ಉದ್ಘಾಟನೆ ಮಾಡಿರುವ ಸಂಗೀತ ನಿರ್ದೇಶಕ ರವಿ ಬಸ್ರೂರು, ಈ ಕಾರ್ಯಕ್ರಮಕ್ಕೆ ಕೆಜಿಎಫ್​​ ನಿರ್ದೇಶಕ ಪ್ರಶಾಂತ್​ ನೀಲ್​​ರನ್ನು ಆಹ್ವಾನ ನೀಡಿ ಅವರಿಂದಲೇ ಸ್ಟುಡಿಯೋ ಉದ್ಘಾಟನೆ ಮಾಡಿಸಿದ್ದಾರೆ..

ಹುಟ್ಟೂರಲ್ಲೇ ಕನಸನ್ನು ನನಸು ಮಾಡಿಕೊಂಡ ರವಿ ಬಸ್ರೂರು
ಹುಟ್ಟೂರಲ್ಲೇ ಕನಸನ್ನು ನನಸು ಮಾಡಿಕೊಂಡ ರವಿ ಬಸ್ರೂರು

By

Published : Jan 1, 2021, 3:10 PM IST

Updated : Jan 1, 2021, 4:43 PM IST

'ಉಗ್ರಂ' ಸಿನಿಮಾ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕನಾಗಿ ಹೊರ ಹೊಮ್ಮಿದ ರವಿ ಬಸ್ರೂರು, ಮಫ್ತಿ, ಅಂಜನಿ ಪುತ್ರ, ಕೆಜಿಎಫ್, ಕೆಜಿಎಫ್ 2 ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಇದೀಗ ತಮ್ಮದೇ ಆದ ಸ್ವಂತ ಸ್ಟುಡಿಯೋವೊಂದನ್ನು ಕಟ್ಟಿಕೊಂಡಿದ್ದಾರೆ.

ರವಿ ಬಸ್ರೂರು ಮತ್ತು ಪ್ರಶಾಂತ್​​ ನೀಲ್​​

ವಿಶೇಷ ಏನಂದ್ರೆ ಈ ಸ್ಟುಡಿಯೋವನ್ನು ತಮ್ಮ ಹುಟ್ಟೂರಾದ ಬಸ್ರೂರಿನಲ್ಲಿ ನಿರ್ಮಾಣ ಮಾಡಿದ್ದಾರೆ. ಇಂದು ಹೊಸ ವರ್ಷದ ಮೊದಲ ದಿನ ತಮ್ಮ ಕನಸಿನ ಕೂಸಿನ ಉದ್ಘಾಟನೆ ಮಾಡಿರುವ ಸಂಗೀತ ನಿರ್ದೇಶಕ ರವಿ ಬಸ್ರೂರು, ಈ ಕಾರ್ಯಕ್ರಮಕ್ಕೆ ಕೆಜಿಎಫ್​​ ನಿರ್ದೇಶಕ ಪ್ರಶಾಂತ್​ ನೀಲ್​​ರನ್ನು ಆಹ್ವಾನ ನೀಡಿ ಅವರಿಂದಲೇ ಸ್ಟುಡಿಯೋ ಉದ್ಘಾಟನೆ ಮಾಡಿಸಿದ್ದಾರೆ.

ರವಿ ಬಸ್ರೂರು ಮತ್ತು ಪ್ರಶಾಂತ್​​ ನೀಲ್​​

ಈ ಸಂತಸದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರವಿ ಬಸ್ರೂರು, 'ಇದು ನನ್ನ ಜೀವನದಲ್ಲಿ ಅತ್ಯುತ್ತಮ ದಿನ. ನನ್ನ ಹುಟ್ಟೂರಾದ ಬಸ್ರೂರಿನಲ್ಲಿ ಡ್ರೀಮ್ ಸ್ಟುಡಿಯೋ ನಿರ್ಮಿಸುವ ನನ್ನ ಮೊಂಡುತನದ ಕನಸು ಇಂದು ನಿಜವಾಯಿತು. ಸ್ಟುಡಿಯೋ ಮತ್ತು ನನ್ನ ಸಂಗೀತ ನಿರ್ದೇಶನಕ್ಕೆ ಮಾರ್ಗದರ್ಶಕರು ಪ್ರಶಾಂತ್​​ ನೀಲ್' ಎಂದು ಬರೆದುಕೊಂಡಿದ್ದಾರೆ.

ಹುಟ್ಟೂರಲ್ಲೇ ಕನಸನ್ನು ನನಸು ಮಾಡಿಕೊಂಡ ರವಿ ಬಸ್ರೂರು
Last Updated : Jan 1, 2021, 4:43 PM IST

ABOUT THE AUTHOR

...view details