ಸಲ್ಮಾನ್ ಖಾನ್ ಹೆಸರು ಬಳಸಿಕೊಂಡು ಬರೋಬ್ಬರಿ 12 ಲಕ್ಷ ಹಣ ವಂಚಿಸಿರುವ ಘಟನೆ ರಾಜಸ್ಥಾನದ ಜೋಧ್ ಪುರದಲ್ಲಿ ನಡೆದಿದೆ.
ಇಲ್ಲಿನ ಸಂತೋಷ ಭಾಟಿ ಎಂಬುವವರಿಗೆ ಮೂರ ಜನ ಆರೋಪಿಗಳು ನಮ್ಮ ಬಳಿ ಸಲ್ಮಾನ್ ಖಾನ್ ಕುದುರೆ ಇದೆ. ಅದನ್ನು ಮಾರಾಟ ಮಾಡಲು ಹೊರಟಿದ್ದೇವೆ. ನೀವು ಅದನ್ನು ಕೊಂಡರೆ ಒಳ್ಳೆಯ ಲಾಭ ಮಾಡಬಹುದು ಎಂದು ನಂಬಿಸಿ ಮಹಿಳೆಗೆ ಮೋಸ ಮಾಡಿದ್ದಾರೆ.
ಈ ಬಗ್ಗೆ ಸಂತೋಷ ಭಾಟಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಆದ್ರೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿನ್ನೆಲೆಯಲ್ಲಿ ರಾಜಸ್ಥಾನ ಹೈಕೋರ್ಟ್ಗೆ ಮಹಿಳೆ ಮೊರೆ ಹೋಗಿದ್ದಾರೆ. ಈ ಸಂಬಧ ನಿನ್ನೆ ವಿಚಾರಣೆ ನಡೆದಿದೆ.