ಕೊಡಗು ಚೆಲುವೆ, ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್ನ ಬಹು ಬೇಡಿಕೆಯ ನಟಿ. ಕನ್ನಡದಲ್ಲಿ ಬೆರಳೆಣಿಕೆ ಚಿತ್ರಗಳಲ್ಲಿ ನಟಿಸಿ ತೆಲುಗಿನ 'ಚಲೋ' ಸಿನಿಮಾ ಮೂಲಕ ಟಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟ ಹುಡುಗಿ ಈಗ ಅಲ್ಲಿನ ಸ್ಟಾರ್ ಹೀರೋಯಿನ್.
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ರಶ್ಮಿಕಾ ಕೆಲವೊಂದು ಆಸಕ್ತಿಕರ ವಿಚಾರವನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಅಭಿಮಾನಿಗಳು ಲೈವ್ ಮೂಲಕ ಕೇಳಿದ ಪ್ರಶ್ನೆಗೆ ರಶ್ಮಿಕಾ ಉತ್ತರಿಸಿದ್ದಾರೆ. ಈ ಸಮಯದಲ್ಲಿ ಅವರು ಹೋಟೆಲ್ ರೂಮ್ನಲ್ಲಿ ಉಳಿದಿರುವಾಗ ನನಗೆ ಅಲ್ಲಿ ಶ್ಯಾಂಪೂಗಳನ್ನು ಬ್ಯಾಗಿಗೆ ಸೇರಿಸಿಕೊಳ್ಳುವ ಅಭ್ಯಾಸ ಇತ್ತು ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಒಮ್ಮೆ ಪಿಲ್ಲೋ ಕವರ್ ಇಷ್ಟ ಆಯ್ತು. ಅದನ್ನು ಕೂಡಾ ನನ್ನ ವ್ಯಾನಿಟಿ ಬ್ಯಾಗಿನಲ್ಲಿಟ್ಟು ತಂದಿದ್ದೆ ಎಂದು ಹೇಳಿಕೊಂಡಿದ್ದಾರೆ. ರಶ್ಮಿಕಾ ರಿವೀಲ್ ಮಾಡಿರುವ ಈ ವಿಚಾರಕ್ಕೆ ಈ ನೆಟಿಜನ್ಸ್ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.