'ಸೈಕೋ' ಚಿತ್ರದ 'ನಿನ್ನ ಪೂಜೆಗೆ ಬಂದ ಮಾದೇಶ್ವರ' ಹಾಡಿನ ಮೂಲಕ ಖ್ಯಾತರಾದ ರಘು ದೀಕ್ಷಿತ್ ತಮ್ಮ ವಿಭಿನ್ನ ಗಾಯನದ ಮೂಲಕ ಸಾಕಷ್ಟು ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಹೊಸ ತಲೆಮಾರಿನ ವಿಶಿಷ್ಟ ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಯುವಜನತೆಗೆ ಬಹಳ ಅಚ್ಚುಮೆಚ್ಚು.
ಆ ಹಾಡು ಹಾಡಿದ್ದಕ್ಕೆ ಅಭಿಮಾನಿಗಳು ಬೇಸರಗೊಂಡಿದ್ದರು: ರಘು ದೀಕ್ಷಿತ್
ಕೆಲವೊಮ್ಮೆ ಇಷ್ಟವಿಲ್ಲದಿದ್ದರೂ ಕೆಲವೊಂದು ಹಾಡುಗಳನ್ನು ಹಾಡುವ ಸಂಧರ್ಭ ಬರುತ್ತದೆ. 'ರುಸ್ತುಂ' ಸಿನಿಮಾದ ಹಾಡು ಹಾಡುವಾಗ ನನಗೆ ಅದೇ ಅನುಭವವಾಯಿತು. 'ಯುಆರ್ ಮೈ ಪೊಲೀಸ್ ಬೇಬಿ' ಹಾಡು ಹಾಡಿದಾಗ ಅಭಿಮಾನಿಗಳು ನನ್ನ ಮೇಲೆ ಬೇಸರ ಮಾಡಿಕೊಂಡಿದ್ದರು ಎಂದು ರಘು ದೀಕ್ಷಿತ್ ಹೇಳಿಕೊಂಡಿದ್ದಾರೆ.
'ಲವ್ ಮಾಕ್ಟೈಲ್' ಚಿತ್ರದ ಸಕ್ಸಸ್ ಖುಷಿಯಲ್ಲಿರುವ ರಘು ದೀಕ್ಷಿತ್ ಇದೀಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಜಾನಪದ ಶೈಲಿಯ ಹಾಡುಗಳಿಂದ ಮಾತ್ರವಲ್ಲದೆ ಪಾಶ್ಚಾತ್ಯ ಶೈಲಿಯ ಹಾಡುಗಳಿಗೂ ಕೂಡಾ ಅವರು ಫೇಮಸ್. 'ನಿನ್ನ ಸನಿಹಕೆ' ಚಿತ್ರಕ್ಕೆ ಕೂಡಾ ರಘು ದೀಕ್ಷಿತ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ನಿನ್ನೆ ಈ ಚಿತ್ರದ ಪತ್ರಿಕಾಗೋಷ್ಠಿ ವೇಳೆ ಅವರು ಒಂದು ವಿಚಾರವನ್ನು ಹಂಚಿಕೊಂಡಿದ್ದಾರೆ. ಕೆಲವೊಮ್ಮೆ ಇಷ್ಟವಿಲ್ಲದಿದ್ದರೂ ಕೆಲವೊಂದು ಹಾಡುಗಳನ್ನು ಹಾಡುವ ಸಂಧರ್ಭ ಬರುತ್ತದೆ. 'ರುಸ್ತುಂ' ಸಿನಿಮಾದ ಹಾಡು ಹಾಡುವಾಗ ನನಗೆ ಅದೇ ಅನುಭವವಾಯಿತು. 'ಯುಆರ್ ಮೈ ಪೊಲೀಸ್ ಬೇಬಿ' ಹಾಡು ಹಾಡಿದಾಗ ಅಭಿಮಾನಿಗಳು ನನ್ನ ಮೇಲೆ ಬೇಸರ ಮಾಡಿಕೊಂಡಿದ್ದರು. ಸಂತ ಶಿಶುನಾಳರ ಪದಗಳನ್ನು ಹಾಡುವ ನೀವು ಈ ರೀತಿಯ ಹಾಡುಗಳನ್ನು ಹಾಡಬಾರದಿತ್ತು ಎಂದು ಅಭಿಮಾನಿಗಳು ಪ್ರಶ್ನಿಸಿದ್ದರು ಎಂದು ರಘು ದೀಕ್ಷಿತ್ ಹೇಳಿಕೊಂಡಿದ್ದಾರೆ. ನಿರ್ದೇಶಕ ಎ.ಪಿ. ಅರ್ಜುನ್ ಈ ಹಾಡಿನ ಸಾಹಿತ್ಯ ಬರೆದಿದ್ದು ಅನೂಪ್ ಸೀಳಿನ್ ಹಾಡಿನ ಸಂಗೀತ ನಿರ್ದೇಶನ ಮಾಡಿದ್ದರು. ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ಹೇಳುವ ಮೂಲಕ ಇತ್ತೀಚಿನ ದಿನಗಳಲ್ಲಿ ಒಳ್ಳೆ ಸಾಹಿತ್ಯಗಳು ಹೊರ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.