ಈಗಂತು ಎಲ್ಲೆಲ್ಲೂ 'ಅವನೇ ಶ್ರೀಮನ್ನಾರಾಯಣ'ನದ್ದೇ ಸದ್ದು. ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್. ಅದ್ರಲ್ಲು ಟಿಕ್ ಟಾಕ್ನಲ್ಲಂತೂ ಹ್ಯಾಂಡ್ಸ್ ಅಪ್ ಹಾಡಿನ ಹವಾ ಬಲು ಜೋರಾಗಿದೆ. ಎಲ್ಲರೂ ಕೂಡ ಅವನೇ ಶ್ರೀಮನ್ನಾರಾಯಣನ ಸಿಗ್ನೇಚರ್ ಸ್ಪೆಪ್ಪಿಗೆ ಹೆಜ್ಜೆ ಹಾಕ್ತಿದ್ದಾರೆ.
ಆದ್ರೆ ಇಲ್ಲೊಬ್ರು ಪುಟಾಣಿ ಶೆಟ್ರು ಹ್ಯಾಂಡ್ಸ್ ಅಪ್ ಅಂತಿದ್ದಾರೆ. ಅವರು ಯಾರು ಅಂದ್ರಾ...? ಅವರೇ ರಿಷಬ್ ಶೆಟ್ಟಿ ಮಗ ರಣ್ವಿತ್ ಶೆಟ್ಟಿ. ರಿಷಬ್ ಶೆಟ್ಟಿ ತನ್ನ ಕೈಡಿದುಕೊಂಡು ಮಗನನ್ನು ಹ್ಯಾಂಡ್ಸ್ ಅಪ್ ಹಾಡಿಗೆ ಡ್ಯಾನ್ಸ್ ಮಾಡಿಸಿದ್ದಾರೆ. ನಗುಮುಗದಿಂದಲೇ ರಣ್ವಿತ್ ಹೆಜ್ಜೆ ಹಾಕಿದ್ದಾನೆ.