ಕರ್ನಾಟಕ

karnataka

ETV Bharat / sitara

ಯಲಹಂಕ ಅಪಾರ್ಟ್​ಮೆಂಟ್​ ಮಾರಿ ತವರಿನತ್ತ ಹೊರಟಿದೆಯಾ ರಾಗಿಣಿ ಕುಟುಂಬ?

ರಾಗಿಣಿ ದ್ವಿವೇದಿ ಹೋಳಿ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ. ಆದರೆ, ಈ ಸಿನಿಮಾ ರಾಗಿಣಿಗೆ ಹೆಸರು ತಂದು ಕೊಟ್ಟಿಲ್ಲ. ಆದರೆ, ಸುದೀಪ್ ನಟಿಸಿ ನಿರ್ದೇಶಿಸಿದ್ದ ವೀರ ಮದಕರಿ ಸಿನಿಮಾದಲ್ಲಿ ಕಿಚ್ಚನ ಜತೆ ಅಭಿನಯಿಸಿದ ರಾಗಿಣಿ ಸ್ಯಾಂಡಲ್​ವುಡ್​ನಲ್ಲಿ ಸ್ಟಾರ್​ ಪಟ್ಟ ಪಡೆದರು..

ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ

By

Published : Sep 15, 2020, 4:35 PM IST

Updated : Sep 15, 2020, 4:44 PM IST

ಬೆಂಗಳೂರು :ಡ್ರಗ್ಸ್ ನಂಟಿನ ಆರೋಪ ಹಿನ್ನೆಲೆ ನಟಿ ರಾಗಿಣಿ ಜೈಲುವಾಸ ಅನುಭವಿಸುತ್ತಿದ್ದಾರೆ. ಈ ಡ್ರಗ್ಸ್ ಜಾಲದ ಬೆಳವಣಿಗೆಗಳಿಂದ ರಾಗಿಣಿ ದ್ವಿವೇದಿ ಸಿನಿಮಾ ಕರಿಯರ್ ಅಂತ್ಯವಾಗುತ್ತಾ ಎಂಬ ಅನುಮಾನ ಮೂಡುತ್ತಿದೆ.

ಸದ್ಯ ಸಿಸಿಬಿ ಅಧಿಕಾರಿಗಳು ಡ್ರಗ್ಸ್ ಜಾಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ರಾಗಿಣಿ ದ್ವಿವೇದಿ ಸಿನಿಮಾ ಕರಿಯರ್ ಮುಗಿಯುವ ಲಕ್ಷಣಗಳು ಕಾಣಿಸುತ್ತಿದೆ. ಪಂಜಾಬಿ ಬೆಡಗಿ ರಾಗಿಣಿ ದ್ವಿವೇದಿ ಫ್ಯಾಷನ್ ಗುರು ಬಿದ್ದಪ್ಪ ಆಯೋಜಿಸುತ್ತಿದ್ದ ಫ್ಯಾಷನ್ ಶೋ ಮೂಲಕ ಗುರುತಿಸಲ್ಪಟ್ಟಿದ್ದರು. 2008ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಮೂಲಕ ಗ್ಲಾಮರ್ ಜಗತ್ತಿನಲ್ಲಿ ಕಾಣಿಸಿಕೊಳ್ಳುತ್ತಾರೆ.

ರಾಗಿಣಿ ದ್ವಿವೇದಿ ಹೋಳಿ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ. ಆದರೆ, ಈ ಸಿನಿಮಾ ರಾಗಿಣಿಗೆ ಹೆಸರು ತಂದು ಕೊಟ್ಟಿಲ್ಲ. ಸುದೀಪ್ ನಟಿಸಿ ನಿರ್ದೇಶಿಸಿದ್ದ ವೀರ ಮದಕರಿ ಸಿನಿಮಾದಲ್ಲಿ ಕಿಚ್ಚನ ಜೊತೆ ಅಭಿನಯಿಸಿದ್ದ ರಾಗಿಣಿ ಸ್ಯಾಂಡಲ್​ವುಡ್​ನಲ್ಲಿ ಸ್ಟಾರ್​ ಪಟ್ಟ ಪಡೆದರು. ಈ ಸಿನಿಮಾ ಬಳಿಕ ಶಂಕರ್ ಐಪಿಎಸ್, ಗಂಡೆದೆ, ನಾಯಕ ಸಿನಿಮಾಗಳಲ್ಲಿ ರಾಗಿಣಿ ನಟಿಸಿದ್ದಾರೆ. ಆದರೆ, ಈ ಸಿನಿಮಾಗಳು ರಾಗಿಣಿಗೆ ಯಶಸ್ಸು ತಂದುಕೊಟ್ಟಿಲ್ಲ. ಮತ್ತೆ ಸುದೀಪ್​ ಜತೆಗೆ ಕೆಂಪೇಗೌಡ ಸಿನಿಮಾದಲ್ಲಿ ನಟಿಸಿ ಜನಮನ್ನಣೆ ಗಳಿಸಿದ್ದರು.

ಅಲ್ಲಿಂದ ಕಳ್ಳ ಮಳ್ಳ ಸುಳ್ಳ ಚಿತ್ರದ ತುಪ್ಪ ಬೇಕಾ ತುಪ್ಪ ಹಾಡು, ರಾಗಿಣಿ ದ್ವಿವೇದಿಯನ್ನ ತುಪ್ಪದ ಬೆಡಗಿ ಎಂದು ಬ್ರಾಂಡ್ ಮಾಡಿತ್ತು. ಶಿವರಾಜ್‌ಕುಮಾರ್ ಜೊತೆಗೆ ಶಿವ, ಉಪೇಂದ್ರ ಜೊತೆಗೆ ಆರಕ್ಷಕ ಚಿತ್ರದಲ್ಲಿ ಅಭಿನಯಿಸಿ, ಕಡಿಮೆ ಟೈಮ್​ನಲ್ಲಿ ಸ್ಟಾರ್ ನಟರ ಜೊತೆ ನಟಿಸಿದ ಲಕ್ಕಿ ಹೀರೋಯಿನ್ ಅಂತಾ ಕರೆಯಿಸಿಕೊಂಡ್ರು.

ಇದರ ಜೊತೆಗೆ ಮಹಿಳಾ ಪ್ರಧಾನ ಸಿನಿಮಾಗಳಿಗೆ ಬ್ರಾಂಡ್ ಆಗಿದ್ದಾರೆ. ರಾಗಿಣಿ ಐಪಿಎಸ್, ವೀರ ರಣಚಂಡಿ, ನಮಸ್ತೆ ಮೇಡಂ, ಎಂಎಂಸಿಹೆಚ್, ದಿ ಟೆರರಿಸ್ಟ್ ಹೀಗೆ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಸೇರಿ ಸುಮಾರು 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುವ ಮೂಲಕ, ಕನ್ನಡ ಚಿತ್ರರಂಗದಲ್ಲಿ ಒಂದು ದಶಕ ಪೂರೈಸಿದ್ದಾರೆ. ಇಷ್ಟೆಲ್ಲಾ ನೇಮ್ ಫೇಮ್ ಹೊಂದಿದ್ದ ರಾಗಿಣಿ ದ್ವಿವೇದಿ ಸಿನಿಮಾ ಕರಿಯರ್ ಮೇಲೆ ಈಗ ಮೋಡ ಕವಿದ ವಾತಾವರಣವಿದೆ.

ಯಾಕೆಂದರೆ, ಡ್ರಗ್ಸ್ ಜಾಲದ ಸುಳಿಯಲ್ಲಿ ಸಿಲುಕಿರುವ ರಾಗಿಣಿ ದ್ವಿವೇದಿ ಆರೋಪ ಸಾಬೀತಾದಲ್ಲಿ 10 ವರ್ಷ ಜೈಲು ಸೆರೆವಾಸ ಅನುಭವಿಸಬೇಕು. ಹೀಗೆ ಇರಬೇಕಾದ್ರೆ, ರಾಗಿಣಿ ತಂದೆ ರಾಕೇಶ್‌ಕುಮಾರ್ ಯಲಹಂಕದಲ್ಲಿರುವ ಅನನ್ಯ ಅಪಾರ್ಟ್​ಮೆಂಟ್​ನಲ್ಲಿರುವ ತಮ್ಮ ಪ್ಲಾಟ್‌ನ ₹2 ಕೋಟಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ.

ಸದ್ಯ ರಾಗಿಣಿ ಗಾಂಧಿಗಿರಿ ಸಿನಿಮಾ ಬಿಟ್ಟರೆ ಯಾವ ಸಿನಿಮಾವನ್ನ ಒಪ್ಪಿಕೊಂಡಿಲ್ಲ. ಈ ಕಾರಣಕ್ಕೆ ರಾಗಿಣಿ ತಂದೆ ತಮ್ಮ ಊರಿಗೆ ಹೋಗುವ ನಿರ್ಧಾರ ಮಾಡಿದ್ದಾರೆ ಎಂಬ ಮಾತು ಸ್ಯಾಂಡಲ್​ವುಡ್​ನಲ್ಲಿ ಕೇಳಿ ಬರುತ್ತಿದೆ. ಜೈಲಿನಲ್ಲಿರುವ ಮಗಳು ರಾಗಿಣಿಯನ್ನ ಹೊರಗಡೆ ಕರೆತರಲು ತಂದೆ ರಾಕೇಶ್ ಕುಮಾರ್ ಪ್ರಯತ್ನ ಮಾಡುತ್ತಿದ್ದಾರೆ.

Last Updated : Sep 15, 2020, 4:44 PM IST

ABOUT THE AUTHOR

...view details