ಕರ್ನಾಟಕ

karnataka

ETV Bharat / sitara

ಜಾಮೀನು ಸಿಕ್ಕರೂ ರಾಗಿಣಿಗಿಲ್ಲ ಇಂದು ಬಿಡುಗಡೆ ಭಾಗ್ಯ! - actress Ragini has no release today

ರಾಗಿಣಿ ದ್ವಿವೇದಿಗೆ ಜಾಮೀನು ಸಿಕ್ಕಿದ್ದು, ಈ ಮೂಲಕ ಬರೋಬ್ಬರಿ 140 ದಿನಗಳ ಜೈಲುವಾಸ ಅಂತ್ಯವಾಗಿದೆ. ಆದ್ರೆ ಜಾಮೀನು ಸಿಕ್ಕಿದ್ದರೂ ಇಂದು ಜೈಲಿನಿಂದ ರಾಗಿಣಿಗೆ ಬಿಡುಗಡೆ ಭಾಗ್ಯ ಇಲ್ಲವಾಗಿದೆ.

ಜಾಮೀನು ಸಿಕ್ಕರೂ ರಾಗಿಣಿಗಿಲ್ಲ ಇಂದು ಬಿಡುಗಡೆ ಭಾಗ್ಯ!
ಜಾಮೀನು ಸಿಕ್ಕರೂ ರಾಗಿಣಿಗಿಲ್ಲ ಇಂದು ಬಿಡುಗಡೆ ಭಾಗ್ಯ!

By

Published : Jan 21, 2021, 9:15 PM IST

ಸುಪ್ರೀಂ ಕೋರ್ಟ್​​ ನಟಿ ರಾಗಿಣಿ ದ್ವಿವೇದಿಗೆ ಜಾಮೀನು ನೀಡಿದ್ದು, ಈ ಮೂಲಕ ಬರೋಬ್ಬರಿ 140 ದಿನಗಳ ಜೈಲುವಾಸ ಅಂತ್ಯವಾಗಿದೆ. ಆದ್ರೆ ಜಾಮೀನು ಸಿಕ್ಕಿದ್ದರೂ ಇಂದು ಜೈಲಿನಿಂದ ರಾಗಿಣಿಗೆ ಬಿಡುಗಡೆ ಭಾಗ್ಯ ಇಲ್ಲವಾಗಿದೆ.

ಹೌದು, ಸುಪ್ರೀಂ ಕೋರ್ಟ್​​ ಜಾಮೀನು ಆದೇಶದ ಪ್ರತಿಯನ್ನು ಪಡೆದು ನಂತರದ ಪ್ರಕ್ರಿಯೆ ನಡೆಯುವುದಕ್ಕೆ ಕಾಲಾವಕಾಶದ ಅಗತ್ಯವಿದೆ. ಹಾಗಾಗಿ ಇಂದು ನಟಿಗೆ ಬಿಡುಗಡೆ ಇಲ್ಲವಾಗಿದೆ.

ಜೈಲಿನಿಂದ ಯಾರೇ ಬಿಡುಗಡೆಯಾದ್ರೂ ಕೋರ್ಟ್​​ ನೀಡುವ ಆದೇಶ ಪ್ರತಿ ಕಡ್ಡಾಯವಾಗಿರುತ್ತೆ. ಆದೇಶದ ದೃಢೀಕೃತ ಪ್ರತಿ ಹಾಜರುಪಡಿಸಿದ ನಂತರವೇ ಬಿಡುಗಡೆ ಮಾಡಲಾಗುತ್ತದೆ. ಹಾಗಾಗಿ ರಾಗಿಣಿಗೂ ಕೂಡ ಸುಪ್ರೀಂ ಕೋರ್ಟ್​ನಲ್ಲಿ ಪ್ರತಿ ಪಡೆದ ನಂತ್ರ ಬಿಡುಗಡೆ ಮಾಡಲಾಗುತ್ತದೆ. ಇದ್ರಿಂದಾಗಿ ಕೋರ್ಟ್ ಷರತ್ತುಗಳನ್ನು ಪೂರ್ಣಗೊಳಿಸಿದ ಬಳಿಕ ನಾಳೆ ಜೈಲಿನಿಂದ ರಾಗಿಣಿ ಬಿಡುಗಡೆ ಸಾಧ್ಯತೆಯಿದೆ.

ABOUT THE AUTHOR

...view details