ಕರ್ನಾಟಕ

karnataka

By

Published : Dec 7, 2019, 3:15 PM IST

ETV Bharat / sitara

ಈ ವಾರ ಬಿಗ್‌ಬಾಸ್​​ ಮನೆಯಿಂದ ಹೊರ ಬರಲಿದ್ದಾರಂತೆ ಈ ಸ್ವರ್ಧಿ!

8ನೇ ವಾರದ ಎಲಿಮಿನೇಷನ್​ನಲ್ಲಿ ಕಾಣಿಸಿಕೊಂಡಿರುವ ಸ್ಪರ್ಧಿ ರಕ್ಷಾ ಹಾಗೂ ಚೈತ್ರಾ ಅತೀ ಕಡಿಮೆ ವೋಟ್ ಪಡೆದಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಪರ್ಫಾಮೆನ್ಸ್ ಗಮನಿಸಿದರೆ ರಕ್ಷಾ ಸೋಮಶೇಖರ್ ಡೇಂಜರಸ್ ಝೋನ್​ನಲ್ಲಿದ್ದಾರೆ. ಹಾಗಾಗಿ ಬಿಗ್ ಬಾಸ್ ಮನೆಯಿಂದ ಈ ವಾರ ರಕ್ಷಾ ಹೊರಬೀಳಲಿದ್ದಾರೆ ಎನ್ನಲಾಗುತ್ತಿದೆ.

raksha out from big boss house
ಬಿಗ್​ ಬಾಸ್​​ ಮನೆ ಸದಸ್ಯರು

ಬಿಗ್‌ಬಾಸ್ ಸೀಸನ್-7 ಎಂಟನೇ ವಾರಾಂತ್ಯಕ್ಕೆ ಬಂದು ನಿಂತಿದೆ. ಈಗಾಗಲೇ 7 ಸ್ಪರ್ಧಿಗಳು ಮನೆಯಿಂದ ಹೊರ ಹೋಗಿದ್ದಾರೆ. ಇನ್ನು ಮನೆಯಲ್ಲಿ 13 ಮಂದಿ ಉಳ್ಕೊಂಡಿದ್ದು, 8ನೇ ವಾರದಲ್ಲಿ 12 ಮಂದಿ ನಾಮಿನೇಟ್ ಆಗುವ ಮೂಲಕ ಈ ಬಾರಿ ಹೊರ ಹೋಗಲಿರುವ ಸ್ಪರ್ಧಿ ಯಾರೆಂಬ ಕುತೂಹಲ ಹೆಚ್ಚಾಗಿದೆ.

ಈ ವಾರ ಪ್ರಿಯಾಂಕಾ, ಚಂದನಾ, ಶೈನ್ ಶೆಟ್ಟಿ, ಭೂಮಿ ಶೆಟ್ಟಿ, ದೀಪಿಕಾ, ಚಂದನ್ ಆಚಾರ್, ಕಿಶನ್, ರಕ್ಷಾ, ಚೈತ್ರಾ ಕೊಟ್ಟೂರ್, ವಾಸುಕಿ ವೈಭವ್‌, ಹರೀಶ್ ರಾಜ್ ಹಾಗೂ ಕುರಿ ಪ್ರತಾಪ್ ನಾಮಿನೇಟ್​​ ಆಗಿದ್ದಾರೆ. ಕಳೆದ ವಾರ ಆರ್​ಜೆ ಪೃಥ್ವಿ ಮನೆಯಿಂದ ಹೊರ ಬಿದ್ದಿದ್ದರು.

ರಕ್ಷಾ

ಇದೇ ವೇಳೆ ರಕ್ಷಾ ಸೋಮಶೇಖರ್ ವೈಲ್ಡ್​ ಕಾರ್ಡ್ ಮೂಲಕ ಬಿಗ್‌ಬಾಸ್​ ಮನೆ ಪ್ರವೇಶಿಸಿದ್ದರು. ಇನ್ನು ಈ ವಾರ ಕ್ಯಾಪ್ಟನ್ ರಾಜು ತಾಳಿಕೋಟೆ ಒಬ್ಬರೇ ಸೇಫ್ ಆಗಿದ್ದಾರೆ.8ನೇ ವಾರದ ಎಲಿಮಿನೇಷನ್​ನಲ್ಲಿ ಕಾಣಿಸಿಕೊಂಡಿರುವ ಸ್ಪರ್ಧಿ ರಕ್ಷಾ ಹಾಗೂ ಚೈತ್ರಾ ಅತೀ ಕಡಿಮೆ ವೋಟ್ ಪಡೆದಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿವೆ. ಕಡಿಮೆ ವೋಟ್ ಪಡೆದಿರುವ 12 ಸ್ಪರ್ಧಿಗಳಲ್ಲಿ ಹರೀಶ್ ರಾಜ್ ಮೂರನೇ ಸ್ಥಾನ ಪಡೆದಿದ್ದಾರಂತೆ. ಹೀಗಾಗಿ ಈ ಮೂವರ ಒಟ್ಟಾರೆ ಪರ್ಫಾಮೆನ್ಸ್ ಗಮನಿಸಿದರೆ ರಕ್ಷಾ ಸೋಮಶೇಖರ್ ಅಪಾಯದ ವಲಯದಲ್ಲಿದ್ದಾರೆ ಎನ್ನಲಾಗಿದೆ. ಹಾಗಾಗಿ ಮನೆಯಿಂದ ಈ ವಾರ ರಕ್ಷಾ ಹೊರಬೀಳುವುದು ಪಕ್ಕಾ ಎನ್ನಲಾಗುತ್ತಿದೆ. 2 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಕಳೆದಿರುವ ರಕ್ಷಾ ಜರ್ನಿ ಭಾನುವಾರ ಅಂತ್ಯವಾಗಲಿದೆ ಎಂದು ಹೇಳಲಾಗುತ್ತಿದೆ.

ABOUT THE AUTHOR

...view details